ಭುವನೇಶ್ವರ :ಟೋಕಿಯೊ ಒಲಿಂಪಿಕ್ಸ್ನಲ್ಲಿ ನಾಲ್ಕು ದಶಕಗಳ ನಂತರ ಪದಕ ಗೆದ್ದು ಸಾಧನೆ ಮಾಡಿದ ಭಾರತ ಹಾಕಿ ತಂಡಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ಟಾಯಕ್ ಖುಷಿ ಸುದ್ದಿ ನೀಡಿದ್ದಾರೆ. 2023ರವರೆಗಿದ್ದ ಪ್ರಾಯೋಜಕತ್ವವನ್ನು 2033ರವರೆಗೆ ವಿಸ್ತರಿಸುವುದಾಗಿ ಮಂಗಳವಾರ ಘೋಷಣೆ ಮಾಡಿದ್ದಾರೆ.
ಮಂಗಳವಾರ ಒಲಿಂಪಿಕ್ಸ್ನಲ್ಲಿ ಅದ್ಭುತ ಸಾಧನೆ ಮಾಡಿದ ಮಹಿಳಾ ಮತ್ತು ಪುರುಷ ತಂಡಗಳಿಗೆ ಅದ್ದೂರಿ ಸ್ವಾಗತ ನೀಡಿದ ಒಡಿಶಾ ಸರ್ಕಾರ, ಎಲ್ಲಾ ಆಟಗಾರರನ್ನು ಸತ್ಕರಿಸಿತಲ್ಲದೆ, ಮುಂದಿನ 10 ವರ್ಷಗಳ ಕಾಲ ತಮ್ಮ ಪ್ರಾಯೋಜಕತ್ವ ಮುಂದುವರಿಯಲಿದೆ ಎಂದು ಘೋಷಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಆಟಗಾರರಿಗೆ ತಲಾ 10 ಲಕ್ಷ ಮತ್ತು ಸಹಾಯಕ ಸಿಬ್ಬಂದಿಗೆ 5 ಲಕ್ಷ ರೂ. ನಗದು ಬಹುಮಾನ ನೀಡಿದರು. ತಮ್ಮನ್ನು ಗೌರವಿಸಿದ ನವೀನ್ ಪಟ್ನಾಯಕ್ ಅವರಿಗೆ ಎರಡೂ ತಂಡಗಳು ತಮ್ಮ ಆಟೋಗ್ರಾಫ್ ಇರುವ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಟ್ನಾಯಕ್, ಟೋಕಿಯೊದಲ್ಲಿ ನಿಮ್ಮ ಸ್ಫೂರ್ತಿದಾಯಕ ಹೋರಾಟದಿಂದ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದೀರಾ.. ಇದು ಭಾರತೀಯ ಹಾಕಿ ಪುನರುಜ್ಜೀವನಕ್ಕೆ ಸಾಕ್ಷಿಯಾದ, ಆಳವಾದ ಭಾವನಾತ್ಮಕ ಕ್ಷಣವಾಗಿತ್ತು ಎಂದು ಎರಡು ತಂಡಗಳ ಆಟಗಾರ್ತಿಯರನ್ನು ಪ್ರಶಂಸಿಸಿದರು.
ಇದನ್ನು ಓದಿ : ಒಲಿಂಪಿಕ್ಸ್ ನಂತರ ಏಷ್ಯನ್ ಗೇಮ್ಸ್ ಪದಕದ ಮೇಲೆ ಕಣ್ಣಿಟ್ಟ ಮೀರಾಬಾಯಿ