ಕರ್ನಾಟಕ

karnataka

ETV Bharat / sports

ಸೆರೆನಾಳನ್ನ ಹಿಂದಿಕ್ಕಿ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟುವಾದ ಜಪಾನ್​ನ ನವೋಮಿ ಒಸಾಕ

ಟೆನಿಸ್​​​​​ ದಿಗ್ಗಜೆ ಸೆರೆನಾ ವಿಲಿಯಮ್ಸ್​ರನ್ನು ಹಿಂದಿಕ್ಕಿರುವ ಜಪಾನ್​ ಟೆನಿಸ್​​​​​​​​ ಪ್ಲೇಯರ್ ನವೋಮಿ ಒಸಾಕ​ 2020ರಲ್ಲಿ ಅತಿ ಹೆಚ್ಚು ಸಂಪಾದಿಸಿದ ಮಹಿಳಾ ಕ್ರೀಡಾಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಜಪಾನ್​ ಟೆನ್ನಿಸ್​ ಪ್ಲೇಯರ್ ನವೋಮಿ ಒಸಾಕ​
ಜಪಾನ್​ ಟೆನ್ನಿಸ್​ ಪ್ಲೇಯರ್ ನವೋಮಿ ಒಸಾಕ​

By

Published : May 23, 2020, 3:14 PM IST

ಲಂಡನ್​:ಜಪಾನ್​ನ ಟೆನ್ನಿಸ್​ ಆಟಗಾರ್ತಿ ನವೋಮಿ ಒಸಾಕ ಅಮೆರಿಕದ ಸೆರೆನಾ ವಿಲಿಯಮ್ಸ್​ರನ್ನು ಹಿಂದಿಕ್ಕಿ ವಿಶ್ವದಲ್ಲಿ ಅತಿ ಹೆಚ್ಚು ಶ್ರೀಮಂತ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫೋರ್ಬ್ಸ್​ ಮ್ಯಾಗಜೀನ್​ ಪ್ರಕಾರ ಒಸಾಕ ಕಳೆದ 12 ತಿಂಗಳಲ್ಲಿ ಬಹುಮಾನ ಮೊತ್ತ ಹಾಗೂ ಜಾಹೀರಾತುಗಳಿಂದ 37.4 ಮಿಲಿಯನ್​ ಅಮೆರಿಕನ್​ ಡಾಲರ್​ ಸಂಪಾದಿಸುವ ಮೂಲಕ ವಿಲಿಯಮ್ಸ್​ರನ್ನು ಹಿಂದಿಕ್ಕಿದ್ದಾರೆ. ಒಸಾಕಾ ವಿಲಿಯಮ್ಸ್​ಗಿಂತ ಈ 1.4 ಮಿಲಿಯನ್ ಯುಎಸ್​ಡಿ ಹೆಚ್ಚು ಸಂಪಾದಿಸಿದ್ದಾರೆ.

ಸೆರೆನಾ ವಿಲಿಯಮ್ಸ್​

ಇನ್ನು ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸಂಪಾದಿಸಿದ ಮಹಿಳಾ ಕ್ರೀಡಾಪಟು ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ರಷ್ಯಾದ ಮರಿಯಾ ಶರಪೋವಾ 2015ರಲ್ಲಿ 29.7 ಮಿಲಿಯನ್​ ಡಾಲರ್​ ಸಂಪಾದಿಸುವ ಮೂಲಕ ದಾಖಲೆ ಬರೆದಿದ್ದರು.

ಪೋರ್ಬ್ಸ್​ 1990ರಿಂದ ಪ್ರತಿ ವರ್ಷ ಮಹಿಳಾ ಕ್ರೀಡಾಪಟುಗಳ ಆದಾಯವನ್ನು ಟ್ರ್ಯಾಕಿಂಗ್ ಮಾಡುತ್ತಿದೆ. ಇದರಲ್ಲಿ ಪ್ರತಿ ವರ್ಷವೂ ಟೆನಿಸ್​ ಆಟಗಾರ್ತಿಯರೇ ಮೊದಲ ಸ್ಥಾನ ಪಡೆಯುತ್ತಿದ್ದಾರೆ.

ಎರಡು ಬಾರಿಯ ಗ್ರ್ಯಾಂಡ್​ಸ್ಲಾಮ್​ ಚಾಂಪಿಯನ್​ ಆಗಿರುವ ಒಸಾಕ 2020ರ ಅತಿ ಹೆಚ್ಚು ಆದಾಯ ಗಳಿಸಿರುವ ಒಟ್ಟಾರೆ ಪಟ್ಟಿಯಲ್ಲಿ 27 ನೇ ಸ್ಥಾನದಲ್ಲಿದ್ದಾರೆ. ಸೆರೆನಾ ವಿಲಿಯಮ್ಸ್​ 37 ನೇ ಸ್ಥಾನದಲ್ಲಿದ್ದಾರೆ.

ABOUT THE AUTHOR

...view details