ಕರ್ನಾಟಕ

karnataka

ETV Bharat / sports

WFI Election: ಬ್ರಿಜ್​ ಭೂಷಣ್ ಆಪ್ತ ಸಂಜಯ್ ಸಿಂಗ್ ಮತ್ತು ಏಕೈಕ ಮಹಿಳಾ ಅಭ್ಯರ್ಥಿ ಅನಿತಾ ಶೆರಾನ್ ನಡುವೆ ನೇರ ಪೈಪೋಟಿ - ETV Bharath Kannada news

ಭಾರತೀಯ ಕುಸ್ತಿ ಒಕ್ಕೂಟ​ (ಡಬ್ಲ್ಯುಎಫ್‌ಐ) ದ ಚುನಾವಣೆ ಆಗಸ್ಟ್ 12 ರಂದು ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಂಜಯ್ ಸಿಂಗ್ ಮತ್ತು ಅನಿತಾ ಶೆರಾನ್ ಸ್ಪರ್ಧೆ ನಡೆಸಲಿದ್ದಾರೆ.

WFI Election
ಭಾರತೀಯ ಕುಸ್ತಿ ಒಕ್ಕೂಟ​ (ಡಬ್ಲ್ಯುಎಫ್‌ಐ) ದ ಚುನಾವಣೆ

By

Published : Aug 6, 2023, 12:23 PM IST

ನವದೆಹಲಿ: ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕಣ ರಂಗೇರುತ್ತಿದೆ. ಇದಕ್ಕೆ ಕಾರಣ ಬ್ರಿಜ್​ ಭೂಷಣ್​ ಸಿಂಗ್​ ಅವರ ಬಣದ ವಿರುದ್ಧವಾಗಿ ಸ್ಪರ್ಧಿಸುತ್ತಿರುವ ಮಹಿಳಾ ಅಭ್ಯರ್ಥಿ. ಕಾಮನ್‌ವೆಲ್ತ್ ಗೇಮ್ಸ್ 2010ರ ಚಾಂಪಿಯನ್ ಅನಿತಾ ಶಿಯೋರಾನ್ ಮತ್ತು ಯುಪಿ ಕುಸ್ತಿ ಸಂಸ್ಥೆಯ ಉಪಾಧ್ಯಕ್ಷ ಸಂಜಯ್ ಸಿಂಗ್ ಕಣದಲ್ಲಿದ್ದಾರೆ.

ಉತ್ತರ ಪ್ರದೇಶ ಕುಸ್ತಿ ಫೆಡರೇಶನ್‌ನ ಉಪಾಧ್ಯಕ್ಷ ಸಂಜಯ್ ಸಿಂಗ್ ಅವರು ಈ ಹಿಂದಿನ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ನಿಕಟವರ್ತಿಯಾಗಿದ್ದಾರೆ. ಆಗಸ್ಟ್ 12 ರಂದು ಚುನಾವಣೆ ನಡೆಯಲಿದ್ದು, ಅನಿತಾ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಅನಿತಾ ಅವರು ಹರಿಯಾಣದವರಾಗಿದ್ದು, ರಾಜ್ಯ ಪೊಲೀಸ್‌ನಲ್ಲಿ ಕೆಲಸ ಮಾಡುತ್ತಿರುವ ಅವರು ಒಡಿಶಾ ಘಟಕದ ಪ್ರತಿನಿಧಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಇಬ್ಬರು ಅಭ್ಯರ್ಥಿಗಳಾದ ಜಮ್ಮು ಮತ್ತು ಕಾಶ್ಮೀರದಿಂದ ದುಶ್ಯಂತ್ ಶರ್ಮಾ ಮತ್ತು ದೆಹಲಿ ಕುಸ್ತಿ ಸಂಸ್ಥೆಯ ಅಧ್ಯಕ್ಷ ಜೈಪ್ರಕಾಶ್ ಸಹ ಬ್ರಿಜ್ ಭೂಷಣ್ ಅವರ ನಿಕಟವರ್ತಿಗಳಾಗಿದ್ದು, ಅವರೂ ಕೂಡ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಇಬ್ಬರೂ ಶನಿವಾರ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ಸ್ಥಾಪಿಸಿದ hoc ಸಮಿತಿ ನಾಮಪತ್ರ ಹಿಂಪಡೆದಿರುವುದನ್ನು ಸ್ಪಷ್ಟಪಡಿಸಿದೆ.

