ಕರ್ನಾಟಕ

karnataka

ETV Bharat / sports

ಜಮ್ಮು ಕಾಶ್ಮೀರದಲ್ಲಿ ಖೇಲೋ ಇಂಡಿಯಾ ಆಯೋಜನೆ.. ಪ್ರವಾಸೋದ್ಯಮಕ್ಕೂ ಕ್ರೀಡೆ ಪುಷ್ಠಿ - Khelo India declared

ಜಮ್ಮು ಕಾಶ್ಮೀರದಲ್ಲಿ ಖೇಲೋ ಇಂಡಿಯಾ- ಖೇಲೋ ಇಂಡಿಯಾ ಗೇಮ್ಸ್- ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್- ಕ್ರೀಡೆಯಿಂದ ಪ್ರವಾಸೋದ್ಯಮ ಉತ್ತೇಜನ- ಲೆಫ್ಟಿನೆಂಟ್​ ಗವರ್ನರ್​ ಮನೋಜ್ ಸಿನ್ಹಾ

Etv Bharat
ಜಮ್ಮು ಕಾಶ್ಮೀರದಲ್ಲಿ ಖೇಲೋ ಇಂಡಿಯಾ

By

Published : Feb 11, 2023, 8:27 AM IST

ಗುಲ್ಮಾರ್ಗ್ (ಜಮ್ಮು ಕಾಶ್ಮೀರ):ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಶುಕ್ರವಾರ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನಲ್ಲಿ 'ಖೇಲೋ ಇಂಡಿಯಾ ಗೇಮ್ಸ್' 3 ನೇ ಆವೃತ್ತಿಯನ್ನು ಉದ್ಘಾಟಿಸಿದರು. ಐದು ದಿನಗಳ ಖೇಲೋ ಇಂಡಿಯಾದಲ್ಲಿ 11 ವಿವಿಧ ಕ್ರೀಡಾಕೂಟಗಳಲ್ಲಿ ದೇಶಾದ್ಯಂತ 1,500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಕ್ರೀಡಾಕೂಟವನ್ನು ಉದ್ಘಾಟಿಸಿದ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಆಟಗಾರರು ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಳೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸುದ್ದಿಯಾಗಿದ್ದ ಆರಿಫ್ ಮುಹಮ್ಮದ್ ಖಾನ್ ಕೂಡ ಜಮ್ಮು ಮತ್ತು ಕಾಶ್ಮೀರದವರೇ ಎಂದು ಹೇಳಿದರು.

ಇತರರು ಸಾಧಿಸದ್ದನ್ನು ಜಮ್ಮು ಮತ್ತು ಕಾಶ್ಮೀರ ಮಾಡಿ ತೋರಿಸಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಆಟಗಾರನೊಬ್ಬ ಪದಕ ಗೆದ್ದಾಗ ಇಡೀ ದೇಶವೇ ಹೆಮ್ಮೆಪಡುತ್ತದೆ. ಪಿವಿ ಸಿಂಧು, ನೀರಜ್ ಚೋಪ್ರಾ ಮತ್ತು ಮೀರಾಬಾಯಿ ಚಾನು ದೇಶದ ಹೆಮ್ಮೆಯ ಸಾಧಕರಾಗಿದ್ದಾರೆ. ಇದು ನವ ಭಾರತದ ಕೊಡುಗೆಯಾಗಿದೆ. ದೇಶದಾದ್ಯಂತ ಕ್ರೀಡಾ ಕೇಂದ್ರಗಳು ಮತ್ತು ಗುಲ್ಮಾರ್ಗ್‌ನಲ್ಲಿ ಚಳಿಗಾಲದ ಕ್ರೀಡಾ ಕೇಂದ್ರವನ್ನು ನಿರ್ಮಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಬಯಕೆಯಾಗಿದೆ ಎಂದು ಅವರು ಹೇಳಿದರು.

