ಪಂಚಕುಲ: ಆರಂಭದಿಂದಲೂ ಮುನ್ನಡೆ ಸಾಧಿಸಿಕೊಂಡು ಬಂದಿದ್ದ ಗುಜರಾತ್ ಕೊನೆಯ ಒಂದು ನಿಮಿಷದಲ್ಲಿ ಮಾಡಿಕೊಂಡ ಯಡವಟ್ಟಿನಿಂದ ಪಂದ್ಯ ಕಳೆದುಕೊಂಡಿದೆ.
ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದ ಗುಜರಾತ್ 19-14ರಲ್ಲಿ ಮುನ್ನಡೆ ಪಡೆದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ಎರಡೂ ತಂಡಗಳೂ ಪ್ರಬಲ ಪೈಪೋಟಿ ನಡೆಸಿದವು. ಕೊನೆಯ ನಾಲ್ಕು ನಿಮಿಷಗಳವರೆಗೆ ಮುನ್ನಡೆ ಇದ್ದ ಗುಜರಾತ್ ಆಲೌಟ್ ಆಗುವ ಮೂಲಕ ಮೊದಲ ಬಾರಿಗೆ ಹಿನ್ನಡೆ ಅನುಭವಿಸಿತು.
ಆದರೆ ಕೊನೆಯ 2 ನಿಮಿಷದಲ್ಲಿ ರೋಹಿತ್ ಗುಲಿಯಾ ವೇಗದ ಪಾಯಿಂಟ್ ಗಳಿಸಿ ಕೊನೆಯ ರೈಡ್ ವೇಳೆಗೆ 37-37ರಲ್ಲಿ ಸಮಬಲಕ್ಕೆ ತಂದರು. ಆದರೆ ಕೊನೆಯ ರೈಡ್ ಗುಜರಾತ್ ಪಾಲಿಗೆ ಬಂದಿತ್ತು. ಎದುರಾಳಿ ತಂಡದಲ್ಲಿ ಕೇವಲ 4 ಜನ ಆಟಗಾರರಿದ್ದರು. ರೋಹಿತ್ ಗುಲಿಯಾ ಅಂಕ ಗಳಿಸುವುದು ಕಷ್ಟ ಎಂದು ಗೊತ್ತಿದ್ದರಿಂದ ಕೇವಲ ಬ್ಯಾಕ್ಲೈನ್ ಮುಟ್ಟಿ ಬಂದಿದ್ದರೆ ಟೈ ಆಗುತ್ತಿತ್ತು. ಆದರೆ ರೋಹಿತ್ರನ್ನು ಔಟ್ ಟ್ಯಾಕಲ್ ಮಾಡುವ ಮೂಲಕ ಹರಿಯಾಣ ಒಂದು ಅಂಕದಿಂದ ಗೆದ್ದು ಬೀಗಿತು.
ಹರಿಯಾಣ ಪರ ರೈಡರ್ಗಳಾದ ವಿಕಾಶ್ 10, ಪ್ರಶಾಂತ್ 9 ಅಂಕ ಪಡೆದರೆ, ಡಿಫೆಂಡರ್ಗಳಾದ ಸುನಿಲ್ 4, ಧರ್ಮರಾಜ್ ಚೆರಲಾಥನ್ 4 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗುಜರಾತ್ ಪರ ರೋಹಿತ್ ಗುಲಿಯಾ 11, ಸೋನು 8 ಅಂಕ ಪಡೆದರು.