ನವದೆಹಲಿ:ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡರೂ, ಚಲ ಬಿಡದ ಮಾನಸಿ ಜೋಷಿ ಆಗಸ್ಟ್ 25 ರಂದು ನಡೆದ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಪಿವಿ ಸಿಂಧು ಆಗಸ್ಟ್ 26 ರಂದು ನಡೆದಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಜಪಾನ್ ಆಟಗಾರ್ತಿಯನ್ನು ಮಣಿಸಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟು ಇಡೀ ದೇಶಕ್ಕೆ ಹೆಮ್ಮೆ ಪಡುವಂತೆ ಮಾಡಿದ್ದರು. ಆದ್ರೆ ಮಾನಸಿ ಜೋಷಿ ಸಿಂಧುಗಿಂತ ಒಂದು ದಿನ ಮೊದಲೆ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವಚಾಂಪಿನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು ಎಂಬುದು ಗಮನಾರ್ಹ. ಅವರ ಹೆಸರು ಎರಡು ದಿನಗಳ ನಂತರ ಟ್ವಿಟರ್ನಲ್ಲಿ ಟ್ರೆಂಡ್ಗೆ ಬಂದಿದ್ದು, ಇಡೀ ದೇಶದ ಜನ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.
30 ವರ್ಷದ ಮಾನಸಿ ಫೈನಲ್ ಪಂದ್ಯದಲ್ಲಿ ಭಾರತದವರೇ ಆದ ಪಾರುಲ್ ಪಾರ್ಮರ್ರನ್ನು 21-12, 21-7 ಗೇಮ್ಗಳಲ್ಲಿ ಗೆಲುವು ಸಾಧಿಸಿ ತಮ್ಮ ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.