ಹೆಣ್ಣಾಗಿ ಹುಟ್ಟಿ ತನ್ನ ಕನಸುಗಳನ್ನು ಇಡೇರಿಸಿಕೊಳ್ಳಲು ಮನೆಯಿಂದ ಹೊರಹೋಗುವುದು ಹೇಗೆ ಎನ್ನುತ್ತಿದ್ದ ಕಾಲದಲ್ಲಿ, ತನ್ನ ಪಾಲಿಗೆ ಬಂದ ಹಲವು ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿದ ದಿಟ್ಟಿಗಿತ್ತಿ ಈಕೆ. ಸಮಸ್ಯೆಗಳ ವಿರುದ್ಧ ಹೋರಾಡಿ, ಪತಿಗೆ ಬೇಷರತ್ ಬೆಂಬಲ ನೀಡಿದ ಸತಿಯಾಗಿ ಮತ್ತು ಮಕ್ಕಳನ್ನು ಪೋಷಿಸುತ್ತಲೇ ಬಾಕ್ಸಿಂಗ್ ರಿಂಗ್ನಲ್ಲಿ ತನ್ನದೇ ಆದ ರೀತಿಯಲ್ಲಿ ಆಳ್ವಿಕೆ ನಡೆಸಿ, ದೇಶದ ಅರ್ಧದಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆಂದರೆ ಹೆಮ್ಮೆ ಪಡುವಂತಹ ವಿಷಯವೇ ಸರಿ.
ಹೌದು, ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬಾಕ್ಸಿಂಗ್ ಲೋಕದಲ್ಲಿ ಅದ್ಭುತ ಸಾಧನೆ ಮಾಡಿ, 8 ಬಾರಿ ವಿಶ್ವಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕವನ್ನು ಗೆದ್ದು, ಹಾಗೂ ದೇಶದಲ್ಲೇ ಅತ್ಯಂತ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣ ಪಡೆದಿರುವ ಮೊದಲ ಮಹಿಳಾ ಕ್ರೀಡಾಪಟುವಾಗಿರುವ ಮೇರಿಕೋಮ್ರ ಬಾಕ್ಸಿಂಗ್ ಪ್ರಯಾಣವನ್ನು ನಾವೆಲ್ಲರೂ ಸ್ಮರಿಸಿಕೊಳ್ಳಲೇಬೇಕಾಗಿದೆ.
ಕುಟುಂಬದ ವಿರೋಧದ ನಡುವೆಯೂ ಯಶಸ್ವಿನ ಶಿಖರವೇರಿದ ಕೋಮ್
ಮಣಿಪುರ ಚರ್ಚಂದನ್ ಜಿಲ್ಲೆಯ ಕಾಂಗೆತಲ್ ಗ್ರಾಮದ ತೊನ್ಬಾ ಕೋಮ್ ಆಖಾಮ್ ಕೋಮ್ ದಂಪತಿ ಮಗಳೇ ಈ ಮೇರಿಕೋಮ್. ಬಾಲ್ಯದಲ್ಲಿ ತಿನ್ನಲು ಅನ್ನವಿಲ್ಲದ ಕಾಲ, ಧರಿಸಲು ಬಟ್ಟೆಗಳಿಲ್ಲದೇ ತಂದೆ ತಾಯಿಯರಿಗೆ ವ್ಯವಸಾಯದಲ್ಲಿ ಸಹಾಯ ಮಾಡುತ್ತ ಬೆಳೆದ ಕಾಡಂಚಿನ ಹಳ್ಳಿಯ ಹುಡುಗಿ. ಪೋಷಕರಿಗೆ ವ್ಯವಸಾಯದಲ್ಲಿ ಸಹಾಯ ಮಾಡುತ್ತಲೇ ಬೆಳೆದ ಮೇರಿಗೆ ತಮ್ಮ ಬಾಲ್ಯದ ಬಾಕ್ಸಿಂಗ್ ಲೆಜೆಂಡ್ ಡಿಂಕೋ ಸಿಂಗ್ ಅವರನ್ನು ಸ್ಪೂರ್ತಿಯಾಗಿ ಪಡೆದು ಬಾಕ್ಸಿಂಗ್ನತ್ತ ಒಲವನ್ನು ತೋರಿರುತ್ತಾರೆ. ಅವರು ಎಂದಿಗೂ ವಿದ್ಯಾಬ್ಯಾಸದಲ್ಲಿ ಮುಂದಿದ್ದವರಲ್ಲ. ಬದಲಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತುಂಬಾ ಆಳವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಕಾಲಿಗೆ ಶೂ ಇಲ್ಲದೇ ಬಾಕ್ಸಿಂಗ್ ಇಳಿದಿದ್ದ ಮೇರಿ 37 ವರ್ಷ ಆದಾಗ ದೇಶದಲ್ಲೇ ಟಾಪ್ ಬಾಕ್ಸರ್ ಆಗಿದ್ದರೆಂದರೆ ಅದು ಇತಿಹಾಸ. ಬಾಕ್ಸಿಂಗ್ ಅನ್ನು ಪ್ರೀತಿಸಿ ತಮ್ಮ ಪೋಷಕರಿಂದಲೇ ತಿರಸ್ಕೃತ ಕ್ಕೊಳಗಾಗಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಹಣಕಾಸಿನ ಸಮಸ್ಯೆ ಬಹುವಾಗಿ ಕಾಡಿತ್ತು. ಆದರೆ, 15 ವರ್ಷದ ಹುಡುಗಿ ಇಷ್ಟೆಲ್ಲಾ ಕಷ್ಟದ ನಡುವೆಯೂ ಕೈಗೆ ಬಾಕ್ಸಿಂಗ್ ಗ್ಲೌಸ್ , ತಲೆಗೆ ಹೆಡ್ಸ್ಟ್ರಾಂಗ್ ತೊಟ್ಟು, ತನ್ನ ಬಾಕ್ಸಿಂಗ್ ಪ್ರಯಾಣವನ್ನು ಪ್ರಾರಂಭಿಸಿದ್ದಳು. ನಂತರ ಕುಟುಂಬವು ಅವರ ಮಹಾತ್ವಾಕಾಂಕ್ಷೆಯನ್ನು ಒಪ್ಪಿಕೊಂಡಿತು. 2001ರಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಪ್ರಯಾಣ ಆರಂಭಿಸಿದ ಅವರು ಏಷ್ಯನ್ ಚಾಂಪಿಯನ್ಶಿಪ್, ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್ಶಿಪ್, ಏಷ್ಯನ್ ಇಂಡೋರ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಹಾಗೂ ಒಲಿಂಪಿಕ್ಸ್ನಲ್ಲೂ ಕಂಚು ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಬ್ಬಿಸಿದ್ದಾರೆ.
