ಕರ್ನಾಟಕ

karnataka

ETV Bharat / sports

ವಿಂಬಲ್ಡನ್​: ಸೆಮಿಫೈನಲ್​ ಪ್ರವೇಶಿಸಿದ ಸೆರೆನಾ ವಿಲಿಯಮ್ಸ್​, ಹಾಲೆಪ್​ - ಸೆರೆನಾ

ಹಾಲಿ ರನ್ನರ್​ ಅಪ್​ ಸೆರೆನಾ ವಿಲಿಯಮ್ಸ್​ ಹಾಗೂ ಕಳೆದ ಬಾರಿಯ​ ಫ್ರೆಂಚ್​ ಓಪನ್​ ಚಾಂಪಿಯನ್​ ಸಿಮೋನ ಹಾಲೆಪ್​ ವಿಂಬಲ್ಡನ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

Wimbledon

By

Published : Jul 10, 2019, 3:13 AM IST

ವಿಂಬಲ್ಡನ್​:ಕಳೆದ ಬಾರಿಯ ವಿಂಬಲ್ಡನ್​ನ ರನ್ನರ್​ ಅಪ್​ ಆಗಿರುವ ಸೆರೆನಾ ವಿಲಿಯಮ್ಸ್​​ ಮಂಗಳವಾರ ನಡೆದ ಮಹಿಳೆಯರ ಕ್ವಾರ್ಟರ್​ ಫೈನಲ್​ನಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

37 ವರ್ಷದ ಅಮೆರಿಕಾದ ಆಟಗಾರ್ತಿ ಸೆರೆನಾ ತಮ್ಮದೇ ದೇಶದ ಆಲಿಸನ್​ ರಿಸ್ಕ್​ ವಿರುದ್ಧ ಕ್ವಾರ್ಟರ್​ ಫೈನಲ್​ನಲ್ಲಿ 6-4, 4-6, 6-3ರ ಸೆಟ್​ಗಳಲ್ಲಿ ಮಣಿಸಿ ದ್ವಿತೀಯ ಆಟಗಾರ್ತಿಯಾಗಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

ಇದಕ್ಕೂ ಮುನ್ನ ನಡೆದ ಕ್ವಾರ್ಟರ್​ ಫೈನಲ್​ನಲ್ಲಿ ರೋಮೆನಿಯಾದ ಸ್ಟಾರ್​ ಟೆನ್ನಿಸ್​ ಪ್ಲೇಯರ್​ ಸಿಮೋನ ಹಾಲೆಪ್​ ಚೀನಾದ ಜಾಂಗ್​ ಶುವಾಯ್​ರನ್ನು 7-6(4) 6-1 ರಲ್ಲಿ ಮಣಿಸಿ ಮೊದಲನೆವರಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮತ್ತೆರಡು ಕ್ವಾರ್ಟರ್​ ಫೈನಲ್​ನಲ್ಲಿ ಜೆಕ್​ ಗಣರಾಜ್ಯದ ಬಾರ್ಬೊರಾ ಸ್ಟ್ರಿಕೋವಾ, ಇಂಗ್ಲೆಂಡ್​ನ ಜೊಹನ್ನಾ ಕೊಂಟಾರನ್ನು 7-6, 6-1ರಲ್ಲೂ, ಉಕ್ರೇನಿಯಾದ ಎಲಿನಾ ಸ್ವಿಟೋಲಿನಾ 7-5, 6-4 ರಲ್ಲಿ ಜೆಕ್​ ಗಣರಾಜ್ಯದ ಕರೋಲಿನಾ ಮುಚೋವಾರನ್ನು ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

ಗುರುವಾರ ನಡೆಯುವ ಸೆಮಿಫೈನಲ್​ ಕದನದಲ್ಲಿ ಸೆರೆನಾ ವಿಲಿಯಮ್ಸ್​ ಜೆಕ್​ ಗಣರಾಜ್ಯದ ಬಾರ್ಬೊರಾ ಸ್ಟ್ರಿಕೋವಾರನ್ನು, ಸಿಮೋನ ಹಾಲೆಪ್ ಉಕ್ರೇನಿಯಾದ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ.

ABOUT THE AUTHOR

...view details