ನವದೆಹಲಿ: ಆರು ಬಾರಿ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಆಗಿರುವ ಎಂ.ಸಿ.ಮೇರಿ ಕೋಮ್ ಅವರನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್‌ನ (ಎಐಬಿಎ) ಚಾಂಪಿಯನ್ಸ್ ಮತ್ತು ವೆಟರನ್ಸ್ ಕಮಿಟಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
"ಎಐಬಿಎ ನಿರ್ದೇಶಕರ ಮಂಡಳಿಯ ಮತದಾನದ ನಂತರ ಎಐಬಿಎ ಚಾಂಪಿಯನ್ಸ್ ಮತ್ತು ವೆಟರನ್ ಕಮಿಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ನಿಮ್ಮನ್ನು ಆಯ್ಕೆ ಮಾಡಲಾಗಿದೆ. ಈ ವಿಚಾರವನ್ನು ನಾನು ಬಹಳ ಸಂತೋಷದಿಂದ ತಿಳಿಸುತ್ತೇನೆ" ಎಂದು ಎಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್ ಅಲಂಕರಿಸಿದ ಬಾಕ್ಸರ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
"ನಿಮ್ಮ ಅಪಾರ ಜ್ಞಾನ ಮತ್ತು ಅನುಭವದಿಂದ ಈ ಮಹತ್ವದ ಸಮಿತಿಯ ಯಶಸ್ಸಿಗೆ ನೀವು ಅಮೂಲ್ಯ ಕೊಡುಗೆಯನ್ನು ನೀಡುತ್ತೀರಿ ಎಂದು ನನಗೆ ವಿಶ್ವಾಸವಿದೆ" ಎಂದು ಅವರು ಹೇಳಿದರು.