ಕೌಲಾಲಂಪುರ (ಮಲೇಷ್ಯಾ): ಭಾರತದ ಸ್ಟಾರ್ ಷಟ್ಲರ್ ಹೆಚ್‌ಎಸ್ ಪ್ರಣಯ್ ಮಲೇಷ್ಯಾ ಮಾಸ್ಟರ್ಸ್‌ನ ಪುರುಷರ ಸಿಂಗಲ್ಸ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇಂದು ನಡೆದ ಸೆಮೀಸ್ನಲ್ಲಿ ಇಂಡೋನೇಷ್ಯಾದ ಕ್ರಿಶ್ಚಿಯನ್ ಆದಿನಾಟಾ ಅವರು ಪಂದ್ಯದ ನಡುವೆ ಗಾಯಕ್ಕೆ ತುತ್ತಾದರು ಇದರಿಂದ ಲೀಡ್ನಲ್ಲಿದ್ದ ಎಚ್‌ಎಸ್ ಪ್ರಣಯ್ ಫೈನಲ್ ಟಿಕೆಟ್ ಪಡೆದುಕೊಂಡರು.
ಸೆಮಿಫೈನಲ್ನಲ್ಲಿ ವಿಶ್ವದ 9ನೇ ಶ್ರೇಯಾಂಕದ ಪ್ರಣಯ್ ಅವರು 19-17ರಲ್ಲಿ ಮುನ್ನಡೆಯಲ್ಲಿದ್ದರು, ಆಗ ಆದಿನಾಟಾ ಅವರು ಜಂಪ್ ರಿಟರ್ನ್ ನಂತರ ಲ್ಯಾಂಡಿಂಗ್ ಮಾಡುವಾಗ ಬ್ಯಾಲೆಂನ್ಸ್ ಕಳೆದುಕೊಂಡರು. ಇದರಿಂದ ಅವರ ಪಾದದ ಮೇಲೆ ಒತ್ತಡ ಹೆಚ್ಚಾಯಿತು ಮತ್ತು ಅವರ ಎಡ ಮೊಣಕಾಲು ಗಂಭೀರ ಗಾಯಕ್ಕೆ ಒಳಗಾಯಿತು. ನೋವು ತೀವ್ರವಾಗಿ ಇದ್ದ ಕಾರಣ ಅವರು ಗೇಮ್ ಕ್ವಿಟ್ ಮಾಡಿದರು, ಇದರಿಂದ ಮುನ್ನಡೆಯಲ್ಲಿದ್ದ ಪ್ರಣಯ್ ಅಂತಿಮ ಹಂತ ತಲುಪಿದರು.
ಪ್ರಣಯ್ ಅವರು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ಮತ್ತು ಚೈನೀಸ್ ತೈಪೆಯ ಲಿನ್ ಚುನ್-ಯಿ ನಡುವಿನ ಮತ್ತೊಂದು ಸೆಮಿಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ಇದು ಪ್ರಣಯ್ ಅವರ ಈ ಋತುವಿನಲ್ಲಿ ಮೊದಲ ಫೈನಲ್ ಆಗಿದ್ದು, ಕಳೆದ ವರ್ಷ ಸ್ವಿಸ್ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದ ನಂತರ ಇದು ಎರಡನೇ ಪಂದ್ಯವಾಗಿದೆ.
ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ವಿರುದ್ಧ 14-21, 17-21 ರಿಂದ ಸೆಮಿಪೈನಲ್ನಲ್ಲಿ ಸೋಲು ಅನುಭವಿಸಿದರು. ಇದರಿಂದ ಮಹಿಳೆಯರ ಸಿಂಗಲ್ಸ್ನ ಪ್ರಶಸ್ತಿ ನಿರೀಕ್ಷೆ ಹುಸಿಯಾಗಿದೆ. ಇಂಡೋನೇಷ್ಯಾದ ಆಟಗಾರ್ತಿ ವಿರುದ್ಧ ಇದುವರೆಗೂ ಸಿಂಧು ಸತತ ಏಳು ಗೆಲುವು ಕಂಡಿದ್ದರು, ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.