ಪಂಚಕುಲ: ಆರಂಭದಿಂದಲೂ ರೋಚಕವಾಗಿ ಕೂಡಿದ್ದ ಯುಪಿ ಯೋಧ ಹಾಗೂ ಹರಿಯಾಣ ಸ್ಟೀಲರ್ಸ್ ನಡುವಿನ ಪಂದ್ಯದಲ್ಲಿ ಕೊನಗೂ ವಿಜಯ ಲಕ್ಷ್ಮಿ ಯೋಧ ಪಡೆಗೆ ಒಲಿಯಿತು.
ಹರಿಯಾಣದ ಪಂಚಕುಲದ ದೇವಿಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ 7 ಆವೃತ್ತಿಯ ಪ್ರೋ ಕಬಡ್ಡಿ ಲೀಗ್ನ 111ನೇ ಪಂದ್ಯದಲ್ಲಿ ಯುಪಿ ಯೋಧ ತಂಡ 37-30 ಅಂತರದಿಂದ ಸ್ಟೀಲರ್ಸ್ ತಂಡವನ್ನು ಬಗ್ಗುಬಡಿಯಿತು.
ಸ್ಟೀಲರ್ಸ್ ಮೊದಲಾರ್ಧದಲ್ಲಿ 11-15ರಲ್ಲಿ ಹಿನ್ನಡೆ ಅನುಭವಿಸಿತು. ಆದರೆ, ದ್ವಿತೀಯಾರ್ಧದ ಆರಂಭದಲ್ಲಿ ಯುಪಿ ತಂಡವನ್ನು ಆಲೌಟ್ ಮಾಡಿ 21-25 ಕ್ಕೆ ಅಂತರವನ್ನು ತಗ್ಗಿಸಿತು. ಆದರೆ ಮುನ್ನಡೆಯನ್ನು ಮುಂದುವರಿಸಿಕೊಂಡ ಯೋಧ ತಂಡ ಕೊನೆಯಲ್ಲಿ 37 - 30ರಲ್ಲಿ ಗೆಲುವು ಸಾಧಿಸಿತು.
ಈ ಗೆಲುವಿನ ಮೂಲಕ 6 ಸ್ಥಾನದಲ್ಲಿದ್ದ ಯೋಧ ತಂಡ 5 ನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಸೋತರು ಹರಿಯಾಣ ಮೂರನೇ ಸ್ಥಾನದಲ್ಲೇ ಮುಂದುವರಿಯಿತು.