ಕರ್ನಾಟಕ

karnataka

ETV Bharat / sports

ಟೋಕಿಯೋ ಒಲಂಪಿಕ್​ ಅರ್ಹತೆಗಾಗಿ ಇಸ್ರೆಲ್​​ಗೆ ತೆರಳಲಿರುವ ಭಾರತೀಯ ಜುಡೋ ಪಟುಗಳು - ಜಸ್ಲಿಂಗ್ ಸಿಂಗ್ ಸೈನಿ

ಇವರಲ್ಲಿ ಜಸ್ಲಿಂಗ್ ಸಿಂಗ್ ಸೈನಿ 850 ಅಂಕ ಗಳಿಸಿದ್ದು, ಅತೀ ಹೆಚ್ಚು ಅಂಕ ಹೊಂದಿರುವ ಭಾರತೀಯ ಜುಡೋ ಪಟು ಇವರಾಗಿದ್ದಾರೆ. ಇವರಿಗೆ ಭಾರತದ ಪರವಾಗಿ ಒಲಿಂಪಿಕ್​ ಆಡುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

Indian Judokas to head to Israel for Tel Aviv Grand Slam
ಟೋಕಿಯೋ ಒಲಂಪಿಕ್

By

Published : Feb 11, 2021, 3:42 PM IST

ಹೈದರಾಬಾದ್: ಟೋಕಿಯೊ ಒಲಿಂಪಿಕ್ಸ್‌ಗೆ 6 ತಿಂಗಳಿಗಿಂತಲೂ ಕಡಿಮೆ ಸಮಯ ಉಳಿದಿರುವಾಗ, ಭಾರತೀಯ ಜುಡೋ ಪಟುಗಳಿಗೆ ಒಲಂಪಿಕ್​​ಗೆ ಅರ್ಹತೆ ಗಿಟ್ಟಿಸುವ ಅವಕಾಶ ಒದಗಿ ಬಂದಿದೆ. ಇದೇ ಫೆ.18-20ರಂದು ನಡೆಯಲಿರುವ ಇಸ್ರೆಲ್​ ಟೆಲ್​ ಅವೀವ್ ಗ್ರ್ಯಾಂಡ್​​ ಸ್ಲ್ಯಾಮ್​​ನಲ್ಲಿ ಭಾಗಿಗಳಾಗುತ್ತಿದ್ದು, ಇಲ್ಲಿ ನಿರ್ಣಾಯಕ ಶ್ರೇಯಾಂಕ ಪಡೆದರೆ ತರಬೇತುದಾರ ಸೇರಿ ಒಟ್ಟು 6 ಮಂದಿ ಒಲಿಂಪಿಕ್​​​​ಗೆ ಪ್ರಯಾಣ ಬೆಳೆಸಲಿದ್ದಾರೆ.

ಅವತಾರ್ ಸಿಂಗ್ (ಪುರುಷರ 100 ಕೆ.ಜಿ), ವಿಜಯ್ ಯಾದವ್ (ಪುರುಷರ 60 ಕೆ.ಜಿ), ಜಸ್ಲೀನ್ ಸಿಂಗ್ ಸೈನಿ (ಪುರುಷರ 66 ಕೆ.ಜಿ), ಶುಶೀಲಾ ದೇವಿ (ಮಹಿಳಾ 48 ಕೆ.ಜಿ) ಮತ್ತು ತುಲಿಕಾ ಮನ್ (ಮಹಿಳಾ 78 ಕೆ.ಜಿ) ತಂಡವನ್ನು ಒಳಗೊಂಡಿರುತ್ತದೆ. ಅವರೊಂದಿಗೆ ಮುಖ್ಯ ಕೋಚ್ ಜೀವನ್ ಶರ್ಮಾ ಭಾಗವಹಿಸಲಿದ್ದಾರೆ.

ಅದೇ 5 ಜುಡೋ ಪಟುಗಳು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬುಡಾಪೆಸ್ಟ್ ಗ್ರ್ಯಾಂಡ್ ಸ್ಲ್ಯಾಮ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಇವರಲ್ಲಿ ಜಸ್ಲಿಂಗ್ ಸಿಂಗ್ ಸೈನಿ 850 ಅಂಕ ಗಳಿಸಿದ್ದು, ಅತೀ ಹೆಚ್ಚು ಅಂಕ ಹೊಂದಿರುವ ಭಾರತೀಯ ಜುಡೋ ಪಟು ಇವರಾಗಿದ್ದಾರೆ. ಇವರಿಗೆ ಭಾರತದ ಪರವಾಗಿ ಒಲಂಪಿಕ್ ಆಡುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಲಿಂಗ ತಾರತಮ್ಯ ಹೇಳಿಕೆ: ಟೋಕಿಯೋ ಒಲಿಂಪಿಕ್ಸ್​ ಮುಖ್ಯಸ್ಥ ಯೋಶಿರೋ ಮೋರಿ ರಾಜೀನಾಮೆ

ABOUT THE AUTHOR

...view details