ಕರ್ನಾಟಕ

karnataka

ETV Bharat / sports

ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾಗೆ 'ಪರಮ್​ ವಿಶಿಷ್ಠ ಸೇವಾ ಪದಕ' ಪ್ರದಾನ

ನೀರಜ್​ ಟೋಕಿಯೋ ಒಲಿಂಪಿಕ್ಸ್​ನ ಜಾವಲಿನ್ ಥ್ರೋ ವಿಭಾಗದಲ್ಲಿ 87.58 ಮೀಟರ್ ದೂರ ಎಸೆದು ಚಿನ್ನದ ಪದಕ ಪಡೆದಿದ್ದಾರೆ. ಈ ಮೂಲಕ ಒಲಿಂಪಿಕ್ಸ್​ ಇತಿಹಾಸದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು..

Neeraj Chopra to be awarded with Param Vashistha Seva Medal on Republic Day
ನೀರಜ್​ ಚೋಪ್ರಾಗೆ ಪರಮ್​ ವಿಶಿಷ್ಠ ಸೇವಾ' ಪ್ರಶಸ್ತಿ

By

Published : Jan 25, 2022, 6:41 PM IST

ನವದೆಹಲಿ :ಟೋಕಿಯೋ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿರುವ ಜಾವಲಿನ್ ಥ್ರೋವರ್​ ನೀರಜ್​ ಚೋಪ್ರಾ ಪರಮ್ ವಿಶಿಷ್ಟ್​ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗಣರಾಜ್ಯೋತ್ಸವ ಮುನ್ನ ದಿನ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರಿಂದ ನೀರಜ್​ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ಸಂಜೆ ರಾಷ್ಟ್ರಪತಿ ಕೋವಿಂದ್ ಅವರು 384 ರಕ್ಷಣಾ ಸಿಬ್ಬಂದಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಿದ್ದಾರೆ. ಈ ಸಂದರ್ಭದಲ್ಲಿ 12 ಮಂದಿಗೆ ಶೌರ್ಯ ಚಕ್ರ ಪ್ರಶಸ್ತಿ, 29 ಪರಮ್​ ವಿಶಿಷ್ಠ್​ ಸೇವಾ ಪದಕ, 4 ಉತ್ತಮ್ ಯುಧ್ ​ಸೇವಾ ಪದಕಗಳು, 53 ಅತಿ ವಿಶಿಷ್ಠ ಸೇವಾ ಪದಕಗಳು, 13 ಯುಧ್​ ಸೇವಾ ಪದಕಗಳು ಮತ್ತು ಮೂರು ವಿಶಿಷ್ಠ್​ ಸೇವಾ ಪದಕಗಳನ್ನು ನೀಡಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ನೀರಜ್​ ಚೋಪ್ರಾ ಭಾರತೀಯ ಸೇನೆಯಲ್ಲಿ ಸುಬೇದಾರ್​ ಆಗಿದ್ದಾರೆ. ಅವರು 2016ರಲ್ಲಿ ಸೇನೆ ಸೇರಿದ್ದರು. ಅವರನ್ನು ಪುಣೆಯ ಮಿಷನ್ ಒಲಿಂಪಿಕ್ಸ್ ವಿಂಗ್ ಮತ್ತು ಆರ್ಮಿ ಸ್ಪೋರ್ಟ್ಸ್​ ಇನ್​ಸ್ಟಿಟ್ಯೂಟ್​ನಲ್ಲಿ ತರಬೇತಿಗೆ ಆಯ್ಕೆ ಮಾಡಲಾಗಿತ್ತು.

ನೀರಜ್​ ಟೋಕಿಯೋ ಒಲಿಂಪಿಕ್ಸ್​ನ ಜಾವಲಿನ್ ಥ್ರೋ ವಿಭಾಗದಲ್ಲಿ 87.58 ಮೀಟರ್ ದೂರ ಎಸೆದು ಚಿನ್ನದ ಪದಕ ಪಡೆದಿದ್ದಾರೆ. ಈ ಮೂಲಕ ಒಲಿಂಪಿಕ್ಸ್​ ಇತಿಹಾಸದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು.

2017ರ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ, 2018ರ ಏಷ್ಯನ್ ಗೇಮ್ಸ್‌ ಮತ್ತು 2018ರ ಕಾಮನ್​ವೆಲ್ತ್ ಗೇಮ್ಸ್​ನಲ್ಲೂ ಚಿನ್ನದ ಪದಕ ಪಡೆದಿದ್ದರು. ಇತ್ತೀಚೆಗೆ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ನೀರಜ್​ ಚೋಪ್ರಾಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು

ಇದನ್ನೂ ಓದಿ: ಐಸಿಸಿ ಟಿ20 ರ‍್ಯಾಂಕಿಂಗ್‌ : ಅಗ್ರಸ್ಥಾನಕ್ಕೆ ಮರಳಿದ ಭಾರತದ ಶೆಫಾಲಿ ವರ್ಮಾ

ABOUT THE AUTHOR

...view details