ಅದ್ಭುತ ಮಹಿಳೆ ಹಾಗೂ ಅತ್ಯುತ್ತಮ ಅಮ್ಮನಾಗಿ ಮೆರಿಕೋಮ್
ಒಬ್ಬ ಯಶಸ್ವಿ ಪುರುಷನ ಹಿಂದೆ ಹೇಗೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುತ್ತಾರೋ ಹಾಗೆ ಮೇರಿಕೋಮ್ ಯಶಸ್ಸಿನ ಹಿಂದೆ ಪುರುಷನಾಗಿ ಅವರ ಗಂಡ ಇದ್ದಾರೆ. ಅವರೇ ಪ್ರಸಿದ್ದ ಫುಟ್ಬಾಲ್ ಆಟಗಾರ ಒನ್ಲರ್ ಕೋಮ್. ಮೇರಿ ಹಾಗೂ ಒನ್ಲರ್ 2001ರಲ್ಲಿ ಮದುವೆಯಾದರು. ಆದರೆ ಮೇರಿ ಮದುವೆಯಾಗಿದ್ದಕ್ಕೆ ಅವರ ಕೋಚ್ಗಳು ಬೇಸರ ವ್ಯಕ್ತಪಡಿಸಿದ್ದರು. ಏಕೆಂದರೆ ಅವರು ಮದುವೆಯಾದ ಬಳಿಕ ಬಾಕ್ಸಿಂಗ್ ತ್ಯಜಿಸಬಹುದೆಂದು ಅವರು ಭಾವಿಸಿದ್ದರು. ಆದರೆ, ಮೇರಿಯ ದೃಢಸಂಕಲ್ಪ ಹಾಗೂ ದೃಢನಿರ್ಧಾರ ಇಡೀ ಜಗತ್ತನ್ನೇ ಬದಲಾಯಿಸಿತು. ಮೇರಿಕೋಮ್ ತಾಯಿಯಾಗುವ ಮುನ್ನ ಗೆದ್ದಿದ್ದಕ್ಕಿಂತ ಹೆಚ್ಚಿನ ಪದಕವನ್ನು ತಾಯಿಯಾದ ಮೇಲೆಯೇ ಗೆಚ್ಚು ಗೆದ್ದರು ಎಂಬುದು ಇಲ್ಲಿನ ವಿಶೇಷ.
ಮದುವೆಯಾದ 2 ವರ್ಷದ ನಂತರ ಮೇರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವರು ಮಕ್ಕಳಿಗೆ ಜನ್ಮ ನೀಡಿದ ನಂತರ ಪತಿ ಒನ್ಲರ್ ಮನೆ ಜವಾಬ್ದಾರಿ ವಹಿಸಿಕೊಂಡರು.ಇತ್ತ ಮೇರಿಕೋಮ್ ತಮ್ಮ ಕನಸಿನ ಬಾಕ್ಸಿಂಗ್ ತರಬೇತಿಗಾಗಿ ರಿಂಗ್ ಇಳಿದೇ ಬಿಟ್ಟರು. ಅಲ್ಲಿಂದ ನಡೆದಿದ್ದೆಲ್ಲಾ ಇತಿಹಾಸ. ಎರಡು ಮಕ್ಕಳ ತಾಯಿಯೆಂಬ ಭಾವನೆಯನ್ನು ಮರೆತು ಹೋರಾಡಿದ ಮೇರಿ ವಿಶ್ವಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ನಾಲ್ಕನೇ ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ್ದರು. ಆಶ್ಚರ್ಯವೆಂದರೆ ಮೇರಿಕೋಮ್ ತಾಯಿಯಾದ ಮೇಲೆ ಹೆಚ್ಚು ಪದಕ ಹಾಗೂ ಯಶಸ್ವಿ ಬಾಕ್ಸರ್ ಎಂದು ಹೆಸರು ಪಡೆದರು. ಅಲ್ಲಿಯವರೆಗೆ ಸೂಪರ್ ವುಮನ್ ಆಗಿದ್ದವರು ಮುಂದೆ ಸೂಪರ್ ಮಾಮ್ಸ್ ಎನಿಸಿಕೊಂಡರು.
ಮಹಾನ್ ಕ್ರೀಡಾಪಟುಗಳ ಸಾಲಿಗೆ ಮೇರಿಕೋಮ್