ಕರ್ನಾಟಕ

karnataka

ETV Bharat / sports

ಮಹಿಳಾ ಬಾಕ್ಸಿಂಗ್​ ಚಾಂಪಿಯನ್​ಶಿಪ್​ ಗೆದ್ದ ನಿಖತ್​ ಜರೀನ್ - telangana boxer nikhat

ಬಾಕ್ಸಿಂಗ್​ ವಿಶ್ವಚಾಂಪಿಯನ್​ ನಿಖತ್​ ಜರೀನ್ ಮುಡಿಗೆ ಮತ್ತೊಂದು ಕಿರೀಟ - ಮಹಿಳಾ ಬಾಕ್ಸಿಂಗ್​ ಚಾಂಪಿಯನ್​ಶಿಪ್ ಗೆದ್ದ ತೆಲಂಗಾಣದ ಬಾಕ್ಸರ್​ - ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದ ಬಾಕ್ಸಿಂಗ್​ ಕ್ರೀಡಾಕೂಟ

womens-national-boxing-champion
ಮಹಿಳಾ ಬಾಕ್ಸಿಂಗ್​ ಚಾಂಪಿಯನ್​ಶಿಪ್​ ಗೆದ್ದ ನಿಖತ್​ ಜರೀನ್

By

Published : Dec 26, 2022, 2:34 PM IST

ಭೋಪಾಲ್​(ಮಧ್ಯಪ್ರದೇಶ):ಬಾಕ್ಸಿಂಗ್​ ವಿಶ್ವಚಾಂಪಿಯನ್​ ತೆಲಂಗಾಣದ ನಿಖತ್​ ಜರೀನ್​ ಮತ್ತೊಂದು ಪರಾಕ್ರಮ ಮೆರೆದಿದ್ದಾರೆ. ಅದ್ಭುತ ಫಾರ್ಮ್​ನಲ್ಲಿರುವ ಜರೀನ್​ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದ ಮಹಿಳಾ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಇಂದು ನಡೆದ ಫೈನಲ್​ ಪಂದ್ಯದಲ್ಲಿ ರೈಲ್ವೇಸ್​ನ ಅನಾಮಿಕಾ ವಿರುದ್ಧ ಪಾರಮ್ಯ ಮೆರೆದ ನಿಖತ್​ ಜರೀನ್​ 4-1 ರಲ್ಲಿ ಜಯ ಸಾಧಿಸಿ ಪ್ರಶಸ್ತಿ ಗೆದ್ದರು. ಫೈನಲ್​ ಪಂದ್ಯದಲ್ಲಿ ವಿಶ್ವ ಚಾಂಪಿಯನ್​ಗೆ ಅನಾಮಿಕಾ ಪ್ರಬಲ ಸ್ಪರ್ಧೆ ಒಡ್ಡುವ ಸೂಚನೆ ನೀಡಿದ್ದರು. ಆದರೆ, ನಿಖರ್​ ತನ್ನೆಲ್ಲ ಶಕ್ತಿಯನ್ನು ರಟ್ಟೆಯಲ್ಲಿ ತುಂಬಿಕೊಂಡು ಪಂಚ್​ ನೀಡುವ ಮೂಲಕ ಗೆಲುವಿನ ನಗೆ ಬೀರಿದರು.

50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ತೆಲಂಗಾಣದ ಮಹಿಳಾ ಬಾಕ್ಸರ್​ ಸೆಮಿಫೈನಲ್‌ನಲ್ಲಿ ಶಿವಿಂದರ್ ಕೌರ್ ಅವರನ್ನು 5-0 ಅಂತರದಿಂದ ಸೋಲಿಸಿದ್ದರು.

ಓದಿ:ಮಾತೃ ವಿಯೋಗದಲ್ಲೂ ಕಾಮೆಂಟರಿ ಮುಗಿಸಿ ಕರ್ತವ್ಯಪ್ರಜ್ಞೆ ಮೆರೆದ ಮಾಜಿ ಕ್ರಿಕೆಟಿಗ ಗವಾಸ್ಕರ್​

ABOUT THE AUTHOR

...view details