ಹೈದರಾಬಾದ್: ಭಾರತದ ಮತ್ತೋರ್ವ ಈಜುಪಟು ಟೋಕಿಯೋ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಸಜನ್ ಪ್ರಕಾಶ್ ನಂತರ ಟೋಕಿಯೋ ಒಲಿಂಪಿಕ್ನಲ್ಲಿ ಭಾಗಿಯಾಗುತ್ತಿರುವ ಎರಡನೇ ಈಜು ಪಟುವಾಗಿ ಶ್ರೀಧರ್ ನಟರಾಜ್ ಹೊರಹೊಮ್ಮಿದ್ದಾರೆ. ರೋಮ್ನಲ್ಲಿ ನಡೆದ ಸೆಟ್ಟಿ ಕೊಲೀ ಟ್ರೋಫಿ ಚಾಂಪಿಯನ್ಶಿಪ್ನ ಪುರುಷರ 100 ಮೀಟರ್ನಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಕೇವಲ 53.77 ಸೆಕೆಂಡ್ಗಳಲ್ಲಿ ಅವರು ಗುರಿ ಮುಟ್ಟಿದ್ದರು.
ಇದಕ್ಕೆ ಸಂಬಂಧಿಸಿದಂತೆ ಭಾರತ ಈಜು ಫೆಡರೇಷನ್ ಟ್ವೀಟ್ ಕೂಡ ಮಾಡಿದ್ದು, 20 ವರ್ಷದ ಶ್ರೀಹರಿ ನಟರಾಜ ಮೊದಲ ಸಲ ಒಲಿಂಪಿಕ್ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿಂದೆ 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗಿಯಾಗಿದ್ದರು. ಶ್ರೀಹರಿ ನಟರಾಜನ್ ಮೂಲತಃ ಬೆಂಗಳೂರಿನವರು ಎಂಬುದು ಗಮನಾರ್ಹ ವಿಚಾರ.