ಕರ್ನಾಟಕ

karnataka

ETV Bharat / sports

ಗಂಗಾನದಿಗೆ ಪದಕ ಸಮರ್ಪಿಸಲು ಹರಿದ್ವಾರ ತಲುಪಿದ ಕುಸ್ತಿಪಟುಗಳು: ನಿರ್ಧಾರ ಬದಲಿಸಿ ಸರ್ಕಾರಕ್ಕೆ ಐದು ದಿನಗಳ ಗಡುವು! - wrestlers reach haridwar

ಗಂಗಾನದಿಯಲ್ಲಿ ಪದಕಗಳನ್ನು ಬಿಟ್ಟು, ಇಂಡಿಯಾ ಗೇಟ್​ ಬಳಿ ಉಪವಾಸ ಸತ್ಯಾಗ್ರಹ ಕೂರುವುದಾಗಿ ಹೇಳಿರುವ ಕುಸ್ತಿಪಟುಗಳು ಸದ್ಯ ಹರಿದ್ವಾರ ತಲುಪಿದ್ದಾರೆ. ಇದೇ ವೇಳೆ ಗಂಗಾ ಸಭೆ ಕಮಿಟಿ ಮೆಡಲ್​ಗಳನ್ನು ವಿಸರ್ಜಿಸಲು ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಕ್ರೀಡಾಪಟುಗಳು ಕೇಂದ್ರ ಸರ್ಕಾರಕ್ಕೆ ಐದು ದಿನಗಳ ಗಡುವು ನೀಡಿದ್ದಾರೆ.

mmerse-medals-in-ganga
ಗಂಗಾನದಿಗೆ ಪದಕ ಸಮರ್ಪಿಸಲು ಹರಿದ್ವಾರ ತಲುಪಿದ ಕುಸ್ತಿಪಟುಗಳು: ಗಂಗಾ ಸಭೆ ವಿರೋಧ

By

Published : May 30, 2023, 7:45 PM IST

ಗಂಗಾನದಿಗೆ ಪದಕ ಸಮರ್ಪಿಸಲು ಹರಿದ್ವಾರ ತಲುಪಿದ ಕುಸ್ತಿಪಟುಗಳು

ಹರಿದ್ವಾರ (ಉತ್ತರಾಖಂಡ):ಗಂಗೆಯಲ್ಲಿ ಪದಕ ತೇಲಲು ಹೊರಟಿದ್ದ ಕುಸ್ತಿಪಟುಗಳು ಉತ್ತರಾಖಂಡ ಪ್ರವೇಶಿಸಿದ್ದಾರೆ. ಅವರ ನಿರ್ಧಾರಕ್ಕೆ ಗಂಗಾ ಸಭೆ ಕಮಿಟಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಪದಕಗಳನ್ನು ವಿಸರ್ಜನೆ ಮಾಡದಂತೆ ಹೇಳಿದ್ದಾರೆ. ಈ ನಡುವೆ ಕ್ರೀಡಾಪಟುಗಳು ಸರ್ಕಾರಕ್ಕೆ ಐದು ದಿನಗಳ ಗಡುವು ನೀಡಿದ್ದು, ಅಲ್ಲಿವರೆಗೂ ಪದಕಗಳನ್ನು ನದಿಗೆ ಎಸೆಯುವುದನ್ನು ತಡೆ ಹಿಡಿದಿದ್ದಾರೆ.

ಇತ್ತ ಹರಿದ್ವಾರ ಗಂಗೆಯಲ್ಲಿ ಕ್ರೀಡಾ ಪಟುಗಳು ತಮ್ಮ ಪದಕಗಳನ್ನು ಮುಳುಗಿಸುವ ವಿಷಯ ದೆಹಲಿ ಮಾತ್ರವಲ್ಲದೇ ಉತ್ತರಾಖಂಡದ ರಾಜಕೀಯದಲ್ಲೂ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹಲವು ಸಾಮಾಜಿಕ ಸಂಘಟನೆಗಳು ಆಟಗಾರರಿಗಾಗಿ ವಿವಿಧೆಡೆ ಕಾಯುತ್ತಿದ್ದಾರೆ. ಮತ್ತೊಂದೆಡೆ, ಕುಸ್ತಿಪಟುಗಳು ಏನು ಬೇಕಾದರೂ ಮಾಡಲು ಸ್ವತಂತ್ರರು ಎಂದು ಪೊಲೀಸರು ಹೇಳುತ್ತಿದ್ದಾರೆ.

