ಕರ್ನಾಟಕ

karnataka

ETV Bharat / sports

ಮಹಿಳೆಯರ 10,000 ಮೀ. ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿದ ಸಿಫಾನ್ ಹಸನ್‌

ಈ ಓಟದಲ್ಲಿ ಹಸನ್​​ ಮೊದಲ 1000 ಮೀ. ಅನ್ನು ಕೇವಲ 2 ನಿಮಿಷ 56.12 ಸೆಕೆಂಡುಗಳಲ್ಲಿ ಕ್ರಮಿಸಿದರು. ಇವರಿಗೆ ಡಯೇನ್ ವ್ಯಾನ್ ಎಸ್ ಮತ್ತು ಜಾಕ್‌ಲೈನ್ ರೊಟಿಚ್‌ ನಿಕಟ ಪೈಪೋಟಿ ನೀಡಿದರು. ಇದು ಸಿಫಾನ್‌ ಅವರಿಗೆ ನಾಲ್ಕನೇ ವಿಶ್ವ ದಾಖಲೆಯಾಗಿದೆ.

Sifan Hassan
ಸಿಫಾನ್ ಹಸನ್‌

By

Published : Jun 7, 2021, 9:23 AM IST

ಹೆಂಜೆಲೊ (ನೆದರ್ಲೆಂಡ್ಸ್‌): ನೆದರ್ಲೆಂಡ್ಸ್‌ನ ಓಟಗಾರ್ತಿ ಸಿಫಾನ್‌ ಹಸನ್‌ ಅವರು ಮಹಿಳೆಯರ 10,000 ಮೀಟರ್‌ ಓಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

28 ವರ್ಷ ವಯಸ್ಸಿನ ಹಸನ್‌, ನಿಗದಿತ ದೂರವನ್ನು 29 ನಿಮಿಷ 06.82 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಇಥಿಯೋಪಿಯಾದ ಅಲಮಾಝ್ ಅಯಾನಾ ಅವರು 2016 ರಿಯೊ ಒಲಿಂಪಿಕ್ಸ್‌ನಲ್ಲಿ ನಿರ್ಮಿಸಿದ್ದ ದಾಖಲೆಯನ್ನು (29ನಿ.17.45 ಸೆ.) ಹಿಂದಿಕ್ಕಿದರು.

‘ವಿಶ್ವ ದಾಖಲೆಯ ಓಟ ಸಾಕಾರವಾಗುವುದೆಂದು ಕನಸಿನಲ್ಲಷ್ಟೇ ಯೋಚಿಸಿದ್ದೆ. ಟೋಕಿಯೊ ಒಲಿಂಪಿಕ್ಸ್‌ಗೆ ನಾವು ಸಜ್ಜಾಗಲು ಪಡುತ್ತಿರುವ ಪರಿಶ್ರಮವನ್ನು ಇದು ಸಾಬೀತುಮಾಡಿದೆ. ಡಚ್‌ (ನೆದರ್ಲೆಂಡ್ಸ್‌ ದೇಶದ) ಅಭಿಮಾನಿಗಳ ಎದುರು ಈ ದಾಖಲೆ ಮೂಡಿರುವುದರಿಂದ ಸಂತಸವಾಗಿದೆ' ಎಂದು ಸಾಧಕಿ ಹಸನ್‌ ಹೇಳಿದರು.

ಈ ಓಟದಲ್ಲಿ ಹಸನ್​​ ಮೊದಲ 1000 ಮೀ. ಅನ್ನು ಕೇವಲ 2 ನಿಮಿಷ 56.12 ಸೆಕೆಂಡುಗಳಲ್ಲಿ ಕ್ರಮಿಸಿದರು. ಇವರಿಗೆ ಡಯೇನ್ ವ್ಯಾನ್ ಎಸ್ ಮತ್ತು ಜಾಕ್‌ಲೈನ್ ರೊಟಿಚ್‌ ನಿಕಟ ಪೈಪೋಟಿ ನೀಡಿದರು. ಇದು ಸಿಫಾನ್‌ ಅವರಿಗೆ ನಾಲ್ಕನೇ ವಿಶ್ವ ದಾಖಲೆ. ಯುರೋಪಿಯನ್‌ ಕೂಟದಲ್ಲಿ ಪೌಲಾ ರ‍್ಯಾಡ್‌ಕ್ಲಿಫ್‌ ದೀರ್ಘಕಾಲದಿಂದ ಮಹಿಳೆಯರ 10,000 ಮೀ. ಓಟದಲ್ಲಿ ಹೊಂದಿದ್ದ ದಾಖಲೆಯನ್ನು ಸಿಫಾನ್‌ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮುರಿದಿದ್ದರು.

ABOUT THE AUTHOR

...view details