ರೋಮ್(ಇಟಲಿ):ಅಂಡರ್-17 ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಯುವ ಕುಸ್ತಿಪಟು ಸೂರಜ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. 55 ಕೆಜಿ ವೈಟ್ ಕ್ಲಾಸ್ ಕುಸ್ತಿ ವಿಭಾಗದಲ್ಲಿ ಭಾರತದ ಸೂರಜ್ ವಸಿಷ್ಟ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಬರೋಬ್ಬರಿ 32 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದ 16ರ ಪೋರ ಗ್ರಿಕೋ – ರೋಮನ್ U-17 ವಿಶ್ವ ಚಾಂಪಿಯನ್ಶಿಪ್ನಲ್ಲಿ ಸೂರಜ್ ವಸಿಷ್ಠ್ ಈ ಸಾಧನೆ ಮಾಡಿದ್ದಾರೆ. 16 ವರ್ಷದ ಸೂರಜ್ 55kg ವೈಟ್ ಕ್ಲಾಸ್ ವಿಭಾಗದಲ್ಲಿ ಯುರೋಪಿಯನ್ ಚಾಂಪಿಯನ್ ಫರಿಮಾ ಮುಸ್ತಫೆವ್ ಅವರನ್ನು 11-0 ಅಂತರದಿಂದ ಸೋಲಿಸಿ ವಿಶೇಷ ಸಾಧನೆ ಮಾಡಿ ಮೆರೆದಿದ್ದಾರೆ.
ಈ ಮೂಲಕ ಭಾರತಕ್ಕೆ ಬರೋಬ್ಬರಿ 32 ವರ್ಷಗಳ ಬಳಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಈ ಹಿಂದೆ 1990ರಲ್ಲಿ ಭಾರತದ ಪಪ್ಪೂ ಯಾದವ್ ಚಿನ್ನ ಗೆದ್ದಿದ್ದರು. ಇದಾದ ಬಳಿಕ ಭಾಗಿಯಾಗಿದ್ದ ಯಾವುದೇ ಕುಸ್ತಿಪಟು ಫೈನಲ್ಗೆ ಲಗ್ಗೆ ಹಾಕಿರಲಿಲ್ಲ.
ಇದನ್ನೂ ಓದಿರಿ:IND vs WI 3rd ODI: ವಿಂಡೀಸ್ ವಿರುದ್ಧದ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ
ಹರಿಯಾಣದ ರೋಹ್ಟಕ್ ಜಿಲ್ಲೆಯ ರಿತಾಲ್ನ ಸೂರಜ್ ಫೈನಲ್ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆರಂಭದಿಂದಲೂ ಎದುರಾಳಿ ಮೇಲೆ ಹಿಡಿತ ಸಾಧಿಸಿ, ಯಾವುದೇ ಪಾಯಿಂಟ್ ಬಿಟ್ಟುಕೊಡಲಿಲ್ಲ. ಹೀಗಾಗಿ, ಎರಡು ಸುತ್ತಿನಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ. ಅಂಡರ್ 19 ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿರುವ ಸೂರಜ್ ಮಾತನಾಡಿ, ಸಿನಿಯರ್ ವಿಶ್ವ ಟೈಟನ್ ಗೆಲ್ಲುವ ಕನಸು ಸಹ ಇದೆ ಎಂದು ಹೇಳಿಕೊಂಡಿದ್ದಾರೆ.