ಕರ್ನಾಟಕ

karnataka

ETV Bharat / sports

ಕಾಮನ್‌ವೆಲ್ತ್ ಗೇಮ್ಸ್ 2022: ಬಾಕ್ಸರ್ ನೀತು ಗಂಗಾಸ್ ಮುಡಿಗೆ ಚಿನ್ನ

ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಭಾರತದ ಬಾಕ್ಸರ್ ನೀತು ಗಂಗಾಸ್ ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ 2022 :ಬಾಕ್ಸರ್ ನಿತು ಗಂಗಾಸ್ ಚಿನ್ನ
ಕಾಮನ್‌ವೆಲ್ತ್ ಗೇಮ್ಸ್ 2022 :ಬಾಕ್ಸರ್ ನಿತು ಗಂಗಾಸ್ ಚಿನ್ನ

By

Published : Aug 7, 2022, 3:44 PM IST

Updated : Aug 7, 2022, 5:23 PM IST

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಭಾರತದ ಬಾಕ್ಸರ್ ನೀತು ಗಂಗಾಸ್ ಚಿನ್ನವನ್ನು ಗೆದ್ದಿದ್ದಾರೆ. ಮಹಿಳೆಯರ ಕನಿಷ್ಠ ತೂಕದ ಫೈನಲ್‌ನಲ್ಲಿ ಡೆಮಿ-ಜೇಡ್ ರೆಸ್ಟನ್ (ಇಎನ್‌ಜಿ) ಅವರನ್ನು ಸೋಲಿಸಿದ್ದಾರೆ.

ಹರಿಯಾಣದ ಬಾಕ್ಸರ್ ನೀತು ಗಂಗಾಸ್​​ ಬಾಕ್ಸರ್​ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಪದಕವನ್ನು ಭಾರತದ ಮುಡಿಗೆ ಹಾಕಿದ್ದಾರೆ. ಮಹಿಳೆಯರ ಕನಿಷ್ಠ ತೂಕ ವಿಭಾಗದ (45-48 ಕೆಜಿ) ಫೈನಲ್ ಪಂದ್ಯದಲ್ಲಿ ನೀತು ಬಾಕ್ಸರ್ ಡೆಮಿ ಜೇಡ್ ರೆಸ್ಟನ್ ಅವರನ್ನು ಸೋಲಿಸಿದ್ದಾರೆ.

ಈ ಪಂದ್ಯವನ್ನು ನೀತು ಏಕಪಕ್ಷೀಯವಾಗಿ ಗೆದ್ದಿದ್ದಾರೆ. ಐವರು ತೀರ್ಪುಗಾರರು ಅವಿರೋಧವಾಗಿ ನೀತುಗೆ 5-0 ಅಂತರದ ಜಯವನ್ನು ಘೋಷಿಸಿದ್ದಾರೆ. ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ತೋರಿದ ಅದೇ ಆಕ್ರಮಣಕಾರಿ ಆಟವನ್ನು ಫೈನಲ್ ಪಂದ್ಯದಲ್ಲಿ ಪ್ರದರ್ಶಿಸಿ ಚಿನ್ನ ಮುಡುಗೇರಿಸಿಕೊಂಡರು. ಈ ವೇಳೆ ಇಂಗ್ಲೆಂಡಿನ ಬಾಕ್ಸರ್ ಮೇಲೆ ಪಂಚ್​ಗಳ ಸುರಿಮಳೆಗೈದಿದ್ದಾರೆ.

ಇದಕ್ಕೂ ಮುನ್ನ ನೀತು ಸೆಮಿಫೈನಲ್ ಪಂದ್ಯದಲ್ಲಿ ಕೆನಡಾದ ಪ್ರಿಯಾಂಕಾ ಧಿಲ್ಲೋನ್ ಅವರನ್ನು ಸೋಲಿಸಿದ್ದರು. ಈ ಪಂದ್ಯದ ಮೂರನೇ ಸುತ್ತಿನಲ್ಲಿ, ಅವರು ಕೆನಡಾದ ಬಾಕ್ಸರ್​ಗೆ ಹಲವು ಪಂಚ್‌ ನೀಡಿದ್ದರು. ನಂತರ ರೆಫರಿ ಆಟವನ್ನು ನಿಲ್ಲಿಸಿ ನೀತು ಅವರನ್ನು ವಿಜಯಿ ಎಂದು ಘೋಷಿಸಿದರು. ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ನೀತು ಎದುರಾಳಿ ಐರಿಶ್ ಬಾಕ್ಸರ್ ಕ್ಲೈಡ್ ನಿಕೋಲ್ ಅವರನ್ನು ಗುದ್ದಿ ಗೆದ್ದಿದ್ದರು. ಇದಾದ ಎರಡನೇ ಸುತ್ತಿನ ಬಳಿಕವೇ ಅವರನ್ನು ವಿಜೇತರೆಂದು ಘೋಷಿಸಲಾಗಿತ್ತು.

21 ವರ್ಷದ ನೀತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದಾರೆ. ಅವರು ಭಾರತದ ದಿಗ್ಗಜ ಬಾಕ್ಸರ್ ಮೇರಿ ಕೋಮ್ ಅವರ ವ್ಯಾಟ್ ವಿಭಾಗದಲ್ಲಿ ಆಡುತ್ತಿದ್ದಾರೆ. ನೀತು ಹರಿಯಾಣದ ಭಿವಾನಿ ಜಿಲ್ಲೆಯ ಧನನಾ ಗ್ರಾಮದವರು. ಅವರು ತಮ್ಮ ಗ್ರಾಮದಿಂದ 20 ಕಿ.ಮೀ ದೂರದಲ್ಲಿರುವ ಧನನದಲ್ಲಿರುವ ಬಾಕ್ಸಿಂಗ್ ಕ್ಲಬ್‌ಗೆ ಪ್ರತಿದಿನ ತರಬೇತಿಗಾಗಿ ಹೋಗುತ್ತಿದ್ದರು. ನೀತು ಅವರನ್ನು ಬಾಕ್ಸರ್ ಮಾಡಲು, ಅವರ ತಂದೆ ತಮ್ಮ ಕೆಲಸವನ್ನು ಬಿಟ್ಟು ಇವರಿಗೆ ಪ್ರೋತ್ಸಾಹ ಮತ್ತು ಬೆಂಬಲ ತುಂಬುತ್ತಿದ್ದರಂತೆ.

ಇದನ್ನೂ ಓದಿ : ಕುಸ್ತಿಯಲ್ಲಿ ಭಾರತದ ಭುಜಬಲ ಪರಾಕ್ರಮ; ಪಾಕ್‌ ಮಣಿಸಿ ಚಿನ್ನದ ನಗೆ ಬೀರಿದ ನವೀನ್

Last Updated : Aug 7, 2022, 5:23 PM IST

ABOUT THE AUTHOR

...view details