ಕರ್ನಾಟಕ

karnataka

ETV Bharat / sports

ವೈರಸ್‌ಗೆ ನೀವು ಎಷ್ಟು ದಿನ ಭಯಪಡುತ್ತೀರಾ?: ಸ್ಪರ್ಧಾತ್ಮಕ ಬಾಕ್ಸಿಂಗ್​ ಸಿದ್ಧರಾಗಿರುವ ಮೇರಿಕೋಮ್ ಪ್ರಶ್ನೆ

ಮಾರ್ಚ್ 1 ರಿಂದ 7 ರವರೆಗೆ ಕ್ಯಾಸ್ಟೆಲ್ಲೊನ್‌ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಇತರ ಎಂಟು ಒಲಿಂಪಿಕ್ ಬೌಂಡ್ ಭಾರತೀಯ ಬಾಕ್ಸರ್‌ಗಳೊಂದಿಗೆ 37 ವರ್ಷದ ಮೇರಿಕೋಮ್​ ಭಾಗವಹಿಸಲಿದ್ದಾರೆ. ಭಾರತ ತಂಡ ಈ ವಾರಾಂತ್ಯದಲ್ಲಿ ಹೊರಡುವ ನಿರೀಕ್ಷೆಯಿದೆ.

ಮೇರಿ ಕೋಮ್​
ಮೇರಿ ಕೋಮ್​

By

Published : Feb 22, 2021, 3:19 PM IST

ನವದೆಹಲಿ: ಮುಂದಿನ ವಾರದಲ್ಲಿ ಆರಂಭವಾಗಲಿರುವ ತನ್ನ ಮೊದಲ ಟೂರ್ನಮೆಂಟ್‌ಗೆ ಸಜ್ಜಾಗುತ್ತಿರುವ ಸ್ಟಾರ್ ಇಂಡಿಯನ್ ಬಾಕ್ಸರ್ ಎಂಸಿ ಮೇರಿ ಕೋಮ್ ಅವರ ಮನಸ್ಸಿನಲ್ಲಿ ಸ್ಪರ್ಧಿಸುವ ಆಸೆಗೆ ಕೊರೊನಾ ವೈರಸ್ ಭಯ ಕಾರಣವಾಗಿದೆ. ಆದರೂ ವರ್ಷದ ನಂತರ ಸ್ಪರ್ಧಾತ್ಮಕ ಬಾಕ್ಸಿಂಗ್​ಗೆ ಮರಳಲು ಸಿದ್ಧರಾಗಿದ್ದಾರೆ.

ಇತ್ತೀಚೆಗೆ ಡೆಂಘಿಯಿಂದ ಚೇತರಿಸಿಕೊಂಡಿರುವ 6 ಬಾರಿಯ ವಿಶ್ವ ಚಾಂಪಿಯನ್​ ಮೇರಿಕೋಮ್​ 2020ರಲ್ಲಿ ಕೋವಿಡ್ ಕಾರಣ ತಮ್ಮ ಮನೆಯಲ್ಲಿ ತರಬೇತಿ ಪಡೆದಿದ್ದರು. ನಂತರ ಕಳೆದ ತಿಂಗಳು ಬೆಂಗಳೂರಿನ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ಪಡೆದಿದ್ದರು. ಇದೀಗ ಮುಂದಿನ ತಿಂಗಳು ಸ್ಪೇನ್​ನಲ್ಲಿ ನಡೆಯಲಿರುವ ಬಾಕ್ಸಮ್​ ಅಂತಾರಾಷ್ಟ್ರೀಯ ಟೂರ್ನಮೆಂಟ್​ನಲ್ಲಿ ರಿಂಗ್​ಗೆ ಇಳಿಯಲಿದ್ದಾರೆ. ಕಳೆದ ವರ್ಷ ಜೋರ್ಡಾನ್​ನಲ್ಲಿ ಒಲಿಂಪಿಕ್ಸ್​ ಏಷ್ಯನ್​ ಕ್ಯಾಲಿಫೈಯರ್ಸ್​ ನಂತರ ಇದು ಅವರ ಮೊದಲ ಸ್ಪರ್ಧೆಯಾಗಲಿದೆ.

