ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್​ನಲ್ಲಿಂದು ಇಂಗ್ಲೆಂಡ್​ ವರ್ಸಸ್​ ಬಾಂಗ್ಲಾ, ಸ್ಕಾಟ್ಲೆಂಡ್​​-ನಮೀಬಿಯಾ ಫೈಟ್​

ಟಿ-20 ವಿಶ್ವಕಪ್​​ನಲ್ಲಿಂದು ಎರಡು ಪಂದ್ಯಗಳು ನಡೆಯಲಿದ್ದು, ಬಲಿಷ್ಠ ಇಂಗ್ಲೆಂಡ್ ತಂಡ ಬಾಂಗ್ಲಾ ವಿರುದ್ಧ ಸೆಣಸಾಟ ನಡೆಸಿದರೆ, ಸ್ಕಾಟ್ಲೆಂಡ್​-ನಮೀಬಿಯಾ ಮತ್ತೊಂದು ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ICC T20 World cup
ICC T20 World cup

By

Published : Oct 27, 2021, 4:09 AM IST

ದುಬೈ: ಐಸಿಸಿ ಟಿ-20 ವಿಶ್ವಕಪ್​​ನ ಸೂಪರ್​​-12 ಗ್ರೂಪ್​ 1ರಲ್ಲಿಂದು ಬಲಿಷ್ಠ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ಸೆಣಸಾಟ ನಡೆಸಲಿದೆ. ಐಸಿಸಿ ಟಿ-20 ವಿಶ್ವಕಪ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವ ಕಾರಣ ಕುತೂಹಲ ಮೂಡಿಸಿದೆ.

ಅಬುಧಾಬಿ ಮೈದಾನದಲ್ಲಿ ಮಧ್ಯಾಹ್ನ 3:30ಕ್ಕೆ ಉಭಯ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ತಂಡ ಈಗಾಗಲೇ ಹಾಲಿ ಚಾಂಪಿಯನ್​ ವೆಸ್ಟ್​ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿಕೊಂಡು ಉತ್ತಮ ಲಯದಲ್ಲಿದ್ದರೆ, ಬಾಂಗ್ಲಾ ತಾನು ಶ್ರೀಲಂಕಾ ವಿರುದ್ಧ ಆಡಿರುವ ಪಂದ್ಯದಲ್ಲಿ ಸೋಲು ಕಂಡು, ನಿರಾಸೆಗೊಳಗಾಗಿದೆ.

ಸೆಮಿಫೈನಲ್​ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದರೆ ಬಾಂಗ್ಲಾ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಹೀಗಾಗಿ ಆರಂಭಿಕ ಬ್ಯಾಟರ್​ಗಳು ರನ್​ ಮಳೆ ಹರಿಸುವ ಅವಶ್ಯಕತೆ ಇದೆ. ಇಂಗ್ಲೆಂಡ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್​ ವಿಭಾಗದಲ್ಲಿ ಬಲಿಷ್ಠವಾಗಿದ್ದು, ಎದುರಾಳಿ ತಂಡವನ್ನ ಸಂಕಷ್ಟಕ್ಕೆ ಸಿಲುಕಿಸುವ ಎಲ್ಲ ಯೋಜನೆ ಹಾಕಿಕೊಂಡು ಕಣಕ್ಕಿಳಿಯಲಿದೆ.

ಇದನ್ನೂ ಓದಿರಿ:ಪಾಕ್​​ನ ಪ್ರತಿ ಗಲ್ಲಿಯಲ್ಲೂ ಇಂಥವರು ಇದ್ದಾರೆ; ವರುಣ್​ ಚಕ್ರವರ್ತಿ ಅಣಕಿಸಿದ ಪಾಕ್​ ಮಾಜಿ ಕ್ರಿಕೆಟರ್​

ಆಡುವ ಸಂಭವನೀಯ ಆಟಗಾರರು

ಇಂಗ್ಲೆಂಡ್​: ಜೆಸನ್ ರಾಯ್​, ಜೋಸ್ ಬಟ್ಲರ್​(ವಿ.ಕೀ), ಡೆವಿಡ್​ ಮಲನ್​, ಜಾನಿ ಬೈರ್​ಸ್ಟೋವ್, ಇಯಾನ್ ಮಾರ್ಗನ್​(ಕ್ಯಾಪ್ಟನ್​),ಲಿವಿಗ್​ ಸ್ಟೋನ್​,ಮೊಯಿನ್​ ಅಲಿ, ಕ್ರಿಸ್​ ವೋಕ್ಸ್​, ಕ್ರಿಸ್​ ಜೋರ್ಡನ್​, ಆದಿಲ್​ ರಾಶೀದ್​, ಮಿಲ್ನೆ

ಬಾಂಗ್ಲಾದೇಶ: ಮೊಹಮ್ಮದ್ ನೈಮ್​, ಲಿಟನ್​ ದಾಸ್​/ಸೌಮ್ಯ ಸರ್ಕಾರ್, ಶಕೀಬ್​ ಅಲ್​ ಹಸನ್​, ಮುಸ್ತುಫಿಜುರ್​ ರೆಹಮಾನ್​, ಮೊಹಮ್ಮದುಲ್ಲಾ(ಕ್ಯಾಪ್ಟನ್​), ಹುಸೈನ್​, ನುರುಲಾ ಹಸನ್​(ವಿ.ಕೀ), ರುಬೆಲ್​ ಹುಸೇನ್​​, ಅಹ್ಮದ್​​, ಮುಸ್ತುಫಿಜುರ್​ ರೆಹಮಾನ್​

ಸ್ಕಾಟ್ಲೆಂಡ್​-ನಮೀಬಿಯಾ ಮುಖಾಮಿಖಿ

ಸೂಪರ್​​ 12 ಹಂತದ ಗ್ರೂಪ್​ 2ರಲ್ಲಿ ಕ್ರಿಕೆಟ್​ ಶಿಶುಗಳಾದ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ಮುಖಾಮುಖಿಯಾಗಲಿವೆ. ಸ್ಕಾಟ್ಲೆಂಡ್ ಈಗಾಗಲೇ ತಾನು ಆಡಿರುವ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನದ ವಿರುದ್ಧ ಸೋಲು ಕಂಡಿದ್ದರೆ, ನಮೀಬಿಯಾ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಇರಾದೆ ಹೊಂದಿದೆ. ಟಿ-20 ವಿಶ್ವಕಪ್​ನಲ್ಲಿ ಉಭಯ ತಂಡಗಳು ಎರಡು ಸಲ ಮುಖಾಮುಖಿಯಾಗಿದ್ದು, ನಮೀಬಿಯಾ ಗೆಲುವಿನ ನಗೆ ಬೀರಿದೆ.

ABOUT THE AUTHOR

...view details