ಕರ್ನಾಟಕ

karnataka

ETV Bharat / sports

ಭಾರತೀಯ ಒಲಿಂಪಿಕ್ ಕ್ಯಾಂಪ್​ನಲ್ಲಿ ಕೋವಿಡ್ ಆತಂಕ ಮೂಡಿಸಿದ ಆರೋಗ್ಯ ಆ್ಯಪ್

ಆರೋಗ್ಯ ಆ್ಯಪ್ ತೋರಿಸಿದ ತಪ್ಪು ಮಾಹಿತಿಯಿಂದ ಒಲಿಂಪಿಕ್ ಕ್ರೀಡಾಕೂಟದ ಭಾರತೀಯ ಕ್ಯಾಂಪ್​ನಲ್ಲಿ ಕೋವಿಡ್ ಅಂತಕ ಎದುರಾಗಿತ್ತು. ಬಳಿಕ ಗೊಂದಲವನ್ನು ಪರಿಹರಿಸಲಾಗಿದೆ.

Wrong entries in the health status App raise COVID-19 alarm in Indian camp
ಕೋವಿಡ್ ಕುರಿತು ತಪ್ಪು ಮಾಹಿತಿ

By

Published : Jul 22, 2021, 8:47 AM IST

ಟೋಕಿಯೋ: ಆರೋಗ್ಯ ಮಾಹಿತಿ ಆ್ಯಪ್​ನಲ್ಲಿ ತಪ್ಪಾದ ಮಾಹಿತಿ ತೋರಿಸಿದ ಕಾರಣ ಟೋಕಿಯೋ ಒಲಿಂಪಿಕ್ಸ್​ನ ಭಾರತೀಯ ಕ್ಯಾಂಪ್​ನಲ್ಲಿ ಬುಧವಾರ ಕೋವಿಡ್ ಆತಂಕ ಎದುರಾಗಿತ್ತು. ಆದರೆ, ಈ ಬಗ್ಗೆ ಸಹಾಯಕ ಬಾಣಸಿಗ ಪ್ರೇಮ್ ವರ್ಮಾ ಸ್ಪಷ್ಟನೆ ಕೊಟ್ಟಿದ್ದು, ಇಲ್ಲಿ ಯಾರಲ್ಲೂ ಕೋವಿಡ್ ಪಾಸಿಟಿವ್ ಕಂಡು ಬಂದಿಲ್ಲ. ಯಾರಿಗೂ ರೋಗ ಲಕ್ಷಣಗಳಿಲ್ಲ ಎಂದು ಖಚಿತಪಡಿಸಿದ್ದಾರೆ.

ಓದಿ : ಟೋಕಿಯೋ ಒಲಿಂಪಿಕ್ಸ್‌: ಮಾಸ್ಕ್​ ಕಡ್ಡಾಯ, ಗ್ರೂಪ್​​ ಫೋಟೋ ನಿಷೇಧ, ಮತ್ತಷ್ಟು...

ಆರೋಗ್ಯ ಮಾಹಿತಿ ಆ್ಯಪ್ ಒಚಾ ( OCCHA) ದಲ್ಲಿ ಮೂವರು ಭಾರತೀಯ ಅಧಿಕಾರಿಗಳಿಗೆ ಕೋವಿಡ್ ರೋಗ ಲಕ್ಷಣಗಳು ಇವೆ ಎಂದು ತೋರಿಸಿತ್ತು. ಆದರೆ, ಇತರ ಯಾವುದೇ ಆ್ಯಪ್​​ಗಳಲ್ಲಿ ಈ ವರದಿ ಇರಲಿಲ್ಲ. ಈ ಕುರಿತು ಒಲಿಂಪಿಕ್ ಭಾರತೀಯ ಕ್ಯಾಂಪ್​ನ ಸಹಾಯಕ ಬಾಣಸಿಗ ಮಿಶನ್ ಪ್ರೇಮ್ ವರ್ಮಾ ಅವರಿಂದ ಭಾರತೀಯ ಒಲಿಂಪಿಕ್ಸ್ ಆಸೋಸಿಯೇಷನ್ ಅಧ್ಯಕ್ಷ ನರೀಂದರ್ ಬಾತ್ರಾ ಮಾಹಿತಿ ಪಡೆದಿದ್ದಾರೆ.

ಭಾರತೀಯ ಕ್ಯಾಂಪ್​ನಲ್ಲಿ ಯಾರಲ್ಲೂ ಸೋಂಕು ಅಥವಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಒಚಾ ಆ್ಯಪ್ ಅನ್ನು ಮೊದಲ ಬಾರಿಗೆ ಬಳಸುತ್ತಿರುವವರಿಗೆ ತಪ್ಪು ಮಾಹಿತಿ ತೋರಿಸಿದೆ​ ಎಂದು ಪ್ರೇಮ್ ವರ್ಮಾ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details