ಕರ್ನಾಟಕ

karnataka

ETV Bharat / sports

ಫ್ರೆಂಚ್​ ಓಪನ್​ 2020.. ಸೆರೆನಾರ ವಿಶ್ವದಾಖಲೆಯ ಗ್ರ್ಯಾಂಡ್​ಸ್ಲಾಮ್ ಗೆಲ್ಲುವ​ ಕನಸು ಭಗ್ನ

ಸೆರೆನಾ ವಿಲಿಯಮ್ಸ್​ ಅಕಿಲ್ಸ್​ ಇಂಜುರಿ(ಹಿಮ್ಮಡಿ ಸ್ನಾಯುಸೆಳೆತ)ಗೆ ಒಳಗಾಗಿದ್ದು ರೋಲ್ಯಾಂಡ್​(ಫ್ರೆಂಚ್ ಓಪನ್)ನಿಂದ ಹಿಂದೆ ಸರಿದಿದ್ದಾರೆ" ಎಂದು ಫ್ರೆಂಚ್​ ಓಪನ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಖಚಿತಪಡಿಸಿದೆ..

ಫ್ರೆಂಚ್​ ಓಪನ್​ 2020
ಸೆರೆನಾ ವಿಲಿಯಮ್ಸ್​

By

Published : Sep 30, 2020, 5:45 PM IST

ಪ್ಯಾರೀಸ್ ​: 23 ಸಲ ಗ್ರ್ಯಾಂಡ್​ಸ್ಲಾಮ್​ ಚಾಂಪಿಯನ್ ಆಗಿರುವ ಅಮೆರಿಕಾದ ಸೆರೆನಾ ವಿಲಿಯಮ್ಸ್​ ಹಿಮ್ಮಡಿ ಗಾಯದ ಕಾರಣ ಫ್ರೆಂಚ್​ ಓಪನ್​ ಚಾಂಪಿಯನ್​ಶಿಪ್​ನಿಂದ ಹೊರ ಬಿದ್ದಿದ್ದಾರೆ. 39 ವರ್ಷದ ಟೆನ್ನಿಸ್​ ತಾರೆ ಬುಧವಾರ 2ನೇ ಸುತ್ತಿನ ಪಂದ್ಯದಲ್ಲಿ ಬಲ್ಗೇರಿಯಾದ ಸ್ವೆಟಾನಾ ಪಿಂಕೋವ ಅವರ ಸವಾಲನ್ನು ಎದುರಿಸಬೇಕಿತ್ತು.

ಸೆರೆನಾ ವಿಲಿಯಮ್ಸ್​

"ಸೆರೆನಾ ವಿಲಿಯಮ್ಸ್​ ಅಕಿಲ್ಸ್​ ಇಂಜುರಿ(ಹಿಮ್ಮಡಿ ಸ್ನಾಯುಸೆಳೆತ)ಗೆ ಒಳಗಾಗಿದ್ದು ರೋಲ್ಯಾಂಡ್​(ಫ್ರೆಂಚ್ ಓಪನ್)ನಿಂದ ಹಿಂದೆ ಸರಿದಿದ್ದಾರೆ" ಎಂದು ಫ್ರೆಂಚ್​ ಓಪನ್​ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಖಚಿತಪಡಿಸಿದೆ.

ಈ ತಿಂಗಳ ಆರಂಭದಲ್ಲಿ ನಡೆದಿದ್ದ ಯುಎಸ್ ಓಪನ್ ಸೆಮಿಫೈನಲ್​ನಲ್ಲಿ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಸೋಲಿನ ಸಂದರ್ಭದಲ್ಲಿ ವಿಲಿಯಮ್ಸ್ ಗಾಯಗೊಂಡಿದ್ದರು. ಈ ಸಮಸ್ಯೆಗೆ ಎರಡು ವಾರಗಳ ವಿಶ್ರಾಂತಿ ಅಗತ್ಯವಿರುತ್ತದೆ ಮತ್ತು ನಂತರ ನಾಲ್ಕರಿಂದ ಆರು ವಾರಗಳ ಪುನರ್ವಸತಿ ಅಗತ್ಯವಿರುತ್ತದೆ ಎಂದು ಸೆರೆನಾ ತಿಳಿಸಿದ್ದರು.

ಫ್ರೆಂಚ್ ಓಪನ್‌ ಗೆದ್ದು ಅತಿ ಹೆಚ್ಚು ಗ್ರ್ಯಾಂಡ್​ ಸ್ಲಾಮ್ ಗೆದ್ದಿರುವ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್​ ಅವರ ದಾಖಲೆ ಸರಿಗಟ್ಟುವ ಆಸೆ ಹೊಂದಿದ್ದ ಸೆರೆನಾಗೆ ಗಾಯ ನಿರಾಶೆ ತಂದಿದೆ. ಮಾರ್ಗರೇಟ್​ 24 ಪ್ರಶಸ್ತಿ ಗೆದ್ದಿದ್ರೆ, ಸೆರೆನಾ 23 ಬಾರಿ ಗ್ರ್ಯಾಂಡ್​ಸ್ಲಾಮ್ ಎತ್ತಿ ಹಿಡಿದಿದ್ದಾರೆ.

ABOUT THE AUTHOR

...view details