ಕರ್ನಾಟಕ

karnataka

ETV Bharat / sports

ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಆರಂಭವಾಗಲಿವೆ 143 ಖೇಲೋ ಇಂಡಿಯಾ ಕೇಂದ್ರಗಳು - ಕರ್ನಾಟಕ

2028ರ ಒಲಿಂಪಿಕ್ಸ್​ನಲ್ಲಿ ಟಾಪ್​ 10ರಲ್ಲಿ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಬೇಕೆನ್ನುವ ನಮ್ಮ ಆಶಯಕ್ಕೆ ಇದು ನಮ್ಮ ಪ್ರಯತ್ನವಾಗಿದೆ. ಈ ಕನಸನ್ನು ಪೂರ್ಣಗೊಳಿಸಬೇಕಾದರೆ ನಾವು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಚಿಕ್ಕ ವಯಸ್ಸಿಲ್ಲೇ ಗುರುತಿಸಬೇಕಾಗಿದೆ..

ಖೆಲೋ ಇಂಡಿಯಾ ಕೇಂದ್ರ
ಖೆಲೋ ಇಂಡಿಯಾ ಕೇಂದ್ರ

By

Published : May 25, 2021, 4:15 PM IST

ನವದೆಹಲಿ : 7 ರಾಜ್ಯಗಳಲ್ಲಿ 143 ಖೇಲೋ ಇಂಡಿಯಾ ಕೇಂದ್ರಗಳನ್ನು 14.30 ಕೋಟಿ ರೂ. ವೆಚ್ಚದಲ್ಲಿ ತೆರೆಯಲು ಭಾರತೀಯ ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಇದರಿಂದ ದೇಶದಲ್ಲಿ ಸ್ಥಳೀಯ ಮಟ್ಟದ ಪ್ರತಿಭೆಗಳನ್ನು ಗುರುತಿಸುವ ಗುರಿಯನ್ನು ಸಚಿವಾಲಯ ಹೊಂದಿದೆ.

ಮಹಾರಾಷ್ಟ್ರ, ಮಿಜೋರಾಂ, ಕರ್ನಾಟಕ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ ಗೋವಾ ಮತ್ತು ಮಣಿಪುರದಲ್ಲಿ ಈ ಕೇಂದ್ರಗಳನ್ನು ಆರಂಭಿಸಲು ಸಚಿವಾಲಯ ನಿರ್ಧಿರಿಸದೆ. ಪ್ರತಿ ಕೇಂದ್ರಕ್ಕೂ ಒಂದು ಕ್ರೀಡಾ ವಿಭಾಗವನ್ನು ವಹಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ದೇಶಾದ್ಯಂತ ತಳಮಟ್ಟದ ಮೂಲಸೌಕರ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಖೇಲೋ ಇಂಡಿಯಾ ಕೇಂದ್ರಗಳನ್ನು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕ್ರೀಡಾ ಸಚಿವಾಲಯ ಪ್ರಾರಂಭಿಸಿದೆ.

2028ರ ಒಲಿಂಪಿಕ್ಸ್​ನಲ್ಲಿ ಟಾಪ್​ 10ರಲ್ಲಿ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಬೇಕೆನ್ನುವ ನಮ್ಮ ಆಶಯಕ್ಕೆ ಇದು ನಮ್ಮ ಪ್ರಯತ್ನವಾಗಿದೆ. ಈ ಕನಸನ್ನು ಪೂರ್ಣಗೊಳಿಸಬೇಕಾದರೆ ನಾವು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಚಿಕ್ಕ ವಯಸ್ಸಿಲ್ಲೇ ಗುರುತಿಸಬೇಕಾಗಿದೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಖೇಲೋ ಇಂಡಿಯಾ ಕೇಂದ್ರಗಳಲ್ಲಿ ಉತ್ತಮ ಕೋಚ್​ಗಳ ಲಭ್ಯತೆ ಮತ್ತು ಉಪಕರಣಗಳು ದೊರೆತರೆ ನಾವು ಖಂಡಿತಾವಾಗಿ ಸರಿಯಾದ ಆಟಗಳಿಗೆ ನಾವು ಸರಿಯಾದ ಮಕ್ಕಳನ್ನು ಹುಡುಕಬಹುದು ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

2020 ರಲ್ಲಿ ದೇಶಾದ್ಯಂತ 1000 ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲು ಕ್ರೀಡಾ ಸಚಿವಾಲಯ ನಿರ್ಧರಿಸಿತ್ತು. ಈಗಾಗಲೇ ಕೆಲವು ರಾಜ್ಯಗಳಲ್ಲಿ 217 ಕೇಂದ್ರಗಳನ್ನು ತೆರೆದಿದೆ.

ಇದನ್ನು ಓದಿ:ಒಲಿಂಪಿಕ್ಸ್​ ಕ್ರೀಡಾಪಟುಗಳಿಗೆ ಸಪೂರ್ಣ ಬೆಂಬಲ ನೀಡಲು ಪ್ರಧಾನಿ ಮೋದಿ ಸೂಚನೆ

ABOUT THE AUTHOR

...view details