ಕರ್ನಾಟಕ

karnataka

ETV Bharat / sports

IPL 2022: ಚೆನ್ನೈ ತಂಡದ ಆಲ್‌ರೌಂಡ್‌ ಪ್ರದರ್ಶನ, ಡೆಲ್ಲಿ ವಿರುದ್ಧ 91 ರನ್‌ ಜಯ

ಭಾನುವಾರ ಸಂಜೆ ನಡೆದ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಅಧಿಕಾರಯುತ ಗೆಲುವು ಸಾಧಿಸಿತು.

ಸಿಎಸ್‌ಕೆ
ಸಿಎಸ್‌ಕೆ

By

Published : May 9, 2022, 6:48 AM IST

ಮುಂಬೈ: ಡೇವನ್ ಕಾನ್ವಾಯ್(87) ಹಾಗು ಮೋಯಿನ್ ಅಲಿ(3/13) ಭರ್ಜರಿ ಪ್ರದರ್ಶನದ ಫಲವಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 91 ರನ್‌ಗಳ ಅಮೋಘ ವಿಜಯ ಗಳಿಸಿದೆ. ಭಾನುವಾರ ಸಂಜೆ ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಧೂಳೀಪಟವಾಯಿತು ಎಂದೇ ಹೇಳಬೇಕು. ಚೆನ್ನೈ ತಂಡದೆದುರು ಡೆಲ್ಲಿ ಬ್ಯಾಟಿಂಗ್-ಬೌಲಿಂಗ್ ದರ್ಬಾರ್‌ ನಡೆಯಲೇ ಇಲ್ಲ.

ಚೆನ್ನೈ ನೀಡಿದ 209 ರನ್‌ಗಳ ಬೃಹತ್ ಗುರಿ ಚೇಸ್‌ ಮಾಡಲು ಕ್ರೀಸಿಗಿಳಿದ ಕೆ.ಎಸ್‌.ಶಿಖರ್ ಭರತ್ 5 ಎಸೆತಗಳಲ್ಲಿ ಕೇವಲ 8 ರನ್‌ಗಳನ್ನಷ್ಟೇ ಗಳಿಸಿ ಸಿಮರ್ಜೀತ್ ಸಿಂಗ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಮಿಷೆಲ್‌ ಮಾರ್ಷ್‌, ವಾರ್ನರ್‌ ಜೊತೆಗೂಡಿ ಇನ್ನಿಂಗ್ಸ್ ಕಟ್ಟುವ ಸಾಹಸಕ್ಕಿಳಿದರು. ಆರಂಭದಲ್ಲಿ ವಾರ್ನರ್‌, ಮುಖೇಶ್‌ ಚೌಧರಿ ಅವರ ಎಸೆತಗಳನ್ನು ಸಿಕ್ಸರ್‌ಗಟ್ಟಿ ಭರವಸೆ ಮೂಡಿಸಿದರು. ಆದರೆ ಅವರು ಕೆಲಹೊತ್ತಿನಲ್ಲೇ ಸ್ಪಿನ್ನರ್ ಮಹೀಶ್ ತೀಕ್ಷಣ ಅವರ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.

ಇದಾದ ನಂತರ ಕ್ಯಾಪ್ಟನ್ ಸರದಿ. ಸಕಾಲದಲ್ಲಿ ಜೊತೆಯಾಟ ನೀಡಿ ಪಂದ್ಯವನ್ನು ನಿಗದಿತ ಗುರಿಯತ್ತ ಕೊಂಡೊಯ್ಯುವ ಗುರುತರ ಹೊಣೆ ಅವರ ಮೇಲಿತ್ತು. ಕ್ರೀಸಿಗೆ ಬರುತ್ತಿದ್ದಂತೆ ಅದನ್ನು ಸಾಬೀತುಪಡಿಸುವ ಉದ್ದೇಶದಿಂದ ಎದುರಾಳಿ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದ ಅವರು ಮೂರು ಬೌಂಡರಿಗಳನ್ನು ಬಾರಿಸಿದರು. ಪಂತ್‌ ಹಾಗು ಮಾರ್ಷ್‌ ತಂಡ 50 ರನ್‌ಗಳನ್ನು ದಾಟಲು ಉತ್ತಮ ಜೊತೆಯಾಟ ನೀಡಿದರು. ನಂತರ ಮಾರ್ಷ್‌ ಮೊಯಿನ್‌ ಅಲಿಗೆ ವಿಕೆಟ್‌ ಒಪ್ಪಿಸಿದ ಪೆವಿಲಿಯನ್ ಸೇರಿಕೊಂಡರು. ನಂತರದಲ್ಲಿ ಹಿಟ್ಟರ್ ರೊವಾನ್ ಪೊವೆಲ್ ಹಾಗು ರಿಪಲ್ ಪಟೇಲ್, ಶೂರ್ದೂಲ್‌ ಬಂದರಾದರೂ ತಂಡ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 117 ರನ್‌ಳನ್ನಷ್ಟೇ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಚೆನ್ನೈ ತಂಡದ ಸಾಂಘಿಕ ಪ್ರದರ್ಶನಕ್ಕೆ ಮಂಡಿಯೂರಿತು. ಚೆನ್ನೈ ತಂಡದಲ್ಲಿ ಮೊಯಿನ್‌ ಅಲಿ 13 ರನ್‌ಗಳಿಗೆ 3 ವಿಕೆಟ್‌ ಪಡೆದುಕೊಂಡರೆ, ಚೌಧರಿ, ಬ್ರಾವೋ, ಸಿಮರ್ಜೀತ್ ಸಿಂಗ್ ತಲಾ ಎರಡು ವಿಕೆಟ್‌ ಪಡೆದರು. ತೀಕ್ಷಣ ಒಂದು ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡದ ರುತುರಾಜ್, ಕಾನ್ವಾಯ್‌, ದುಬೆ ಹಾಗು ಧೋನಿ ಅದ್ಭುತ ಪ್ರದರ್ಶನ ನೀಡಿದ್ದು ತಂಡ 6 ವಿಕೆಟ್‌ ನಷ್ಟಕ್ಕೆ 208 ರನ್‌ ಕಲೆ ಹಾಕಲು ಸಾಧ್ಯವಾಯಿತು. ಕಾನ್ವಾಯ್‌ 49 ಎಸೆತಗಳಲ್ಲಿ 87 ರನ್‌ ಕಲೆ ಹಾಕಿದರೆ, ರುತುರಾಜ್ 33 ಎಸೆತಗಳಲ್ಲಿ 41 ರನ್‌ ಪೇರಿಸಿದರು. ಡೆಲ್ಲಿ ಪರವಾಗಿ ನಾರ್ಟ್ಜೆ 3 ವಿಕೆಟ್‌ ಕಿತ್ತರೆ, ಖಲೀಲ್‌ ಅಹಮದ್‌ 2 ಹಾಗು ಮಿಷೆಲ್ ಮಾರ್ಷ್‌ 1 ವಿಕೆಟ್‌ ಉರುಳಿಸಿದರು.

ಇದನ್ನೂ ಓದಿ:ಅಂದು 68ಕ್ಕೆ ಆಲೌಟ್​, ಇಂದು 67 ರನ್​ಗಳ ಜಯ... ಹೈದರಾಬಾದ್​ ವಿರುದ್ಧ ಸೇಡು ತೀರಿಸಿಕೊಂಡ ಆರ್​ಸಿಬಿ

ABOUT THE AUTHOR

...view details