ಕಾಶ್ಮೀರದಲ್ಲಿ ಈ ಹಿಂದೆ ಕಲ್ಲು ತೂರಾಟವೇ ಹೆಚ್ಚಾಗಿತ್ತು. ಆದರೆ ಇಂದು, ಫುಟ್ಬಾಲ್, ವುಶು ಮತ್ತು ಇತರ ಕ್ರೀಡೆಗಳನ್ನು ಆಡಲಾಗುತ್ತಿದೆ. ಇದು ಬದಲಾದ ಕಾಶ್ಮೀರದ ನೈಜತೆಯಾಗಿದೆ. ಕೇಂದ್ರ ಸರ್ಕಾರ ಸಾಂಪ್ರದಾಯಿಕ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದೆ. ಗುಲ್ಮಾರ್ಗ್ ಸ್ವರ್ಗವಾಗಿದೆ. ಇಲ್ಲಿ ಸ್ಪರ್ಧೆಗಳನ್ನು ನಡೆಸುವುದು ಶ್ಲಾಘನೀಯ ವಿಷಯವಾಗಿದೆ. ಈ ಬಾರಿ ನಾವು ಉತ್ತಮ ಫಲಿತಾಂಶಗಳನ್ನು ಕಾಣಲಿದ್ದೇವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಮುಂದೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.

ಕ್ರೀಡೆಯಿಂದ ಪ್ರವಾಸೋದ್ಯಮವೂ ಉತ್ತೇಜನ ಪಡೆಯಲಿದೆ. ಕಳೆದ ವರ್ಷದಲ್ಲಿ ಕಣಿವೆಗೆ ಭೇಟಿ ನೀಡಿದ ದಾಖಲೆಯ ಸಂಖ್ಯೆಯ ಪ್ರವಾಸಿಗರೇ ಇದಕ್ಕೆ ಉದಾಹರಣೆ. ಇದು ಕೇವಲ ಪ್ರಾರಂಭವಾಗಿದೆ, ಮುಂದೆ ಎಲ್ಲ ರೀತಿಯಲ್ಲೂ ಮೂಲಸೌಕರ್ಯವನ್ನು ವಿಸ್ತರಿಸಲಾಗುವುದು. ಇದರಿಂದ ಇನ್ನೂ ಹೆಚ್ಚಿನ ಕ್ರೀಡಾಪಟುಗಳು ಮತ್ತು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ಠಾಕೂರ್ ಹೇಳಿದರು.

ಲೆಫ್ಟಿನೆಂಟ್​ ಗವರ್ನರ್​ ಮನೋಜ್ ಸಿನ್ಹಾ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದ ಕ್ರೀಡಾ ಬಜೆಟ್ ದೇಶದ ಎರಡು ರಾಜ್ಯಗಳ ಬಜೆಟ್​ಗಿಂತ ಕಡಿಮೆಯಾಗಿದೆ. ಹೆಚ್ಚು ಅನುದಾನ ನೀಡಲಾಗಿದೆ. ಈ ಪ್ರದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಪ್ರತಿ ಕ್ರಮಕ್ಕೆ ಸರ್ಕಾರ ಸಜ್ಜಾಗಿದೆ. ಆಟಗಾರರನ್ನು ಗೆಜೆಟೆಡ್ ಆಫೀಸರ್ ಹುದ್ದೆಗಳಿಗೂ ನೇಮಕ ಮಾಡಬೇಕು. ಕ್ರೀಡೆಯಲ್ಲಿ ಗೆಲುವೊಂದೇ ಅಲ್ಲ, ಕಲಿಕೆಯೂ ಇದೆ. ಇಲ್ಲಿ ವಾಸಿಸುವ ಆಟಗಾರನು ಜಮ್ಮು ಮತ್ತು ಕಾಶ್ಮೀರದ ರಾಯಭಾರಿಯಾಗಬೇಕೆಂದು ನಾನು ಬಯಸುತ್ತೇನೆ. ಹಿಮಚ್ಛಾದಿತ ಬೆಟ್ಟದ ಮೇಲೆ ನಿಮ್ಮ ಸಾಮರ್ಥ್ಯವನ್ನು ತೋರಿಸಿ. ಖೇಲೋ ಇಂಡಿಯಾ, ಜಿ 20 ಗಿಂತ ಮೊದಲೇ ದೇಶವನ್ನು ಒಗ್ಗೂಡಿಸುತ್ತಿದೆ ಎಂದರು.

ಗವರ್ನರ್​ ಸಿನ್ಹಾ ಮತ್ತು ಕೇಂದ್ರ ಸಚಿವ ಠಾಕೂರ್ ಅವರು ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ 40 ಖೇಲೋ ಇಂಡಿಯಾ ಕೇಂದ್ರಗಳನ್ನು ಪ್ರಾರಂಭಿಸಿದರು. ಈ ಕೇಂದ್ರಗಳಲ್ಲಿ 15,000ಕ್ಕೂ ಹೆಚ್ಚು ಆಟಗಾರರು ತರಬೇತಿ ಪಡೆಯಲಿದ್ದಾರೆ.

ABOUT THE AUTHOR

...view details