ಕರ್ನಾಟಕ

karnataka

ETV Bharat / sports

'ನೀವು ಯಾವಾಗಲೂ ನನ್ನ ಚಾಂಪಿಯನ್​': ಸೈನಾ ಕ್ಷಮೆ ಯಾಚಿಸಿದ ನಟ ಸಿದ್ಧಾರ್ಥ್​ - ನಟ ಸಿದ್ಧಾರ್ಥ್ ಟ್ವೀಟ್​

ಪ್ರಧಾನಿ ಮೋದಿಗೆ ಭದ್ರತಾ ಲೋಪ ಪ್ರಕರಣ ಕುರಿತಂತೆ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರ ಟ್ವೀಟ್​ಗೆ ಅವಹೇಳನಕಾರಿ ಪದ ಬಳಸಿ ಪ್ರತಿಕ್ರಿಯಿಸಿದ್ದ ತಮಿಳು ನಟ ಸಿದ್ಧಾರ್ಥ್​, ನಿನ್ನೆ ಸೈನಾ ಬಳಿ ಕ್ಷಮೆ ಕೋರಿದ್ದಾರೆ.

Actor Siddharth apology to Saina Nehwal
ಸೈನಾ ಕ್ಷಮೆ ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್​

By

Published : Jan 12, 2022, 9:32 AM IST

Updated : Jan 12, 2022, 9:51 AM IST

ಮುಂಬೈ:ಪ್ರಧಾನಿ ಮೋದಿಗೆ ಭದ್ರತಾ ಲೋಪ ಪ್ರಕರಣ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಟ್ವೀಟ್ ಟೀಕಿಸುವ ಭರದಲ್ಲಿ ಅವಹೇಳನಕಾರಿ ಪದ ಬಳಸಿದ್ದ ತಮಿಳು ನಟ ಸಿದ್ಧಾರ್ಥ್​ ಸೈನಾ ಬಳಿ ಕ್ಷಮೆಯಾಚಿಸಿದ್ದಾರೆ. ಸಿದ್ಧಾರ್ಥ್​ ಟ್ವೀಟ್​ಗೆ ಎಲ್ಲೆಡೆಯಿಂದ ಭಾರಿ ಟೀಕೆ ವ್ಯಕ್ತವಾಗಿತ್ತು.

ಪಂಜಾಬ್​​ನಲ್ಲಿ ಪ್ರಧಾನಿ ಮೋದಿ ಅವರಿಗೆ ಆದ ಭದ್ರತಾ ಲೋಪಕ್ಕೆ ಆಕ್ರೋಶ ವ್ಯಕ್ತಪಡಿಸಿ ಜನವರಿ 5ರಂದು ಟ್ವೀಟ್‌ ಮಾಡಿದ್ದ ಬ್ಯಾಡ್ಮಿಂಟನ್ ತಾರೆ​, 'ತನ್ನ ಸ್ವಂತ ಪ್ರಧಾನಿಯ ಭದ್ರತೆಗೆ ಧಕ್ಕೆ ಉಂಟಾದರೆ ಯಾವುದೇ ರಾಷ್ಟ್ರವು ತಾನು ಸುರಕ್ಷಿತ ಎಂದು ಹೇಳಿಕೊಳ್ಳುವುದಿಲ್ಲ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದು ಮೋದಿ ಮೇಲಿನ ಅರಾಜಕತಾವಾದಿಗಳ ಹೇಡಿತನದ ದಾಳಿ' ಎಂದು ಬೇಸರ ವ್ಯಕ್ತಪಡಿಸಿದ್ದರು.

ಸೈನಾ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದ ನಟ ಸಿದ್ಧಾರ್ಥ್, "ಜಗತ್ತಿನ ಸಟ್ಲ್‌ ಕಾಕ್ ಚಾಂಪಿಯನ್‌... ದೇಶವನ್ನು ರಕ್ಷಿಸುವ ಜನರು ನಮ್ಮಲ್ಲಿದ್ದಾರೆ" ಎಂದು ಅಶ್ಲೀಲ, ವ್ಯಂಗ್ಯಾತ್ಮಕ ಟ್ವೀಟ್‌ ಮಾಡಿದ್ದರು. ಈ ಬಗ್ಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿತ್ತು. ಮಗಳ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿದ ಸಿದ್ಧಾರ್ಥ್ ಬಗ್ಗೆ ಪ್ರತಿಕ್ರಿಯಿಸಿದ್ದ ಸೈನಾ ತಂದೆ ಹರ್ವಿರ್ ಸಿಂಗ್, ಸಿದ್ಧಾರ್ಥ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು.

ಈ ಬಗ್ಗೆ ಟ್ವಿಟರ್​ನಲ್ಲಿ ಪತ್ರವೊಂದನ್ನು ಲಗತ್ತಿಸಿರುವ ಸಿದ್ಧಾರ್ಥ್​ ಸೈನಾ ನೆಹ್ವಾಲ್​ ಬಳಿ ಕ್ಷಮೆ ಕೋರಿದ್ದಾರೆ. 'ಪ್ರಿಯ ಸೈನಾ, ಕೆಲ ದಿನಗಳ ಹಿಂದೆ ನಿಮ್ಮ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಬರೆದ ನನ್ನ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಅನೇಕ ವಿಷಯಗಳಲ್ಲಿ ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರಬಹುದು, ಆದರೆ ನಾನು ನಿಮ್ಮ ಟ್ವೀಟ್ ಓದಿದಾಗ ನಿರಾಶೆ ಅಥವಾ ಕೋಪಗೊಂಡಿದ್ದೆ' ಎಂದಿದ್ದಾರೆ.

ಅಲ್ಲದೆ ನನ್ನ ಟ್ವೀಟ್​ನಲ್ಲಿ 'ದುರುದ್ದೇಶಪೂರಿತ' ಉದ್ದೇಶ ಹೊಂದಿಲ್ಲ, ಅಲ್ಲದೇ ತಾನೊಬ್ಬ 'ಸ್ತ್ರೀವಾದಿ ಮಿತ್ರ' ಎಂದು ಸಿದ್ದಾರ್ಥ್​ ಸ್ಪಷ್ಟಪಡಿಸಿದ್ದಾರೆ. ನನ್ನ ಟ್ವೀಟ್‌ನಲ್ಲಿ ಯಾವುದೇ ಲಿಂಗದ ಬಗ್ಗೆ ಬರೆದಿರಲಿಲ್ಲ. ಅಲ್ಲದೇ, ಖಂಡಿತವಾಗಿಯೂ ಮಹಿಳೆಯ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ನಾವು ಈ ವಿಚಾರಕ್ಕೆ ಅಂತ್ಯ ಹಾಡೋಣ, ನೀವು ನನ್ನ ಪತ್ರವನ್ನು ಸ್ವೀಕರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಆತನನ್ನು ಒಬ್ಬ ನಟನಾಗಿ ಇಷ್ಟಪಡುತ್ತಿದ್ದೆ, ಆದ್ರೆ ಬಳಸಿದ ಪದ ಸರಿಯಲ್ಲ: ಸೈನಾ ನೆಹ್ವಾಲ್‌ ​

Last Updated : Jan 12, 2022, 9:51 AM IST

ABOUT THE AUTHOR

...view details