ಮುಂಬೈ: ಪ್ರೋ ಕಬಡ್ಡಿ ಲೀಗ್‌ನ 10ನೇ ಆವೃತ್ತಿಗೆ ಫ್ರಾಂಚೈಸಿಗಳು ತಮ್ಮ ರಿಟೈನ್ಡ್ ಆಟಗಾರರ ಪಟ್ಟಿ ರಿಲೀಸ್ ಮಾಡಿವೆ. ತಾವು ಉಳಿಸಿಕೊಂಡ ಎಲೈಟ್ ಮತ್ತು ಯುವ ಆಟಗಾರರ ಪಟ್ಟಿಯನ್ನು ಆಯೋಜಕರು ಸೋಮವಾರ ಪ್ರಕಟಿಸಿದ್ದಾರೆ. ಪ್ರತಿ ಫ್ರಾಂಚೈಸಿಯು ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ಮುಂಬರುವ ಆಟಗಾರರ ಹರಾಜಿನಲ್ಲಿ ಮತ್ತಷ್ಟು ಬಲಿಷ್ಠ ತಂಡ ಕಟ್ಟಲು ಸಜ್ಜಾಗುತ್ತಿವೆ.
ಎಲೈಟ್ ರಿಟೈನ್ಡ್ ಪ್ಲೇಯರ್ಸ್ (ERP) ವಿಭಾಗದಲ್ಲಿ 22, ರಿಟೈನ್ಡ್ ಯೂತ್ ಪ್ಲೇಯರ್ಸ್ (RYP) ವಿಭಾಗದಲ್ಲಿ 24 ಮತ್ತು ಎಕ್ಸಿಸ್ಟಿಂಗ್ ನ್ಯೂ ಯೂತ್ ಪ್ಲೇಯರ್ಸ್ (ENYP) ವಿಭಾಗದಲ್ಲಿ 38 ಸೇರಿದಂತೆ ಒಟ್ಟು 84 ಆಟಗಾರರನ್ನು 3 ವಿಭಾಗಗಳಲ್ಲಿ ಫ್ರಾಂಚೈಸಿಗಳು ಉಳಿಸಿಕೊಂಡಿವೆ.
ಪ್ರೋ ಕಬಡ್ಡಿಯ ಪ್ರಮುಖ ಆಟಗಾರ ಪರ್ದೀಪ್ ನರ್ವಾಲ್ ಅವರನ್ನು ಯುಪಿ ಯೋಧಾಸ್ ಉಳಿಸಿಕೊಂಡರೆ, ಅಸ್ಲಾಂ ಮುಸ್ತಫಾ ಇನಾಮ್ದಾರ್‌ರನ್ನು ಪುಣೇರಿ ಪಲ್ಟನ್ ಉಳಿಸಿಕೊಂಡಿದೆ. ಸೀಸನ್ 9ರ ಮೋಸ್ಟ್ ವ್ಯಾಲ್ಯೂಬಲ್ ಆಟಗಾರ ಪ್ರಶಸ್ತಿ ವಿಜೇತ ಅರ್ಜುನ್ ದೇಶ್ವಾಲ್ ಅವರನ್ನು ಜೈಪುರ ಪಿಂಕ್ ಪ್ಯಾಂಥರ್ಸ್ ತನ್ನಲ್ಲೇ ಉಳಿಸಿಕೊಂಡಿದೆ. ಪವನ್ ಸೆಹ್ರಾವತ್ ಮತ್ತು ವಿಕಾಶ್ ಕಂಡೋಲಾ ಸೇರಿದಂತೆ ತಂಡಗಳು ಉಳಿಸಿಕೊಳ್ಳದ ಆಟಗಾರರ ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 8, 9ರಂದು ಮುಂಬೈನಲ್ಲಿ ನಡೆಯಲಿದೆ.
ಪ್ರೋ ಬಡ್ಡಿ ಲೀಗ್‌ನ ಮಾಶಾಲ್ ಸ್ಪೋರ್ಟ್ಸ್ ಮುಖ್ಯಸ್ಥ ಮತ್ತು ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ಮಾತನಾಡಿ, "ಎಲ್ಲ ತಂಡಗಳಲ್ಲಿ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಪ್ರೋ ಕಬಡ್ಡಿ ಲೀಗ್ ಸೀಸನ್ 10 ಉತ್ತಮ ಸ್ಪರ್ಧೆಯಾಗುವ ಭರವಸೆ ಮೂಡಿಸಿದೆ. ಆಟಗಾರರ ಹರಾಜು ಕೂಡ ಸಂಪೂರ್ಣವಾಗಿ ಗಮನ ಸೆಳೆಯಲಿರುವ ಪ್ರಕ್ರಿಯೆ. ಹಲವು ಪ್ರತಿಭಾನ್ವಿತ ಆಟಗಾರರು ಹರಾಜಿಗೆ ಮರಳಿದ್ದಾರೆ, ಕೆಲವು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಪುನರ್ ನಿರ್ಮಿಸಲು ಮತ್ತು ಬಲಪಡಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತವೆ" ಎಂದರು.
ಪ್ರೋ ಕಬಡ್ಡಿಗೆ ರಿಟೈನ್ಡ್ ಆಟಗಾರರ ಪಟ್ಟಿ ಹೀಗಿದೆ:
ಬೆಂಗಳೂರು ಬುಲ್ಸ್:ನೀರಜ್ ನರ್ವಾಲ್ (ERP), ಭರತ್ (RYP), ಸೌರಭ್ ನಂದಾಲ್ (RYP), ಅಮನ್ (ENYP) ಮತ್ತು ಯಶ್ ಹೂಡಾ (ENYP)
ಬೆಂಗಾಲ್ ವಾರಿಯರ್ಸ್ :ವೈಭಾವ್ ಭಾವುಸಾಹೇಬ್ ಗರ್ಜೆ (ENYP), ಆರ್.ಗುಹಾನ್ (ENYP) ಸುಯೋಗ್ ಬಬನ್ ಗಾಯ್ಕರ್ (ENYP) ಮತ್ತು ಪರ್ಶಾಂತ್ ಕುಮಾರ್ (ENYP)
ದಬಾಂಗ್ ಡೆಲ್ಲ:ಕೆ.ಸಿ ನವೀನ್ ಕುಮಾರ್ (RYP), ವಿಜಯ್ (ENYP), ಮಂಜೀತ್ (ENYP), ಆಶೀಶ್ ನರ್ವಾಲ್ (ENYP) ಮತ್ತು ಸೂರಜ್ ಪನ್ವಾರ್ (ENYP)
ಗುಜರಾತ್ ಜೈಂಟ್ಸ್:ಮಂಜು (ERP), ಸೋನು (ERP), ರಾಕೇಶ್ (RYP), ಪ್ರತೀಕ್ ದಹಿಯಾ (ENYP) ಮತ್ತು ರೋಹನ್ ಸಿಂಗ್ (ENYP)