ಕರ್ನಾಟಕ

karnataka

ETV Bharat / sports

ಮೋದಿ ಜೊತೆಗಿನ ದೂರವಾಣಿ ಸಂಭಾಷಣೆ ವೇಳೆ ಬಿಕ್ಕಿಬಿಕ್ಕಿ ಅತ್ತ ಮಹಿಳಾ ಹಾಕಿ ಪ್ಲೇಯರ್ಸ್​.. ಧೈರ್ಯ ತುಂಬಿದ ನಮೋ!

ಗ್ರೇಟ್​ ಬ್ರಿಟನ್​ ವಿರುದ್ಧದ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದ್ದು, ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂಭಾಷಣೆ ನಡೆಸುತ್ತಿದ್ದ ವೇಳೆ ಕಣ್ಣೀರು ಸುರಿಸಿದ್ದಾರೆ.

Indian Women's hockey
Indian Women's hockey

By

Published : Aug 6, 2021, 3:00 PM IST

Updated : Aug 6, 2021, 3:21 PM IST

ಟೋಕಿಯೋ: ಕಂಚಿನ ಪದಕಕ್ಕಾಗಿ ಗ್ರೇಟ್​ ಬ್ರಿಟನ್​ ವಿರುದ್ಧ ನಡೆದ ಇಂದಿನ ಪಂದ್ಯದ ವೇಳೆ ಭಾರತೀಯ ಮಹಿಳಾ ತಂಡ 4-3 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದೆ. ಆದರೆ, ಮಹಿಳಾ ಮಣಿಗಳ ಕೆಚ್ಚೆದೆಯ ಆಟಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಪಂದ್ಯ ಮುಕ್ತಾಯದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಹಿಳಾ ಹಾಕಿ ತಂಡದ ಸದಸ್ಯರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಈ ವೇಳೆ ಪ್ಲೇಯರ್ಸ್​​​ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ವೇಳೆ ಅವರೆಲ್ಲರಿಗೂ ನಮೋ ಧೈರ್ಯ ತುಂಬಿದ್ದಾರೆ. ಜೊತೆಗೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ನಿಮ್ಮ ಪ್ರದರ್ಶನ ನಿಜಕ್ಕೂ ಅದ್ಭುತ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಕಣ್ಣೀರು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

ಬಿಕ್ಕಿಬಿಕ್ಕಿ ಅತ್ತ ಮಹಿಳಾ ಹಾಕಿ ಪ್ಲೇಯರ್ಸ್​

ಇದನ್ನೂ ಓದಿರಿ: ಸೋತ ನಿರಾಶೆಯಲ್ಲಿ ಭಾರತೀಯರ ಕಣ್ಣೀರು; ಸಂತೈಸಿ amazing opponent ಎಂದು ಬೆನ್ನುತಟ್ಟಿದ ಬ್ರಿಟನ್

ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಕ್ರೀಟಾಪಟುಗಳು ನೀಡಿದ ಅತ್ಯುತ್ತಮ ಪ್ರದರ್ಶನವನ್ನು ನಾವು ಯಾವಾಗಲು ನೆನಪಿಸಿಕೊಳ್ಳುತ್ತೇವೆ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಮ್ಮ ಮಹಿಳಾ ಹಾಕಿ ತಂಡ ಪದಕವನ್ನು ಕಳೆದುಕೊಂಡಿರಬಹುದು, ಆದರೆ, ತಂಡದ ಪ್ರತಿಯೊಬ್ಬ ಸದಸ್ಯರೂ ಗಮನಾರ್ಹ ಧೈರ್ಯ, ಕೌಶಲ್ಯ ಹೊಂದಿದ್ದಾರೆ. ಈ ತಂಡವನ್ನು ಹೊಂದಿರುವುದಕ್ಕೆ ಭಾರತ ಹೆಮ್ಮೆಪಡುತ್ತದೆ ಎಂದಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ತಂಡದ ಕೋಚ್​​ ಜೋರ್ಡ್‌ ಮರಿಜಿನ್​, ಈ ರೀತಿಯ ಪಂದ್ಯವನ್ನ ನಾವು ಕಳೆದ ಎರಡು ವರ್ಷಗಳ ಹಿಂದೆ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಳ್ಳುವಾಗ ಆಡಿದ್ದೆವು. ನಮ್ಮ ತಂಡಕ್ಕೆ ಈ ರೀತಿಯ ಪಂದ್ಯಗಳ ಆಯೋಜನೆ ಮೇಲಿಂದ ಮೇಲೆ ನಡೆಯಬೇಕು. ಅಂತಹ ಸಂದರ್ಭದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂದು ಹೇಳಿದ್ದಾರೆ.

ಪಂದ್ಯ ಮುಗಿಯುತ್ತಿದ್ದಂತೆ ಕೂಡ ಮೈದಾನದಲ್ಲಿ ಭಾರತದ ಮಹಿಳಾ ತಂಡದ ಹಾಕಿ ಪ್ಲೇಯರ್ಸ್​ ಕಣ್ಣೀರು ಹಾಕಿದ್ದರು. ಈ ವೇಳೆ, ಗ್ರೇಟ್​ ಬ್ರಿಟನ್​ ತಂಡದ ಪ್ಲೇಯರ್ಸ್​​ ಧೈರ್ಯ ತುಂಬಿದ್ದರು.

Last Updated : Aug 6, 2021, 3:21 PM IST

ABOUT THE AUTHOR

...view details