ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್‌: ಭಾರತದ ಗೆಲುವಿಗೆ 133 ರನ್‌ ಗುರಿ ನೀಡಿದ ನಮೀಬಿಯಾ - ಟೀಂ ಇಂಡಿಯಾ

ದುಬೈನಲ್ಲಿ ನಡೆಯುತ್ತಿರುವ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವಿಗೆ 133ರನ್‌ಗಳ ಗುರಿ ಪಡೆದಿದೆ. ನಿಗದಿತ 20 ಓವರ್‌ಗಳಲ್ಲಿ ನಮೀಬಿಯಾ 8 ವಿಕೆಟ್‌ ನಷ್ಟಕ್ಕೆ 132 ರನ್‌ಗಳಿಸಿದೆ.

T20 WC, India vs Namibia: India to chase 133 after Namibia finish at 132/8 in 20 overs
ಐಸಿಸಿ ಟಿ-20 ವಿಶ್ವಕಪ್‌: ಭಾರತದ ಗೆಲುವಿಗೆ 133ರನ್‌ಗಳ ಗುರಿ

By

Published : Nov 8, 2021, 9:54 PM IST

ದುಬೈ: ಐಸಿಸಿ ಟಿ20 ವಿಶ್ವಕಪ್‌ ಸೂಪರ್‌ 12 ಹಂತದ ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಭಾರತ 133 ರನ್ ಗಳ ಗುರಿ ಪಡೆದಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ್ದ ಎರಾಸ್ಮಸ್ ಪಡೆ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 132 ರನ್‌ಗಳಿಸಿತು. ಆರಂಭಿಕರಾದ ಸ್ಟೀಫನ್ ಬಾರ್ಡ್, ಮೈಕೆಲ್ ವ್ಯಾನ್ ಲಿಂಗೆನ್ ಮೊದಲ ವಿಕೆಟ್‌ಗೆ 33 ರನ್‌ಗಳ ಜೊತೆಯಾಟ ನೀಡಿ ಬಲಿಷ್ಠ ಟೀಂ ಇಂಡಿಯಾವನ್ನು ದಿಟ್ಟವಾಗಿ ಎದುರಿಸಿದರು.

ಐದನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಜಸ್‌ಪ್ರಿತ್‌ ಬೂಮ್ರಾ ಅವರ 4ನೇ ಎಸೆತದಲ್ಲಿ ಲಿಂಗೆನ್‌(14) ಶಮಿಗೆ ಕ್ಯಾಚ್‌ ನೀಡಿ ನಿರ್ಮಿಸಿದರು. ಬಳಿಕ ಬಂದ ಕ್ರೇಗ್ ವಿಲಿಯಮ್ಸ್ ನಾಲ್ಕು ಎಸೆತಗಳನ್ನು ಎದುರಿಸಿ ಒಂದು ರನ್‌ ಗಳಿಸದೆ ಜಡೇಜಾ ಬೌಲಿಂಗ್‌ನಲ್ಲಿ ರಿಷಭ್ ಪಂತ್ ಸ್ಟಂಪಿಂಗ್‌ ಬಲೆಗೆ ಬಿದ್ದರು. ಬಳಿಕ 8ನೇ ಓವರ್‌ನ 4ನೇ ಎಸೆತದಲ್ಲಿ ಆರಂಭಿಕ ಬಾರ್ಡ್‌ (21) ಅವರನ್ನು ಜಡೇಜಾ ಎಲ್‌ಬಿಡಬ್ಲ್ಯೂ ಮೂಲಕ ಔಟ್‌ ಮಾಡಿದರು.

ನಾಯಕ ಎರಾಸ್ಮಸ್ 20 ಎಸೆತಗಳಿಂದ 12 ರನ್‌ ಗಳಿಸಿದರು. ಲೋಫ್ಟಿ-ಈಟನ್ (5), ಡೇವಿಡ್ ವೀಸ್ (26), ಜೆ.ಜೆ ಸ್ಮಿತ್ (9), ಝೇನ್ ಗ್ರೀನ್ ಶೂನ್ಯಕ್ಕೆ ಔಟಾದರು. ಜಾನ್ ಫ್ರಿಲಿಂಕ್ (15) ಹಾಗೂ ರೂಬೆನ್ ಟ್ರಂಪೆಲ್ಮನ್ ಔಟಾಗದೆ 13ರನ್‌ ಗಳಿಸಿದರು. ಭಾರತದ ಪರ ಅಶ್ವಿನ್‌ ಹಾಗೂ ಜಡೇಜಾ ತಲಾ 3 ವಿಕೆಟ್ ಪಡೆದರೆ, ಬೂಮ್ರಾ 2 ವಿಕೆಟ್‌ ಉರುಳಿಸಿದರು.

ABOUT THE AUTHOR

...view details