ಟೋಕಿಯೊ :ಬಹುನಿರೀಕ್ಷೆಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯರಿಗೆ ಭಾರಿ ನಿರಾಶೆಯಾಗಿದೆ. ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ಬಹುತೇಕ ಆಟಗಾರರು ಸೋತು ಆರಂಭದಲ್ಲೇ ಆಟದಿಂದ ಹೊರ ನಡೆದಿದ್ದಾರೆ. ಇನ್ನೂ ಕೆಲವರು, ಪದಕದ ಹೊಸ್ತಿಲಿಗೆ ಹೋಗಿ ಹಿಂದಿರುಗಿದ್ದಾರೆ. ಸೋತರೂ ಕೆಲ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ದೀಪಿಕಾ ಕುಮಾರಿ ಬಿಲ್ಲುಗಾರಿಕೆಯಲ್ಲಿ ಸೋತರೂ, ಭಾರತೀಯ ಬಿಲ್ಲುಗಾರರ ಪೈಕಿ ಕ್ವಾರ್ಟರ್ಸ್ಗೆ ಎಂಟ್ರಿಯಾದ ಮೊದಲಿಗರಾಗಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೂಲಿ ಕಾರ್ಮಿಕನ ಮಗನಾದ ಪ್ರವೀಣ್ ಜಾಧವ್ ಬಿಲ್ಲುಗಾರಿಕೆಯಲ್ಲಿ ಸಿಲ್ವರ್ ಲೈನ್ ಮಾತ್ರ ಪ್ರವೇಶಿಸಲು ಸಾಧ್ಯವಾಯಿತು. ಆರಂಭದಲ್ಲಿ ಅತನುದಾಸ್, ಮಾಜಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಓಹ್ ಜಿನ್ ಹ್ಯೆಕ್‌ರನ್ನು ಸೋಲಿಸುವ ಮೂಲಕ ಅದ್ಭುತ ಪ್ರದರ್ಶನ ತೋರಿದರು. ಸತತ ಎರಡನೇ ಬಾರಿಗೆ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅವರು ಸೋಲುಂಡಿದ್ದಾರೆ.
ದೀಪಿಕಾ ಕುಮಾರಿ ಮತ್ತು ಅತನುದಾಸ್ ಸತತ ಐದು ಬಾರಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ರೂ, ಈ ಬಾರಿಯ ಒತ್ತಡವನ್ನು ನಿಭಾಯಿಸುವುದಕ್ಕೆ ಅವರಿಂದ ಸಾಧ್ಯವಾಗಲಿಲ್ಲ. ದೀಪಿಕಾ ಕೊರಿಯನ್ ಆನ್ಸ್ಯಾನ್ ವಿರುದ್ಧ ನಡೆದ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದು, ಭಾರತೀಯರಿಗೆ ಭಾರಿ ನಿರಾಶೆಯನ್ನುಂಟು ಮಾಡಿತು.
ಅಭ್ಯಸಿಸದಿರುವುದೇ ಸೋಲಿಗೆ ಕಾರಣ
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ವಿಶ್ವ ಚಾಂಪಿಯನ್ ಡೋಲಾ ಬ್ಯಾನರ್ಜಿ, ದೀಪಿಕಾ ತನ್ನ ಸಹ ಆಟಗಾರರೊಂದಿಗೆ ಅಭ್ಯಾಸ ಮಾಡದೆ ಇರೋದೇ ಅವರ ಸೋಲಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವಳು ಇತರರೊಂದಿಗೆ ಅಭ್ಯಾಸ ಮಾಡಿದ್ದಾಳೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಆಕೆ ಅತನುದಾಸ್ ಬದಲಿಗೆ ಬೇರೆಯವರ ಜತೆ ಬಿಲ್ಲುಗಾರಿಕೆ ಅಭ್ಯಾಸ ಮಾಡಬಹುದಿತ್ತು ಎಂದಿದ್ದಾರೆ.