ತಿರುವನಂತರಪುರಂ:ಭಾರತೀಯ ಒಲಿಂಪಿಕ್ ಕಂಚು ವಿಜೇತೆ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಇಂದು ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಒಲಿಂಪಿಕ್ ಕಂಚು ವಿಜೇತೆ ಲವ್ಲೀನಾ - ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಲೊವ್ಲಿನಾ ಬೊರ್ಗೊಹೈನ್
ಭಾರತೀಯ ಒಲಿಂಪಿಕ್ ಕಂಚು ವಿಜೇತೆ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಇಂದು ತಮ್ಮ ಕೋಚ್ ಸಂಧ್ಯಾ ಗುರುಂಗ್ ಅವರ ಜೊತೆ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಒಲಿಂಪಿಕ್ ಕಂಚು ವಿಜೇತೆ ಲೊವ್ಲಿನಾ
ಕೇರಳ ಸಾಂಪ್ರದಾಯಿಕ ಉಡುಪು ಧರಿಸಿ ಕೋಚ್ ಸಂಧ್ಯಾ ಗುರುಂಗ್ ಜೊತೆ ದೇವಸ್ಥಾನಕ್ಕೆ ಭೇಟಿ ನಿಡಿದರು. ಲವ್ಲೀನಾ ಕೇರಳ ವಿಶ್ವವಿದ್ಯಾನಿಲಯದ ಕ್ರೀಡಾ ವಿದ್ಯಾರ್ಥಿವೇತನವನ್ನು ನೀಡಲು ತಿರುವನಂತಪುರಕ್ಕೆ ಆಗಮಿಸಿದ್ದಾರೆ.
ಲವ್ಲೀನಾ 69 ಕೆಜಿ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಸೆಮಿಫೈನಲ್‌ನಲ್ಲಿ ತುರ್ಕಿಯ ಬುಬಾನಾ ಸುರ್ಮೆನೆಲೆ ಎದುರು ಸೋಲು ಅನುಭವಿಸುವ ಮೂಲಕ ಫೈನಲ್ಗೇರುವ ಅವಕಾಶದಿಂದ ವಂಚಿತರಾಗಿದ್ದರು.