ನವದೆಹಲಿ: 2023ರ ಹಾಕಿ ವಿಶ್ವಕಪ್‌ನ 15ನೇ ಆವೃತ್ತಿಯು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಜನವರಿ 13 ರಿಂದ 29 ರವರೆಗೆ ಪ್ರಾರಂಭವಾಗಲಿದೆ. ಈ ಮಹಾನ್ ಹಾಕಿ ಕದನದಲ್ಲಿ, ವಿಶ್ವದ 16 ದೇಶಗಳು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಅರ್ಜೆಂಟೀನಾ, ಪೂಲ್ ಬಿ ಯಲ್ಲಿ ಬೆಲ್ಜಿಯಂ, ಜಪಾನ್, ಕೊರಿಯಾ, ಜರ್ಮನಿ, ಪೂಲ್, ಸಿ ಯಲ್ಲಿ ನೆದರ್‌ಲ್ಯಾಂಡ್, ಚಿಲಿ, ಮಲೇಷ್ಯಾ, ನ್ಯೂಜಿಲ್ಯಾಂಡ್ ಮತ್ತು ಪೂಲ್, ಡಿ ನಲ್ಲಿ ಭಾರತ, ವೇಲ್ಸ್, ಸ್ಪೇನ್, ಇಂಗ್ಲೆಂಡ್ ತಂಡಗಳಿವೆ. ಸ್ಪೇನ್, ಕೊರಿಯಾ ಮತ್ತು ಫ್ರಾನ್ಸ್ ತಂಡಗಳು ಭಾರತಕ್ಕೆ ಬಂದಿಳಿದಿವೆ.
ಸ್ವಾತಂತ್ರ್ಯ ಪೂರ್ವವೇ ಹಾಕಿಯಲ್ಲಿ ಭಾರತಕ್ಕೆ ಪದಕ:ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ 12 ಪದಕಗಳನ್ನು ಗೆದ್ದು ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತದ ಹೆಸರನ್ನು ವಿಶ್ವದಾದ್ಯಂತ ಬೆಳಗುವಂತೆ ಮಾಡಿತ್ತು. ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಸೇರಿದಂತೆ 12 ಪದಕಗಳನ್ನು ಗೆದ್ದಿದೆ. 1928 ರಿಂದ 1956 ರವರೆಗೆ ಭಾರತ ಹಾಕಿ ತಂಡ ನಿರಂತರವಾಗಿ ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ.
ಭಾರತ ಮೂರು ಬಾರಿ ಏಷ್ಯಾ ಚಾಂಪಿಯನ್:ಭಾರತೀಯ ಪುರುಷರ ಹಾಕಿ ತಂಡ ಮೂರು ಬಾರಿ ಏಷ್ಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2003, 2007, 2017ರಲ್ಲಿ ಭಾರತ ಏಷ್ಯಾದ ಚಾಂಪಿಯನ್ ಆಗಿದೆ. ಇದಲ್ಲದೇ ಐದು ಬಾರಿ ಬೆಳ್ಳಿ ಪದಕ (1982, 1985, 1989, 1994, 2013) ಮತ್ತು ಎರಡು ಬಾರಿ ಕಂಚಿನ ಪದಕ (1999, 2022) ಗೆದ್ದಿದೆ. ಐದು ಬಾರಿ ಚಾಂಪಿಯನ್ ಆಗಿರುಬವ ದಕ್ಷಿಣ ಕೊರಿಯಾ ಏಷ್ಯಾಕಪ್‌ನಲ್ಲಿ ಪ್ರಬಲ ತಂಡವಾಗಿದೆ.