ನವದೆಹಲಿ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಸಾಧಕರಿಗೆ ಈಗಾಗಲೇ ಆಯಾ ರಾಜ್ಯಗಳು ಭರ್ಜರಿ ಉಡುಗೊರೆ ನೀಡಿದ್ದು, ಇದರ ಮಧ್ಯೆ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಬಹುಮಾನ ಘೋಷಣೆ ಮಾಡಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಒಟ್ಟು ಏಳು ಪದಕ ಗೆದ್ದಿದ್ದು, ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನ ಸಾಧನೆ ಮಾಡಿದ್ದಾರೆ. ಉಳಿದಂತೆ ಎರಡು ಬೆಳ್ಳಿ ಹಾಗೂ ನಾಲ್ಕು ಕಂಚು ದೇಶದ ಪಾಲಾಗಿವೆ. ಇದೀಗ ಬಿಸಿಸಿಐ ನಗದು ಬಹುಮಾನ ಪ್ರಕಟಿಸಿ, ಟ್ವೀಟ್ ಮಾಡಿದೆ.
ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾಗೆ ಬಿಸಿಸಿಐ 1 ಕೋಟಿ ರೂ. ನಗದು ನೀಡಿದ್ದು, ಉಳಿದಂತೆ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ಚನು ಹಾಗೂ ರವಿ ಕುಮಾರ್ ದಹಿಯಾಗೆ ತಲಾ 50 ಲಕ್ಷ ರೂ. ಹಾಗೂ ಕಂಚಿನ ಪದಕ ಗೆದ್ದಿರುವ ಪಿ.ವಿ. ಸಿಂಧು, ಲವ್ಲಿನಾ ಹಾಗೂ ಬಜರಂಗ್ ಪೂನಿಯಾಗೆ ತಲಾ 25 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದೆ. ಕಂಚಿನ ಪದಕ ಗೆದ್ದಿರುವ ಭಾರತದ ಪುರುಷರ ಹಾಕಿ ತಂಡಕ್ಕೂ ಬಿಸಿಸಿಐ ಬಹುಮಾನ ನೀಡಿದ್ದು, ಒಟ್ಟಿಗೆ 1ಕೋಟಿ 25 ಲಕ್ಷ ರೂ. ನೀಡುವುದಾಗಿ ಹೇಳಿದೆ. ಉಳಿದಂತೆ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಆನಂದ್ ಮಹೀಂದ್ರಾ XUV 700 ಕಾರು ಗಿಪ್ಟ್ ಘೋಷಿಸಿದೆ.
ಇದನ್ನೂ ಓದಿರಿ: ಪಾಣಿಪತ್ to ಟೋಕಿಯೋ.. ಚಿನ್ನದ ಪದಕ ಗೆದ್ದ ರೈತನ ಮಗನ ಸಾಧನೆಯ ಹಾದಿ ಹೀಗಿತ್ತು!