ನವದೆಹಲಿ:ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ 4 ವರ್ಷಗಳ ಬಳಿಕ ಭಾರತ ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್(TOPS) ಗುಂಪಿಗೆ ಬುಧವಾರ ಸೇರಿಕೊಂಡಿದ್ದಾರೆ.
ಸಾನಿಯಾ 56ನೇ ಮಿಷನ್ ಒಲಿಂಪಿಕ್ ಸೆಲ್ನ 56ನೇ ಸಭೆಯಲ್ಲಿ ಟಾಪ್ಸ್ಗೆ ಆಯ್ಕೆಯಾಗಿದ್ದಾರೆ. 34 ವರ್ಷದ 6 ವಿವಿಧ ಗ್ರ್ಯಾಂಡ್ಸ್ಲಾಮ್ ವಿನ್ನರ್ ಆಗಿರುವ ಸಾನಿಯಾ ಮಿರ್ಜಾ 2017ರಲ್ಲಿ ಗಾಯದ ಕಾರಣ ಟಾಪ್ಸ್ನಿಂದ ಹೊರಬಿದ್ದಿದ್ದರು. ತಾಯ್ತನದ ನಂತರ ಮತ್ತೆ ವೃತ್ತಿಪರ ಟೆನಿಸ್ಗೆ ಮರಳಿರುವ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದು, ಟಾಪ್ಸ್ಗೆ ಮರಳಿದ್ದಾರೆ.
"ಹೌದು, ಸಾನಿಯಾ ಅವರನ್ನು ಇತ್ತೀಚಿನ ಟಾಪ್ಸ್ ಪಟ್ಟಿಗೆ ಆಯ್ಕೆ ಮಾಡಲಾಗಿದೆ" ಎಂದು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮೂಲವು ಪಿಟಿಐಗೆ ತಿಳಿಸಿದೆ
ಗರ್ಭಧಾರಣೆಯ ಕಾರಣದಿಂದಾಗಿ ಆಟದಿಂದ ವಿರಾಮ ತೆಗೆದುಕೊಳ್ಳುವ ಮೊದಲು ಸಾನಿಯಾ ತನ್ನ ಸಂರಕ್ಷಿತ ಶ್ರೇಯಾಂಕದ ಆಧಾರದ ಮೇಲೆ ಟೋಕಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಪಡೆದಿದ್ದಾರೆ. ಪ್ರಸ್ತುತ WTA ಶ್ರೇಯಾಂಕದಲ್ಲಿ ಮಿರ್ಜಾ 157ನೇ ಶ್ರೇಯಾಂಕದಲ್ಲಿದ್ದಾರೆ.
WTA ನಿಯಮದ ಪ್ರಕಾರ ದೀರ್ಘಕಾಲದ ಗಾಯ ಅಥವಾ ಪ್ರಗ್ನೆನ್ಸಿ ಕಾರಣದಿಂದ ಆಟದಿಂದ ದೂರ ಉಳಿದರೆ, ಅವರು "ವಿಶೇಷ ಶ್ರೇಯಾಂಕಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದನ್ನು ಸಂರಕ್ಷಿತ ಶ್ರೇಯಾಂಕ ಎಂತಲೂ ಕರೆಯುತ್ತಾರೆ. ಸಾನಿಯಾ 2017ರಲ್ಲಿ ಕೊನೆಯ ಟೂರ್ನಮೆಂಟ್ ಆಡಿದ್ದ ವೇಳೆ ಅವರು 9ನೇ ಶ್ರೆಯಾಂಕದಲ್ಲಿದ್ದರು. ಹಾಗಾಗಿ ಅವರು ವಿಶೇಷ 9ನೇ ಶ್ರೇಯಾಂಕ ಹೊಂದಿರುವುದರಿಂದ ಟೋಕಿಯೋ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದುಕೊಂಡಿದ್ದಾರೆ.
ಇದನ್ನು ಓದಿ: ಸಾಮ್ಸನ್ ನಾಯಕತ್ವ, ಲೆಜೆಂಡರಿ ಸಂಗಾಕ್ಕರ ಮಾರ್ಗದರ್ಶನ: 2ನೇ ಕಪ್ ಮೇಲೆ ಕಣ್ಣಿಟ್ಟಿರುವ ರಾಜಸ್ಥಾನದ ಬಲಾಬಲ ಹೀಗಿದೆ