ನವದೆಹಲಿ:ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಗಾಯದ ಕಾರಣ ಮುಂಬರುವ ವಿಶ್ವಚಾಂಪಿಯನ್ಶಿಪ್ನಿಂದ ಹೊರಗುಳಿಯುವುದಾಗಿ ಸೋಮವಾರ ತಿಳಿಸಿದ್ದಾರೆ.
ಒಲಿಂಪಿಕ್ಸ್ಗೂ ಮುನ್ನ ರಷ್ಯಾದಲ್ಲಿ ನಡೆದ ಸ್ಪರ್ಧೆಯ ವೇಳೆ ಮಂಡಿ ಗಾಯಕ್ಕೆ ಒಳಗಾಗಿದ್ದರು. ನಂತರ ಸಂಪೂರ್ಣ ಚೇತರಿಕೆಯಾಗದಿದ್ದರೂ ಒಲಿಂಪಿಕ್ಸ್ನಲ್ಲಿ ಹೋರಾಡಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು. ಇದೀಗ ಗಾಯ ಮತ್ತೆ ಉಲ್ಬಣಗೊಂಡಿದ್ದು, 6 ವಾರಗಳ ಕಾಲ ಪುನಶ್ಚೇತನದಲ್ಲಿರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
ಹಾಗಾಗಿ ಅಕ್ಟೋಬರ್ 2ರಿಂದ 10ರವರೆಗೆ ನಾರ್ವೆಯ ಒಲ್ಸಾದಲ್ಲಿ ನಡೆಯಲಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ನಡೆಯಲಿದೆ. ಬಜರಂಗ್ ಪೂನಿಯಾ ಪುನಶ್ಚೇತನ ಮುಗಿಯುವವರೆಗೆ ಯಾವುದೇ ತರಬೇತಿ ನಡೆಸಲು ಸಾಧ್ಯ ಇಲ್ಲದೇ ಇರುವುದರಿಂದ ಚಾಂಪಿಯನ್ಶಿಪ್ನಿಂದ ಅನಿವಾರ್ಯವಾಗಿ ಹೊರ ಬಂದಿದ್ದಾರೆ.