ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್‌ ಪದಕ ಮಾರಾಟ ಮಾಡಿ ಮಗುವಿನ ಶಸ್ತ್ರಚಿಕಿತ್ಸೆಗೆ ನೆರವಾದ ಮಹಿಳಾ ಕ್ರೀಡಾಪಟು - ಮಾರಿಯಾ ಆಂಡ್ರೆಜ್ಜಿಕ್

ಟೋಕಿಯೊ ಒಲಿಂಪಿಕ್ಸ್‌ ಮಹಿಳೆಯರ ಜಾವೆಲಿನ್ ಥ್ರೋ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವ ಪೋಲೆಂಡ್‌ ದೇಶದ ಸ್ಪರ್ಧಿ ಮಾರಿಯಾ ಆಂಡ್ರೆಜ್ಜಿಕ್ ಅವರು ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ಪದಕ ಮಾರಿ ಧನಸಹಾಯ ಮಾಡಲು ಮುಂದಾಗಿದ್ದಾರೆ.

ಮಾರಿಯಾ ಆಂಡ್ರೆಜ್ಜಿಕ್
ಮಾರಿಯಾ ಆಂಡ್ರೆಜ್ಜಿಕ್

By

Published : Aug 19, 2021, 10:34 AM IST

ನವದೆಹಲಿ: ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಲು ಕ್ರೀಡಾಪಟುಗಳು ಕಠಿಣ ಪರಿಶ್ರಮ ಮತ್ತು ಲೆಕ್ಕವಿಲ್ಲದಷ್ಟು ತ್ಯಾಗ ಮಾಡಬೇಕಾಗುತ್ತದೆ. ಪೋಲೆಂಡ್‌ ದೇಶದ ಮಹಿಳಾ ಕ್ರೀಡಾಪಟು ಮಾರಿಯಾ ಆಂಡ್ರೆಜ್ಜಿಕ್ ಇತ್ತೀಚೆಗೆ ಟೋಕಿಯೋದಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದರು. ಇದೀಗ ಮಾನವೀಯ ಕೆಲಸದ ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಹೌದು, ಟೋಕಿಯೊ ಒಲಿಂಪಿಕ್ಸ್‌ ಮಹಿಳಾ ಜಾವೆಲಿನ್ ಥ್ರೋ ವಿಭಾಗದಲ್ಲಿ ಮಾರಿಯಾ ಆಂಡ್ರೆಜ್ಜಿಕ್ 64.61 ಮೀಟರ್ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಇದೀಗ ಅವರು, ತಾವು ಪಡೆದ ಈ ಬಹುಮಾನವನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಕುರಿತು ಇನ್ಸ್ಟಾಗ್ರಾಮ್​ನಲ್ಲಿ ಮಾಹಿತಿ ನೀಡಿದ್ದಾರೆ.

25 ವರ್ಷದ ಮಾರಿಯಾ ಎಂಟು ತಿಂಗಳ ಮಗುವಿನ ಹೃದಯ ಶಸ್ತ್ರಚಿಕಿತ್ಸೆಗಾಗಿ ತಮ್ಮ ಬೆಳ್ಳಿ ಪದಕವನ್ನು ಹರಾಜು ಹಾಕಿದ್ದಾರೆ. ಈ ಕುರಿತು ಸ್ವತಃ ಮಾರಿಯಾ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ಧನಸಹಾಯ ಮಾಡಲು ಬಯಸಿರುವುದಾಗಿ ಹೇಳಿದ್ದಾರೆ.

ಪೋಲಿಷ್ ಸೂಪರ್​ ಮಾರ್ಕೆಟ್ ಚೈನ್​ ಝಾಬ್ಕ ಎಂಬ ಸಂಸ್ಥೆ ಮಾರಿಯಾ ಆಂಡ್ರೆಜ್ಜಿಕ್ ಅವರ ಟೋಕಿಯೊ ಒಲಿಂಪಿಕ್ಸ್ 2020 ಬೆಳ್ಳಿ ಪದಕವನ್ನು 125,000 ಡಾಲರ್ ಮೊತ್ತಕ್ಕೆ ಖರೀದಿಸಿದೆ ಎಂದು ತಿಳಿದು ಬಂದಿದೆ. ಜೊತೆಗೆ ಆ ಮಗುವಿಗೆ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ.

ABOUT THE AUTHOR

...view details