ಟೋಕಿಯೋ: ಕೋವಿಡ್ 19 ಸಾಂಕ್ರಾಮಿಕ ಭೀತಿಯಿಂದ 2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾ ಕೂಟ 2021ಕ್ಕೆ ಮೂಂದೂಡಲ್ಪಟ್ಟಿದೆ. ಪರಿಣಾಮ ಕ್ರೀಡಾಕೂಟದ ಖರ್ಚಿನಲ್ಲಿ ಶೇ.22 ರಷ್ಟು ಹೆಚ್ಚಾಗಿದೆ ಎಂದು ಸ್ಥಳೀಯ ಸಂಘಟಕರ ಸಮಿತಿ ತಿಳಿಸಿದೆ.
ಕಳೆದ ಬಜೆಟ್ ಪ್ರಕಾರ ಒಲಿಂಪಿಕ್ಗೆ 12.6 ಬಿಲಿಯನ್ ಯುಎಸ್ ಡಾಲರ್ ( ಸುಮಾರು 93 ಸಾವಿರ ಕೋಟಿ) ಮೊತ್ತವನ್ನು ನಿಗದಿ ಮಾಡಲಾಗಿತ್ತು. ಆದರೆ, ಇದೀಗ ಹೊಸ ಬಜೆಟ್ ಬಿಡುಗಡೆ ಮಾಡಿದ್ದು, ಶೇ.22ರಷ್ಟು ಏರಿಕೆಯಾಗಿದೆ. ಆಯೋಕರು ನೀಡಿರುವ ಹೇಳಿಕೆಯಂತೆ 2021ರ ಟೋಕಿಯೋ ಒಲಿಂಪಿಕ್ಸ್ ನ ಖರ್ಚು 15.4 ಬಿಲಿಯನ್ ಯುಎಸ್ ಡಾಲರ್ ಆಗಲಿದೆ ಎಂದು ತಿಳಿದು ಬಂದಿದೆ.