ಜಪಾನಿನ ನಾಗಾ ಯೂರಿ ಮತ್ತು ಸಾಕಿ ತನಕಾ ಗೋಲುಗಳು ಬಾರಿಸುವ ಮೂಲಕ ಭಾರತೀಯರನ್ನು ಕಂಗೆಡಿಸಿದರು. ಪಂದ್ಯ ಆರಂಭಗೊಂಡು ಎರಡನೇ ನಿಮಿಷದಲ್ಲಿ ನಾಗೈ ಯೂರಿ ಗೋಲ್ ಬಾರಿಸುವ ಮೂಲಕ ಜಪಾನ್ ಮುನ್ನಡೆ ಸಾಧಿಸಿದಾಗ ಭಾರತೀಯ ವನಿತೆಯರಿಗೆ ನಿಧಾನಗತಿ ಆರಂಭವು ದುಬಾರಿಯಾಗಿ ಪರಿಣಮಿಸಿತು.
ಅನಿರೀಕ್ಷಿತ ಗೋಲು ಬಿಟ್ಟುಕೊಟ್ಟ ನಂತರ ಎಚ್ಚೆತ್ತುಕೊಂಡ ಭಾರತೀಯರು ಅಲ್ಲಿಂದ ಮೊದಲ ಕ್ವಾರ್ಟರ್‌ನಲ್ಲಿ ಕೆಲ ಮಟ್ಟಿಗೆ ಜಪಾನ್ ತಂಡವನ್ನು ನಿಯಂತ್ರಿಸಿದರು. ಮೊದಲ 15 ನಿಮಿಷಗಳಲ್ಲಿ ಭಾರತ ತಂಡ ಎರಡು ಪೆನಾಲ್ಟಿ ಕಾರ್ನರ್ಗಳನ್ನು ಪಡೆದರು ಅವುಗಳನ್ನು ಗೋಲ್ಗಳಾಗಿ ಪರಿವರ್ತನೆ ಮಾಡುವಲ್ಲಿ ವಿಫಲರಾದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಹಲವು ಅವಕಾಶಗಳನ್ನು ಪಡೆದ ಭಾರತೀಯರು ಗೋಲು ಗಳಿಸಲು ವಿಫಲರಾದ ಕಾರಣ ಜಪಾನ್ ರಕ್ಷಣಾತ್ಮಕ ಆಟವನ್ನು ಕಾಯ್ದುಕೊಂಡಿತು. ಜಪಾನ್ ಅಂತಿಮವಾಗಿ ಅರ್ಧ ಆಟದ ವಿರಾಮಕ್ಕೆ 1-0 ಮುನ್ನಡೆ ಸಾಧಿಸಿತು. 42ನೇ ನಿಮಿಷದಲ್ಲಿ ತನಕಾ ಗೋಲು ಬಾರಿಸುವ ಮೂಲಕ ಜಪಾನ್ ಮತ್ತೊಂದು ಗೋಲ್ ಮುನ್ನಡೆ ಪಡೆದು ಭಾರತವನ್ನು ಅಚ್ಚರಿಗೊಳಿಸಿತು.
ಎರಡು ಗೋಲುಗಳ ಹಿನ್ನಡೆಯೊಂದಿಗೆ ಭಾರತೀಯ ನಾರಿಯರು ಆಕ್ರಮಣಕಾರಿ ಆಟವಾಡಲು ಮುಂದಾದರು. ಆದರೂ ಸಹ ಅದೃಷ್ಟ ಭಾರತೀಯರ ಕೈ ಹಿಡಿಯಲಿಲ್ಲ. ಕೊನೆಯದಾಗಿ ಭಾರತ ತಂಡವನ್ನು ಜಪಾನ್ 2-0 ಮೂಲಕ ಸೋಲಿಸಿತು. ಜಪಾನ್ ತಂಡ ಪೂಲ್ A ನಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಭಾರತವು ತನ್ನ ಆರಂಭಿಕ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 9-0 ಗೆಲುವು ಪಡೆದಿರುವುದರಿಂದ ಎರಡನೇ ಸ್ಥಾನದಲ್ಲಿದೆ.
ಭಾರತ ತನ್ನ ಅಂತಿಮ ಪೂಲ್ ಪಂದ್ಯದಲ್ಲಿ ಸೋಮವಾರ ಸಿಂಗಾಪುರವನ್ನು ಎದುರಿಸಲಿದೆ. ಎರಡೂ ಪೂಲ್‌ಗಳಿಂದ ಅಗ್ರ ಎರಡು ತಂಡಗಳು ಪಂದ್ಯಾವಳಿಯ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೆಮಿ ಫೈನಲ್ಗೆ ಪ್ರವೇಶ ಪಡೆಯುವ ತಂಡಗಳು ವಿಶ್ವಕಪ್ಗೆ ಅರ್ಹತೆ ಪಡೆಯುತ್ತವೆ.
ಇದನ್ನು ಓದಿ:SA Vs IND: ಅಂತಿಮ ಪಂದ್ಯದಲ್ಲೂ 4 ರನ್ಗಳಿಂದ ಸೋತ ಭಾರತ.. ದ.ಆಫ್ರಿಕಾ ವಿರುದ್ಧ 3-0 ಸರಣಿ ಮುಖಭಂಗ