" ನಾನು ಪ್ರಯಾಣ ಮಾಡುವುದಕ್ಕೆ ಹೆದರುತ್ತಿದ್ದೆ. ನಾನು ಈಗಲೂ ಬಹಳ ಜಾಗರೂಕಳಾಗಿರುತ್ತೇನೆ ಮತ್ತು ಕಾಳಜಿ ವಹಿಸುತ್ತೇನೆ. ಆದರೆ ಇನ್ನು ಎಷ್ಟು ದಿಗಳವರೆಗೆ ವೈರಸ್​ಗೆ ಭಯಭೀತರಾಗಿರುವುದು? ಈ ಚಕ್ರವು ಕೆಲವು ಹಂತದಲ್ಲಿ ನಿಲ್ಲಬೇಕಾಗಿದೆ " ಎಂದು ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ವೈರಸ್​ನಿಂದ ತಪ್ಪಿಸಿಕೊಳ್ಳಲು ಸಂವೇದನಾಶೀಲರಾಗಿರಬೇಕು. ಜೊತೆಗೆ ಮಾಸ್ಕ್​ಗಳನ್ನು ಧರಿಸಿ, ಯಾವಾಗಲೂ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. ಆದರೆ ನಾನು ಅದಕ್ಕೆ ಹೆದರುತ್ತಿದ್ದೇನೆ, ನಾನು ಬಹಳ ಸಮಯದಿಂದ ಇದೇ ಭಯದಲ್ಲಿದ್ದೆ. ಸಾಂಕ್ರಾಮಿಕ ರೋಗದ ಮಧ್ಯೆ ತರಬೇತಿಗಾಗಿ ವಿದೇಶ ಪ್ರವಾಸ ಮಾಡಲು ತಿರಸ್ಕರಿಸಿದ್ದೆ ಎಂದು ಈ ಹಿಂದೆ ಹೇಳಿದ್ದನ್ನು ಈಗ ನೆನಪಿಸಿಕೊಂಡಿದ್ದಾರೆ.

ಪ್ರಸ್ತುತ ಎಲ್ಲರಂತೆ ನನ್ನ ದೇಹ ಉತ್ತಮವಾಗಿದೆ. 2020ರಲ್ಲಿ ಹಲವು ಅಡೆತಗಳನ್ನು ಎದುರಿಸಿದ್ದೇನೆ. ಡಿಸೆಂಬರ್​ನಲ್ಲಿ ಡೆಂಘಿಯಿಂದ ಬಳಲಿದ್ದೆ. ಅದರಿಂದ ನಾನು ಸಾಕಷ್ಟು ಸ್ನಾಯುಗಳನ್ನು ಕಳೆದುಕೊಂಡೆ. ಜೊತೆಗೆ ತೂಕವೂ ಹೆಚ್ಚಾಗಿದೆ. ಕಳೆದ ತಿಂಗಳ ಅಂತ್ಯಕ್ಕೆ ಸುಮಾರು 57-59 ಕೆಜಿ ತೂಕ ಹೊಂದಿದ್ದೆ. ಆದರೆ, ಬೆಂಗಳೂರಿನ ಶಿಬಿರದಲ್ಲಿ 15 ದಿನಗಳ ಕಳೆದ ನಂತರ ನಾನು ನನ್ನ ಎಂದಿನ 52 - 52 ತೂಕಕ್ಕೆ ಮರಳಿದ್ದೇವೆ. ನನ್ನ ಸ್ನಾಯುಗಳು ಕೂಡ ಉತ್ತಮ ಶೇಪ್​ ಪಡೆದಿವೆ. ನನ್ನ ಪ್ರಕಾರ ನಾನು ಸ್ಪರ್ಧೆಗೆ ಹೋಗಲು ಸಿದ್ಧನಿದ್ದೇನೆ ಎಂದು ಎಂದು ಕೋಮ್ ತಿಳಿಸಿದ್ದಾರೆ.

ಮಾರ್ಚ್ 1 ರಿಂದ 7 ರವರೆಗೆ ಕ್ಯಾಸ್ಟೆಲ್ಲೊನ್‌ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಇತರ ಎಂಟು ಒಲಿಂಪಿಕ್ ಬೌಂಡ್ ಭಾರತೀಯ ಬಾಕ್ಸರ್‌ಗಳೊಂದಿಗೆ ಮೇರಿಕೋಮ್​ ಭಾಗವಹಿಸಲಿದ್ದಾರೆ. ಭಾರತ ತಂಡ ಈ ವಾರಾಂತ್ಯದಲ್ಲಿ ಹೊರಡುವ ನಿರೀಕ್ಷೆಯಿದೆ.

ABOUT THE AUTHOR

...view details