ಕಿಂಗ್ಸ್ಟನ್: ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಜಮೈಕಾದ ಯೋಹನ್ ಬ್ಲೇಕ್ ಅವರು ಟೋಕಿಯೊ ಒಲಿಂಪಿಕ್ಸ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ.
ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಲು ಲಸಿಕೆ ಕಡ್ಡಾಯವಲ್ಲ. ಆದರೆ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅದನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿದೆ. ನನಗೆ ಲಸಿಕೆ ಅವಶ್ಯಕತೆ ಇಲ್ಲ, ನಾನು ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಯೋಹನ್ ಬ್ಲೇಕ್ ಹೇಳಿದ್ದಾರೆ.
"ನನ್ನ ಮನಸ್ಸು ಸದೃಢವಾಗಿದೆ. ನನಗೆ ಯಾವುದೇ ಲಸಿಕೆ ಬೇಡ. ನಾನು ಒಲಿಂಪಿಕ್ಸ್ ಅನ್ನು ಕಳೆದುಕೊಳ್ಳುತ್ತೇನೆ, ಆದರೂ ನಾನು ಲಸಿಕೆ ತೆಗೆದುಕೊಳ್ಳುತ್ತಿಲ್ಲ" ಎಂದು ಬ್ಲೇಕ್ ಹೇಳಿದ್ದಾರೆ.
ಓದಿ : ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ರಾಹುಲ್, ಪ್ರಿಯಾಂಕ ಗೋಸ್ವಾಮಿಗೆ ಕಿರಣ್ ರಿಜಿಜು ಅಭಿನಂದನೆ
ಟೋಕಿಯೊ ಒಲಿಂಪಿಕ್ಸ್ ಬ್ಲೇಕ್‌ನ ಅಂತಿಮ ಕ್ರೀಡಾಕೂಟ ಎಂದು ಹೇಳಲಾಗುತ್ತಿದೆ. ಒಲಿಂಪಿಕ್ಸ್ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ. ಈ ಮುಂಚೆ 2020 ರ ಜುಲೈ 24 ರಿಂದ ಆಗಸ್ಟ್ 9 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾದಿಂದಾಗಿ ಮುಂದೂಡಲಾಗಿತ್ತು.