ಕರ್ನಾಟಕ

karnataka

ETV Bharat / sports

ಕಾಮನ್‌ವೆಲ್ತ್‌ ಹಾಕಿಯಲ್ಲಿ ಚಿನ್ನದಾಸೆ ಭಗ್ನ; ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿ ಗೆದ್ದ ಭಾರತ

ಕಾಮನ್‌ವೆಲ್ತ್‌ ಗೇಮ್ಸ್‌ ಹಾಕಿಯಲ್ಲಿ ಬಲಾಢ್ಯ ಆಸ್ಟ್ರೇಲಿಯಾ ತಂಡದ ಗೆಲುವಿನ ನಾಗಾಲೋಟ ಮುಂದುವರಿಯಿತು. ಇಂದು ನಡೆದ ಫೈನಲ್‌ ಪಂದ್ಯದಲ್ಲಿಯೂ 7-0 ಗೋಲುಗಳ ಅಂತರದಲ್ಲಿ ಭಾರತ ತಂಡವನ್ನು ಮಣಿಸಿದ ಆಸೀಸ್‌ ಸತತ 7 ನೇ ಬಾರಿಗೆ ಚಿನ್ನ ಮುಡಿಗೇರಿಸಿಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಕಿ ಪಂದ್ಯದಲ್ಲಿ ಭಾರತಕ್ಕೆ ಬೆಳ್ಳಿ !
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಕಿ ಪಂದ್ಯದಲ್ಲಿ ಭಾರತಕ್ಕೆ ಬೆಳ್ಳಿ !

By

Published : Aug 8, 2022, 6:54 PM IST

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಭಾರತೀಯ ಪುರುಷರ ಹಾಕಿ ತಂಡದ ಕನಸು ಭಗ್ನಗೊಂಡಿದೆ. ಇಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತೀಯ ತಂಡ ಆಸ್ಟ್ರೇಲಿಯಾ ವಿರುದ್ಧ ನೀರಸ ಪ್ರದರ್ಶನ ನೀಡಿ 0-7 ಗೋಲುಗಳ ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಭಾರತ ತಂಡದ ಆಟಗಾರರ ಮೇಲೆ ಪಂದ್ಯದುದ್ದಕ್ಕೂ ಸಂಪೂರ್ಣ ಹಿಡಿತ ಸಾಧಿಸಿ ಗೆದ್ದ ಆಸೀಸ್, ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನ ಈವರೆಗಿನ ಇತಿಹಾಸದಲ್ಲಿ ಸತತವಾಗಿ 7ನೇ ಬಾರಿಗೆ ಚಿನ್ನ ಸಾಧನೆ ಮಾಡಿದೆ. ಟೂರ್ನಿಯ ಫೈನಲ್‌ ಹಂತದವರೆಗೂ ಉತ್ತಮ ಪ್ರದರ್ಶನ ನೀಡಿದ ಭಾರತ, ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 3-2 ಗೋಲುಗಳಿಂದ ಸೋಲಿಸಿತ್ತು.

ಇಂದು ನಡೆದ ಪ್ರಶಸ್ತಿ ಸುತ್ತಿನ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ 2-0 ಮುನ್ನಡೆ ಸಾಧಿಸಿತ್ತು. ಬಳಿಕ ತನ್ನ ಸಾಮರ್ಥ್ಯವನ್ನು ತಂಡ ವಿಸ್ತರಿಸುತ್ತಾ ಸಾಗಿದೆ. ಎರಡನೇ ಕ್ವಾರ್ಟರ್‌ನಲ್ಲಿ 3 ಗೋಲು ಗಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿತು. ಆದರೆ, ಈ ಕ್ವಾರ್ಟರ್‌ನ ಮೊದಲ 5 ನಿಮಿಷಗಳಲ್ಲಿ ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡಿದರಾದರೂ ಅದೇ ಸಮಯದಲ್ಲಿ ಆಸ್ಟ್ರೇಲಿಯಾ ಸಾಕಷ್ಟು ಮುನ್ನಡೆ ಸಾಧಿಸುವಲ್ಲಿ ಯಶ ಕಂಡಿತ್ತು. ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್‌ನಲ್ಲೂ ಭಾರತ ತಂಡ ಯಾವುದೇ ಗೋಲು ಗಳಿಸಲಿಲ್ಲ. ಅಂತಿಮವಾಗಿ ಭಾರತ ಬೆಳ್ಳಿ ಗೆದ್ದಿತು.

ಇದನ್ನೂ ಓದಿ:ಭಾರತಕ್ಕೆ ಮತ್ತೆರಡು ಪದಕ: ಬ್ಯಾಡ್ಮಿಂಟನ್‌ ಡಬಲ್ಸ್‌ನಲ್ಲಿ ಚಿನ್ನ, ಟೇಬಲ್‌ ಟೆನಿಸ್‌ನಲ್ಲೂ ಬಂಗಾರ!

ABOUT THE AUTHOR

...view details