ಕರ್ನಾಟಕ

karnataka

By

Published : Jul 28, 2022, 7:21 PM IST

ETV Bharat / sports

44ನೇ ಚೆಸ್​ ಒಲಿಂಪಿಯಾಡ್​ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ.. ಭಾರತ, ಲಂಕಾ ಸೇರಿ 61 ದೇಶಗಳು ಭಾಗಿ

ಪ್ರತಿಷ್ಠಿತ ಚೆಸ್‌ ಒಲಿಂಪಿಯಾಡ್​ಗೆ ಅಧಿಕೃತ ಚಾಲನೆ ಸಿಕ್ಕಿದೆ. ಚೆನ್ನೈನಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ.

PM Narendra Modi declares 44th Chess Olympiad
PM Narendra Modi declares 44th Chess Olympiad

ಚೆನ್ನೈ(ತಮಿಳುನಾಡು):ಬಹುನಿರೀಕ್ಷಿತ 44ನೇ ಚೆಸ್ ಒಲಿಂಪಿಯಾಡ್​ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ಮೂಲಕ ಮುಂದಿನ ಎರಡು ವಾರಗಳ ಕಾಲ ತಮಿಳುನಾಡಿನ ಚೆನ್ನೈನಲ್ಲಿ ಚದುರಂಗದ ಚಮತ್ಕಾರ ನಡೆಯಲಿದೆ. ಇದೇ ಮೊದಲ ಬಾರಿ ಭಾರತದಲ್ಲಿ ಅಂತಾರಾಷ್ಟ್ರೀಯ ಚೆಸ್​​ ಕ್ರೀಡಾಕೂಟ ಆಯೋಜನೆಗೊಂಡಿದ್ದು, ಆತಿಥೇಯ ಭಾರತಕ್ಕೆ ಇದೊಂದು ಪ್ರತಿಷ್ಠೆಯ ಪಂದ್ಯಾವಳಿ ಆಗಿದೆ.

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 44ನೇ ಚೆಸ್‌ ಒಲಿಂಪಿಯಾಡ್‌ಗೆ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಜವಾಹರ್‌ ಲಾಲ್‌ ನೆಹರು ಕ್ರೀಡಾಂಗಣದಲ್ಲಿ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಟೂರ್ನಿಯಲ್ಲಿ ರಷ್ಯಾ, ಚೀನಾ ಮತ್ತು ಪಾಕಿಸ್ತಾನ ಗೈರು ಹಾಜರಾಗಿವೆ. ಹೀಗಾಗಿ, ಭಾರತಕ್ಕೆ ಹೆಚ್ಚಿನ ಪದಕ ಹರಿದು ಬರುವ ಸಾಧ್ಯತೆ ಇದೆ.

98 ವರ್ಷಗಳ ಇತಿಹಾಸ ಇರುವ ಚೆಸ್‌ ಒಲಿಂಪಿಯಾಡ್‌ನ 44ನೇ ಆವೃತ್ತಿ ಆಗಸ್ಟ್‌ 10ರವರೆಗೆ ಚೆನ್ನೈನ ಮಲ್ಲಪುರಮ್‌ನ ಪಂಚತಾರಾ ಹೋಟೆಲ್‌ನಲ್ಲಿ ನಡೆಯುತ್ತಿದೆ. 61 ದೇಶಗಳ 350 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಭಾರತದಿಂದಲೂ ಅನೇಕ ಪ್ರತಿಭೆಗಳು ಇದರಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿರಿ:44 ನೇ ಚೆಸ್ ಒಲಿಂಪಿಯಾಡ್​: 8 ತಿಂಗಳ ಗರ್ಭಿಣಿ ಹರಿಕಾ ಕೂಡಾ ಭಾಗಿ

ಭಾಗಿಯಾಗದ ಪಾಕ್​:44ನೇ ಒಲಿಂಪಿಯಾಡ್​​​ನಲ್ಲಿ ಪಾಕಿಸ್ತಾನ ಭಾಗಿಯಾಗಿಲ್ಲ. ಒಲಿಂಪಿಯಾಡ್ ಟಾರ್ಚ್ ರಿಲೇ ಜಮ್ಮು ಮತ್ತು ಕಾಶ್ಮೀರವನ್ನು ಹಾದು ಹೋಗುತ್ತಿದೆ ಎಂದು ಹೇಳಿ ಪಾಕಿಸ್ತಾನ ಚೆಸ್ ಒಲಿಂಪಿಯಾಡ್​​ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಈ ರೀತಿಯ ಹೇಳಿಕೆ ಹಾಗೂ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳುವ ಮೂಲಕ ಪಾಕ್​​ ರಾಜಕೀಯ ಮಾಡಿದೆ ಎಂದಿದ್ದಾರೆ.

ABOUT THE AUTHOR

...view details