ಚುನಾವಣಾಧಿಕಾರಿ ಹಾಗೂ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಮಹೇಶ್ ಮಿತ್ತಲ್ ಕುಮಾರ್ ಅವರು ಆಗಸ್ಟ್ 7 ರಂದು ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಅದರಲ್ಲಿ ಅಧ್ಯಕ್ಷ (1), ಹಿರಿಯ ಉಪಾಧ್ಯಕ್ಷ (1), ಉಪಾಧ್ಯಕ್ಷ (4), ಪ್ರಧಾನ ಕಾರ್ಯದರ್ಶಿ (1), ಖಜಾಂಚಿ (1), ಜಂಟಿ ಕಾರ್ಯದರ್ಶಿ (2) ಮತ್ತು ಕಾರ್ಯಕಾರಿ ಸದಸ್ಯ (5) ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಲಾಗಿತ್ತು.

ಒಲಿಂಪಿಯನ್ ಜಯಪ್ರಕಾಶ್ ಮೂರು ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ್ದರು. ಶನಿವಾರ ಪ್ರಧಾನ ಕಾರ್ಯದರ್ಶಿ ಹುದ್ದೆಯ ರೇಸ್‌ನಿಂದ ಹೊರಬಂದರು. ನಂತರ ಚಂಡೀಗಢದ ದರ್ಶನ್ ಲಾಲ್ ಮತ್ತು ರೈಲ್ವೆ ಕ್ರೀಡಾ ಪ್ರಚಾರ ಮಂಡಳಿ ಕಾರ್ಯದರ್ಶಿ ಪ್ರೇಮಚಂದ್ ಲೋಚಬ್ ನಡುವೆ ಹಾಗೇ ಖಜಾಂಚಿ ಸ್ಥಾನಕ್ಕೆ ಸತ್ಯಪಾಲ್ ಸಿಂಗ್ ದೇಶ್ವಾಲ್ ಮತ್ತು ಉತ್ತರಾಖಂಡದ ದುಷ್ಯಂತ್ ಶರ್ಮಾ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಇದೆ.

ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್​ ಸಿಂಗ್​ ಬಣದಿಂದ ಎಲ್ಲಾ 15 ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಇದರಲ್ಲಿ ಭೂಷಣ್ ಸಿಂಗ್​ ಅವರ ಆಪ್ತರು ಮಾತ್ರ ಕಾಣಿಸಿಕೊಳ್ಳಲಿದ್ದು, ಕುಟುಂಬದವರು ಹೊರಗಿದ್ದಾರೆ. ಪ್ರತಿಭಟನಾನಿರತ ಕುಸ್ತಿ ಪಟುಗಳು ಕೇಂದ್ರ ಸರ್ಕಾರಕ್ಕೆ ಚುನಾವಣೆಯಲ್ಲಿ ಸಿಂಗ್​ ಕುಟುಂಬದಿಂದ ಯಾರು ಸ್ಪರ್ಧಿಸಬಾರದು ಎಂದು ಕೇಳಿಕೊಂಡಿದ್ದರು. ಅದರಂತೆ ಅವರ ಕುಟುಂಬದಿಂದ ಯಾವುದೇ ಅಭ್ಯರ್ಥಿಗಳು ಕಣದಲ್ಲಿಲ್ಲ.

ಇದನ್ನೂ ಓದಿ:WFI Election: ಡಬ್ಲ್ಯುಎಫ್‌ಐ ಚುನಾವಣೆ ಕಣದಲ್ಲಿರುವ ಇಬ್ಬರು ಬ್ರಿಜ್ ಭೂಷಣ್ ಆಪ್ತರು.. ಕುಟುಂಬದವರು ಸ್ಪರ್ಧಿಸುತ್ತಿಲ್ಲ ಎಂದ ಸಿಂಗ್​​

ABOUT THE AUTHOR

...view details