ಟುರಿನ್:ಎಟಿಪಿ ಫೈನಲ್ಸ್ಗೆ ಅಂತಿಮ ಅರ್ಹತಾ(ATP Finals semis) ಆಟಗಾರನಾಗಿ 22 ವರ್ಷದ ನಾರ್ವೇಜಿಯನ್ ಕಾಸ್ಪರ್ ರೂಡ್ ಅರ್ಹತೆ ಪಡೆದಿದ್ದಾರೆ. ಈಗಾಗಲೇ ನಂ.1 ಆಟಗಾರ ನೊವಾಕ್ ಜೊಕೊವಿಕ್, ಡೇನಿಯಲ್ ಮೆಡ್ವೆಡೆವ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ಜೊತೆ ನಾರ್ವೇಜಿಯನ್ನ ರೂಡ್ ಎಲೈಟ್ ಸೀಸನ್ ಎಂಡಿಂಗ್ ಈವೆಂಟ್‌ನ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ನಿರ್ಣಾಯಕ ಪಂದ್ಯದಲ್ಲಿ ರೂಡ್ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ಶುಕ್ರವಾರ ತನ್ನ ಅಂತಿಮ ರೌಂಡ್ನಲ್ಲಿ ಆಂಡ್ರೆ ರುಬ್ಲೆವ್ ವಿರುದ್ಧ 2-6, 7-5, 7-6 (5) ಸೆಟ್ಗಳ ಮೂಲಕ ಗೆಲುವು ದಾಖಲಿಸಿದರು. ಈ ಗೆಲುವಿನ ಮೂಲಕ ಕೊನೆಯ ನಾಲ್ಕರಲ್ಲಿ ಅನಿರೀಕ್ಷಿತ ಸ್ಥಾನವನ್ನು ಗಿಟ್ಟಿಸಿಕೊಂಡರು.
ರುಬ್ಲೆವ್ ತಮ್ಮ ಹಿಂದಿನ ನಾಲ್ಕು ಪಂದ್ಯಗಳಲ್ಲಿ ರೂಡ್ ಅವರನ್ನು ಸೋಲಿಸಿದ್ದರು. ಆದ್ರೆ ನಿರ್ಣಾಯಕ ಪಂದ್ಯದಲ್ಲಿ ರೂಡ್ ವಿರುದ್ಧ ಸೋಲನ್ನಪ್ಪಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಪಂದ್ಯದಲ್ಲಿ ಅಂಕ ಪಡೆಯಲು ಸಾಧ್ಯ ಮಾಡಿದ ನನ್ನ ತೋಳುಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಏಕೆಂದರೆ ನಾನು ತುಂಬಾ ನರ್ವಸ್ ಆಗಿದ್ದೆ. ನಾಲ್ಕನೇ ವ್ಯಕ್ತಿಯಾಗಿ ಹೊರ ಹೊಮ್ಮಿದ್ರೂ ಸಹ ನಾನು ವಿಶ್ವದ ನಾಲ್ಕನೇ ಅತ್ಯುತ್ತಮ ಆಟಗಾರ ಎಂದು ಪರಿಗಣಿಸುವುದಿಲ್ಲ ಅಂತಾ ರೂಡ್ ಪಂದ್ಯ ಮುಗಿದ ಬಳಿಕ ಹೇಳಿದರು.
ಅಮೆರಿಕನ್ನರ ಕಾಲಮಾನ ಪ್ರಕಾರ ಇಂದು ಸಂಜೆ 6.30ಕ್ಕೆ U.S. ಓಪನ್ ಚಾಂಪಿಯನ್ ಮತ್ತು ಹಾಲಿ ಚಾಂಪಿಯನ್ ಮೆಡ್ವೆಡೆವ್ರನ್ನು ರೂಡ್ ಎದುರಿಸಲಿದ್ದಾರೆ. ಜೊಕೊವಿಕ್ ಮತ್ತು ಜ್ವೆರೆವ್ ಶನಿವಾರದ ಇನ್ನೊಂದು ಸೆಮಿಫೈನಲ್‌ನಲ್ಲಿ ಎದುರಾಗಲಿದ್ದಾರೆ.