ನವದೆಹಲಿ : 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಹಾಗೂ ಅಮಿತ್ ಪಂಗಲ್ ಸೇರಿದಂತೆ 30 ಭಾರತದ ಬಾಕ್ಸರ್ಗಳನ್ನೊಳಗೊಂಡ ತಂಡ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಶನಿವಾರ ದುಬೈಗೆ ತೆರಳಿದೆ.
ಏರ್ ಬಬಲ್ ವಿಮಾನದ ಮೂಲಕ ದುಬೈಗೆ ಪ್ರಯಾಣಿಸಿದ್ದ ವಿಮಾನ ಕೆಲವು ಆಡಳಿತಾತ್ಮಕ ದಾಖಲೆಗಳ ಸಮಸ್ಯೆಯಿಂದಾಗಿ ಬಾಕ್ಸರ್‌ಗಳಿದ್ದ ವಿಮಾನವು ನಿಲ್ದಾಣದಲ್ಲಿ ಲ್ಯಾಂಡ್ ಆಗಲು ತಡವಾಗಿದೆ. ಹಾಗಾಗಿ, ನಿಗದಿಗಿಂತ ಹೆಚ್ಚು ಅಮಯ ಆಗಸದಲ್ಲಿ ಹಾರಾಡಿದೆ ಎಂದು ತಿಳಿದು ಬಂದಿದೆ.
ಭಾನುವಾರ ಟೂರ್ನಮೆಂಟ್ನ ಡ್ರಾ ಬಿಡುಗಡೆಯಾಗಲಿದ್ದು, ಸೋಮವಾರದಿಂದ ಟೂರ್ನಿ ಆರಂಭವಾಗಬೇಕಿದೆ. ಇದು ಜುಲೈನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್ಗೂ ಮುನ್ನ ಆಯೋಜನೆಯಾಗಿರುವ ಪ್ರಮುಖ ಬಾಕ್ಸಿಂಗ್ ಟೂರ್ನಿಯಾಗಿದೆ.
ಎರಡು ಗಂಟೆ ಹೆಚ್ಚು ಆಗಸದಲ್ಲಿ ಹಾರಾಡಿದ ವಿಮಾನ :ದುಬೈಗೆ ತಂಡದ ಆಗಮನವನ್ನು ಅನುಮೋದಿಸಿದ ದಾಖಲಾತಿಗಳ ತೆರವುಗೊಳಿಸಲು ವಿಳಂಬವಾದ ಕಾರಣ ವಿಮಾನ ಎರಡು ಗಂಟೆಗಳ ಕಾಲ ಆಗಸದಲ್ಲೇ ಎರಡು ಗಂಟೆ ಹಾರಾಡಿ ನಂತರ ಇಂಧನ ಸಮಸ್ಯೆಯ ಕಾರಣ ನೀಡಿ ತುರ್ತು ಲ್ಯಾಂಡಿಂಗ್ ಮಾಡಿದೆ.