ಕುಸ್ತಿ ಅಸೋಸಿಯೇಷನ್ ​​ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪೋಕ್ಸೊ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದರೂ ಅವರನ್ನು ಬಂಧಿಸಿಲ್ಲ ಏಕೆ ಎಂದು ಪ್ರಶ್ನಿಸಿ 38 ದಿನಗಳಿಂದ ಕುಸ್ತಿ ಪಟುಗಳು ಜಂತರ್​ ಮಂತರ್​ನಲ್ಲಿ ಹೋರಾಟ ಮಾಡುತ್ತಿದ್ದರು. ನೂತನ ಸಂಸತ್​ ಭವನದ ಉದ್ಘಾಟನೆಯ ವೇಳೆ ಜಂತರ್​ ಮಂತರ್​ನಿಂದ ಪ್ರತಿಭಟನಾ ಮೆರವಣಿಗೆ ಹೊರಟಾಗ ದೆಹಲಿ ಪೊಲೀಸರು ಕುಸ್ತಿಪಟುಗಳು ಮತ್ತು ಅವರ ಬೆಂಬಲಿಗರನ್ನು ಬಂಧಿಸಿದ್ದರು. 7 ಗಂಟೆಗಳ ಕಾಲ ಬಂಧನದ ನಂತರ ಬಿಡುಗಡೆ ಮಾಡಿದ್ದರು.

ದೆಹಲಿಯಲ್ಲಿ ಭಾನುವಾರ ಮಾನವ ಸರಪಳಿಯ ರೀತಿ ಮಾಡಿ ಮೆರವಣಿಗೆ ಹೊರಟಿದ್ದ ಕುಸ್ತಿಪಟುಗಳನ್ನು ಬಂಧಿಸಲು ಪೊಲೀಸರು ಯತ್ನಿಸಿದ ವೇಳೆ ವಿರೋಧ ವ್ಯಕ್ತ ಪಡಿಸಿದ್ದರು. ಇದರಿಂದ ಅಲ್ಲಿ ತಳ್ಳಾಟ ನೂಕಾಟ ನಡೆದಿತ್ತು. ಆದರೂ ಪೊಲೀಸರು ಎಲ್ಲರನ್ನೂ ಬಂಧಿಸಿ, ಜಂತರ್ ಮಂತರ್​ನಲ್ಲಿ ಕುಸ್ತಿಪಟುಗಳು ಹೋರಾಟ ಮಾಡುತ್ತಿದ್ದ ಜಾಗವನ್ನು ತೆರವುಗೊಳಿಸಿದ್ದರು.

ಕುಸ್ತಿಪಟುಗಳ ಬಂಧನಕ್ಕೆ ಪೊಲೀಸರ ವಿರುದ್ಧ ತೀವ್ರ ಖಂಡನೆಗಳು ವ್ಯಕ್ತವಾದವು. ಇದಾದ ನಂತರ ಇಂದು ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ತಮ್ಮ ಒಲಂಪಿಕ್​ ಪದಕವನ್ನು ಗಂಗೆಯಲ್ಲಿ ಅರ್ಪಣೆ ಮಾಡುತ್ತೇವೆ. ನಮ್ಮ ಪವಿತ್ರ ಪದಕಗಳು ಗಂಗೆಯಲ್ಲಿ ಸೇರಲಿ ಎಂದು ಹೇಳಿಕೆ ಬಿಡುಗಡೆ ಮಾಡಿದ್ದರು. ಅದರಂತೆ ಕುಸ್ತಿಪಟುಗಳು ದೆಹಲಿಯಿಂದಲೂ ಪದಕಗಳನ್ನು ತೆಗೆದುಕೊಂಡು ಹರಿದ್ವಾರಕ್ಕೆ ತಲುಪಿದ್ದಾರೆ.

ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಮಾತನಾಡಿ, ಕುಸ್ತಿಪಟುಗಳು ಏನು ಬೇಕಾದರೂ ಮಾಡಲು ಸ್ವತಂತ್ರರು. ಅವರು ತಮ್ಮ ಪದಕಗಳನ್ನು ಪವಿತ್ರ ಗಂಗೆಯಲ್ಲಿ ಮುಳುಗಿಸಲು ಬರುತ್ತಿದ್ದರೆ, ಅವರನ್ನು ತಡೆಯುವುದಿಲ್ಲ. ಅಲ್ಲದೇ ಕುಸ್ತಿಪಟುಗಳ ಆಗಮನದ ಬಗ್ಗೆಯೂ ಮಾಹಿತಿ ನೀಡಿಲ್ಲ. ಮೇಲಧಿಕಾರಿಗಳಿಂದ ಅಂತಹ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.

ಹರಿದ್ವಾರದಲ್ಲಿ ಗಂಗಾ ದಸರಾ ಸ್ನಾನ ನಡೆಯುತ್ತಿದೆ: ಇಂದು ಹರಿದ್ವಾರದಲ್ಲಿ ಗಂಗಾ ದಸರಾ ಸ್ನಾನ ನಡೆಯುತ್ತಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ಈ ಸ್ನಾನ ಆರಂಭವಾಗಿದೆ. ಇದುವರೆಗೆ 15 ಲಕ್ಷಕ್ಕೂ ಹೆಚ್ಚು ಭಕ್ತರು ಗಂಗಾ ಮಾತೆಯಲ್ಲಿ ಸ್ನಾನ ಮಾಡಿದ್ದಾರೆ. ಪದಕ ವಿಜೇತರು ಮತ್ತು ಒಲಿಂಪಿಯನ್ ಕುಸ್ತಿಪಟುಗಳೂ ಹರಿದ್ವಾರಕ್ಕೆ ಬಂದಿದ್ದಾರೆ.

ಕುಸ್ತಿಪಟುಗಳ ನಡೆಗೆ ಗಂಗಾ ಸಭೆ ವಿರೋಧ: ಗಂಗಾ ಘಾಟ್​ನಲ್ಲಿ ಪದಕಗಳನ್ನು ಬಿಡಲು ಗಂಗಾ ಸಭೆ ವಿರೋಧ ವ್ಯಕ್ತಪಡಿಸಿದೆ. ಗಂಗಾ ಸಭಾದ ಅಧ್ಯಕ್ಷ ನಿತಿನ್ ಗೌತಮ್ ಅವರು ಈ ಘಾಟ್​ ಲಕ್ಷಾಂತರ ಹಿಂದೂಗಳ ನಂಬಿಕೆಯ ಸ್ಥಳವಾಗಿದೆ . ಯಾವುದೇ ರಾಜಕೀಯ ವಿಷಯಕ್ಕೆ ಪ್ರಾಮುಖ್ಯತೆ ನೀಡುವ ಯಾವುದೇ ಕೃತ್ಯವನ್ನು ಇಲ್ಲಿ ಸಹಿಸುವುದಿಲ್ಲ. ಕುಸ್ತಿಪಟುಗಳು ಪದಕ ಅರ್ಪಣೆಯನ್ನು ವಿರೋಧಿಸಲಾಗುವುದು. ಅವರನ್ನು ಮೊದಲು ಗಂಗಾ ಆರತಿಯಲ್ಲಿ ಕುಳಿತುಕೊಳ್ಳಲು ಕೇಳಲಾಗುತ್ತದೆ. ಯಾವುದೇ ಹಂತದಲ್ಲಿ ಇದನ್ನು ಮಾಡದಂತೆ ಮನವೊಲಿಸುತ್ತೇವೆ, ಇದಕ್ಕೂ ಮೀರಿ ಮಾಡುವುದಿದ್ದಲ್ಲಿ ವಿರೋಧ ಇದೆ ಎಂದಿದ್ದಾರೆ.

ಇದನ್ನೂ ಓದಿ:ಒಲಂಪಿಕ್​ ಪದಕಗಳನ್ನು ಗಂಗೆಗೆ ಎಸೆಯುತ್ತೇವೆ.. ಇಂಡಿಯಾ ಗೇಟ್​ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ: ಕುಸ್ತಿಪಟುಗಳ ಎಚ್ಚರಿಕೆ

ABOUT THE AUTHOR

...view details