ನವದೆಹಲಿ: ವಿಶ್ವಪ್ರಸಿದ್ದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದೇನೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಸಾಹಸ ಕ್ರೀಡೆ ಪ್ರಶಸ್ತಿಯಾದ 'ಟೆನ್ಜಿಂಗ್ ನಾರ್ಗೆ' ಪ್ರಶಸ್ತಿಗೆ ಶಿಫಾರಸುಗೊಂಡಿದ್ದ ಪರ್ವತಾರೋಹಿ ನರೇಂದರ್ ಸಿಂಗ್ ಯಾದವ್ ಸುಳ್ಳು ದಾಖಲೆ ಸೃಷ್ಟಿಸಿ ಪ್ರಶಸ್ತಿಗೆ ಪ್ರಯತ್ನಿಸಿದ್ದಾರೆ ಎಂದು ಕ್ರೀಡಾ ಸಚಿವಾಲಯ ಖಚಿತಪಡಿಸಿದೆ.
ನರೇಂದರ್ ಮೌಂಟ್ ಎವರೆಸ್ಟ್ ಏರಿಲ್ಲ, ಅವರು ಸುಳ್ಳು ಫೋಟೋಗಳನ್ನು ಸಲ್ಲಿಸಿರುವುದು ರುಜುವಾತಾಗಿದೆ. ಹಾಗಾಗಿ ಅವರಿಗೆ ಟೆನ್ಜಿಂಗ್ ನಾರ್ಗೆ ಪ್ರಶಸ್ತಿ ನೀಡಲಾಗುವುದಿಲ್ಲ ಎಂದು ಕ್ರೀಡಾ ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ.
ಯಾದವ್ ಮತ್ತು ಅವರ ಸಹ ಪರ್ವತಾರೋಹಿ ಸೀಮಾ ರಾಣಿ ಅವರನ್ನು ನೇಪಾಳ ಸರ್ಕಾರ ಹಿಮಾಲಯನ್ ದೇಶದಲ್ಲಿ ಆರು ವರ್ಷಗಳ ಕಾಲ ಪರ್ವತಾರೋಹಣ ಮಾಡುವುದನ್ನು ನಿಷೇಧಿಸಿದೆ. ಜೊತೆಗೆ 2016ರಲ್ಲಿ ವಿಶ್ವದ ಅತ್ಯುನ್ನತ ಮೌಂಟ್ ಎವರೆಸ್ಟ್ ಏರಿದ ಬಗ್ಗೆ ನಕಲಿ ದಾಖಲೆಗಳನ್ನು ಸಲ್ಲಿಸಿದ್ದ ಪ್ರಮಾಣಪತ್ರಗಳನ್ನು ರದ್ದುಪಡಿಸಿದೆ.