ಕರ್ನಾಟಕ

karnataka

ETV Bharat / sports

ಏಷ್ಯನ್ ಕುಸ್ತಿ ಚಾಂಪಿಯನ್ ‌ಶಿಪ್‌: ಸಾಕ್ಷಿ ಮಲಿಕ್ ಆಯ್ಕೆ - ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ

ಕಳೆದ ವಾರ ನಡೆದ ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಭಾರತೀಯ ರೆಸ್ಲರ್‌ ಸಾಕ್ಷಿ ಮಲಿಕ್ 62 ಕೆ.ಜಿ ವಿಭಾಗದಲ್ಲಿ ಸೋನಮ್ ಮಲಿಕ್ ವಿರುದ್ಧ ಸೋಲು ಕಂಡಿದ್ದರು. ಹಾಗಾಗಿ ಅವರನ್ನು 65 ಕೆ.ಜಿ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ.

Sakshi Malik
ಸಾಕ್ಷಿ ಮಲಿಕ್

By

Published : Mar 28, 2021, 11:53 AM IST

ನವದೆಹಲಿ: ಮುಂದಿನ ತಿಂಗಳು ಕಜಕಿಸ್ತಾನದ ಅಲ್ಮಾಟಿಯಲ್ಲಿ ನಡೆಯುವ ಏಷ್ಯನ್ ಕುಸ್ತಿ ಚಾಂಪಿಯನ್‌‌ಶಿಪ್‌ ಟೂರ್ನಿನಲ್ಲಿ ರಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ 65 ಕೆ.ಜಿ ಫ್ರೀಸ್ಟೈಲ್ ವಿಭಾಗದ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಭಾರತೀಯ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ತಿಳಿಸಿದೆ.

ಲಕ್ನೋದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ತರಬೇತಿ ಕೇಂದ್ರದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಆಯ್ಕೆ ಪ್ರಯೋಗಗಳಲ್ಲಿ 72 ಕೆ.ಜಿ ವಿಭಾಗದಲ್ಲಿ ದಿವ್ಯಾ ಕಕ್ರನ್ ಆಯ್ಕೆಯಾದರೆ, 59 ಕೆ.ಜಿ. ಮತ್ತು 55 ಕೆಜಿ ವಿಭಾಗದಲ್ಲಿ ಪಿಂಕಿ ಆಯ್ಕೆಯಾಗಿದ್ದಾರೆ.

ಕಳೆದ ವಾರ ನಡೆದ ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಸಾಕ್ಷಿ ಮಲಿಕ್‌ 62 ಕೆ.ಜಿ ವಿಭಾಗದಲ್ಲಿ ಸೋನಮ್ ಮಲಿಕ್ ವಿರುದ್ಧ ಸೋಲು ಕಂಡಿದ್ದರು. ಹಾಗಾಗಿ ಅವರನ್ನು 65 ಕೆ.ಜಿ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಶೂಟಿಂಗ್ ವಿಶ್ವಕಪ್.. ಭಾರತಕ್ಕೆ 13ನೇ ಚಿನ್ನದ ಪದಕ ತಂದುಕೊಟ್ಟ ವಿಜಯವೀರ್-ತೇಜಶ್ವಿನಿ ಜೋಡಿ

ABOUT THE AUTHOR

...view details