ಕರ್ನಾಟಕ

karnataka

ETV Bharat / sports

ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ: 1983ರ ವಿಶ್ವಕಪ್ ವಿಜೇತ ತಂಡದಿಂದ ಕುಸ್ತಿಪಟುಗಳಿಗೆ ಬೆಂಬಲ - ETV Bharath Kannada news

ದೇಶದಲ್ಲಿ ಕಾನೂನು ಯಾವಾಗಲೂ ಗೆಲ್ಲುತ್ತದೆ ಹೀಗಾಗಿ ಕುಸ್ತಿಪಟುಗಳು ಯಾವುದೇ ಅವಸರದ ನಿರ್ಣಯವನ್ನು ತೆಗೆದುಕೊಳ್ಳಬಾರದು ಎಂದು 1983 ರ ವಿಶ್ವಕಪ್ ವಿಜೇತ ತಂಡ ವಿನಂತಿಸಿದೆ.

Don't take any step in haste: 1983 World Cup winning team to protesting wrestlers
ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ: 1983 ರ ವಿಶ್ವಕಪ್ ವಿಜೇತ ತಂಡದಿಂದ ಕುಸ್ತಿಪಟುಗಳಿಗೆ ಬೆಂಬಲ

By

Published : Jun 2, 2023, 7:33 PM IST

ನವದೆಹಲಿ: 1983 ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಸದಸ್ಯರು ಶುಕ್ರವಾರ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಒತ್ತಾಯಿಸಿದ್ದಾರೆ. ಅವರ ಕುಂದುಕೊರತೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸುವ ಆಶಾವಾದವನ್ನು ವ್ಯಕ್ತಪಡಿಸಿದರು. ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಲಂಪಿಕ್​ ಗೆಮ್ಸ್​ಗಳನ್ನು ದೇಶಕ್ಕೆ ಪದಕ ಗೆದ್ದಿದ್ದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಹಲವಾರು ಕುಸ್ತಿಪಟುಗಳು ದೆಹಲಿಯ ಜಂತರ್​ ಮಂತರ್​ನಲ್ಲಿ ಭಾನುವಾರದ ವರಗೆ ಪ್ರತಿಭಟನೆ ನಡೆಸಿದ್ದರು.

ಕಪಿಲ್ ದೇವ್ ನೇತೃತ್ವದ 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಜಂಟಿ ಹೇಳಿಕೆಯನ್ನು ನೀಡಿದ್ದಾರೆ. "ನಮ್ಮ ಚಾಂಪಿಯನ್ ಕುಸ್ತಿಪಟುಗಳ ಅನೈತಿಕ ದೃಶ್ಯಗಳಿಂದ ನಾವು ದುಃಖಿತರಾಗಿದ್ದೇವೆ ಮತ್ತು ವಿಚಲಿತರಾಗಿದ್ದೇವೆ. ಅವರು ಕಷ್ಟಪಟ್ಟು ಗಳಿಸಿದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಯೋಚಿಸುತ್ತಿದ್ದಾರೆ ಎಂದು ನಾವು ಹೆಚ್ಚು ಕಾಳಜಿ ವಹಿಸುತ್ತೇವೆ" ಎಂದು ಅದು ಹೇಳಿದೆ. 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯರಲ್ಲಿ ಪ್ರಸ್ತುತ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಸುನಿಲ್ ಗವಾಸ್ಕರ್, ಮೊಹಿಂದರ್ ಅಮರನಾಥ್, ರವಿಶಾಸ್ತ್ರಿ, ದಿಲೀಪ್ ವೆಂಗ್‌ಸರ್ಕರ್, ಸೈಯದ್ ಕಿರ್ಮಾನಿ, ಮದನ್ ಲಾಲ್, ಕೆ ಶ್ರೀಕಾಂತ್ ಸೇರಿದ್ದಾರೆ.

"ಆ ಪದಕಗಳು ವರ್ಷಗಳ ಪ್ರಯತ್ನ, ತ್ಯಾಗ, ಸಂಕಲ್ಪ ಮತ್ತು ಶ್ರದ್ಧೆಗಳನ್ನು ಒಳಗೊಂಡಿವೆ ಮತ್ತು ಅವರದು ಮಾತ್ರವಲ್ಲದೇ ರಾಷ್ಟ್ರದ ಹೆಮ್ಮೆ ಮತ್ತು ಸಂತೋಷವಾಗಿದೆ. ಈ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ನಾವು ಅವರನ್ನು ಒತ್ತಾಯಿಸುತ್ತೇವೆ. ಅವರ ಕುಂದುಕೊರತೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸಲು ಒತ್ತಾಯಿಸಲಾಗುವುದು. ದೇಶದ ಕಾನೂನು ಮೇಲುಗೈ ಸಾಧಿಸಲಿದೆ " ಎಂದಿದ್ದಾರೆ.

ಮಂಗಳವಾರ ಹರಿದ್ವಾರದ ಗಂಗಾ ನದಿಯಲ್ಲಿ ತಮ್ಮ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಮುಳುಗಿಸುವುದಾಗಿ ಪ್ರತಿಭಟನಾನಿರತ ಕುಸ್ತಿಪಟುಗಳು ಬೆದರಿಕೆ ಹಾಕಿದ ನಂತರ ಈ ಹೇಳಿಕೆ ಬಂದಿದೆ. ರೈತ ನಾಯಕ ನರೇಶ್ ಟಿಕಾಯತ್​​ ಅವರ ಮಧ್ಯಸ್ಥಿಕೆಯ ನಂತರ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಐದು ದಿನದ ಕಾಲಾವಕಾಶವನ್ನು ನೀಡಿ ಪದಕವನ್ನು ಗಂಗೆಗೆ ಎಸೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಬುಧವಾರ ಸಾರ್ವಜನಿಕ ರ್‍ಯಾಲಿಯಲ್ಲಿ ಭಾಗವಹಿಸಿದ ಬ್ರಿಜ್ ಭೂಷಣ್ ಸಿಂಗ್ ಅವರು ತಮ್ಮ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೂ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದಾರೆ. ಕುಸ್ತಿಪಟುಗಳು ಪದಕವನ್ನು ಗಂಗೆಯಲ್ಲಿ ಎಸೆಯುತ್ತೇವೆ ಎನ್ನುವುದು ಒಂದು ಭಾವನಾತ್ಮಕ ನಾಟಕ ಎಂದು ರ್‍ಯಾಲಿ ವೇಳೆ ಟೀಕೆ ಮಾಡಿದ್ದರು. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಕುಸ್ತಿಪಟುಗಳಿಗೆ ಕ್ರೀಡೆಗೆ ಧಕ್ಕೆ ತರುವ ಯಾವುದೇ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದ್ದರು. ಅಲ್ಲದೇ ಪ್ರತಿಭಟನಾ ನಿರತ ಕುಸ್ತಿಪಟುಗಳು ತಾಳ್ಮೆಯಿಂದ ಇರುವಂತೆ ಕೋರಿದ್ದರು.

ಇದನ್ನೂ ಓದಿ:ಅಯೋಧ್ಯಾ ರ್‍ಯಾಲಿ ಮುಂದೂಡಿದ ಭೂಷಣ್ ಶರಣ್ ಸಿಂಗ್: ಕೋರ್ಟ್ ನಿರ್ದೇಶನಕ್ಕೆ ತಲೆಬಾಗುವುದಾಗಿ ಫೇಸ್​ಬುಕ್​ ಪೋಸ್ಟ್​​

ABOUT THE AUTHOR

...view details