ದೋಹಾ(ಕತಾರ್):ಪೋರ್ಚುಗಲ್ಪ್ರಿಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ತಂಡದಿಂದ ಹೊರಗಿಟ್ಟಿತ್ತು. ಇದಾದ ನಂತರ ರೊನಾಲ್ಡೊ ಅವರು ರಾಷ್ಟ್ರೀಯ ತಂಡವನ್ನು ತ್ಯಜಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಯನ್ನು ಪೋರ್ಚುಗಲ್ ಫುಟ್‌ಬಾಲ್ ಫೆಡರೇಶನ್ ತಳ್ಳಿಹಾಕಿದೆ.
ರೊನಾಲ್ಡೊ ಪೋರ್ಚುಗಲ್‌ನ ಪರವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ. ಸ್ವಿಟ್ಜರ್ಲೆಂಡ್ ವಿರುದ್ಧದ ಅವರ ಮೊದಲ ನಾಕೌಟ್ ಪಂದ್ಯಕ್ಕೆ ವಿಶ್ರಾಂತಿ ನೀಡಲಾಯಿತು. ರೊನಾಲ್ಡೊ ಬದಲಿ ಆಟಗಾರನಾಗಿ ಗೊನ್ಕಾಲೊ ರಾಮೋಸ್ ಅವರನ್ನು ಕಣಕ್ಕಿಳಿಸಲಾಗಿತ್ತು. ಈ ಪಂದ್ಯದಲ್ಲಿ ಪೋರ್ಚುಗಲ್ 6-1ರಿಂದ ಗೆದ್ದರು. ರಾಮೋಸ್ ಹ್ಯಾಟ್ರಿಕ್ ಗೋಲ್ನ್ನು ತಂಡಕ್ಕೆ ನೀಡಿ ಗೆಲುವಿಗೆ ಪಾತ್ರರಾದರು.
ಇಂದಿನಿಂದ ಕ್ವಾರ್ಟರ್-ಫೈನಲ್:ಫಿಫಾ ವಿಶ್ವಕಪ್ 2022 ರಲ್ಲಿ ಕೊನೆಯ 16 ಪಂದ್ಯಗಳು ಮುಕ್ತಾಯವಾಗಿದೆ. ಈಗ ಈ ಟೂರ್ನಿಯಲ್ಲಿ ಕೇವಲ ಎಂಟು ತಂಡಗಳು ಮಾತ್ರ ಉಳಿದಿವೆ. ಈಗ ಗೆದ್ದ ತಂಡಗಳು ಸೆಮಿಫೈನಲ್ ತಲುಪಲಿವೆ. ಇದೇ ವೇಳೆ, ಸೋತ ನಾಲ್ಕು ತಂಡಗಳ ಪಯಣ ಈ ಟೂರ್ನಿಯಲ್ಲಿ ಕೊನೆಗೊಳ್ಳಲಿದೆ.
ಎಂಟು ತಂಡಗಳ ವಿಶೇಷತೆ:
ಅರ್ಜೆಂಟೀನಾ: ಅರ್ಜೆಂಟೀನಾ ತಂಡ ಈ ಬಾರಿಯ ವಿಶ್ವಕಪ್‌ನ ಅತ್ಯಂತ ನೆಚ್ಚಿನ ತಂಡವಾಗಿದೆ. ಅರ್ಜೆಂಟೀನಾ ತಂಡವು ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಜಯಗಳಿಸುವ ಮೂಲಕ ಕ್ವಾರ್ಟರ್-ಫೈನಲ್ ಟಿಕೆಟ್ ಅನ್ನು ಖಚಿತಪಡಿಸಿತು. ಕಳೆದ ವಿಶ್ವಕಪ್‌ನಿಂದ ನಾಯಕ ಲಿಯೋನೆಲ್ ಮೆಸ್ಸಿ ಅವರ ಪ್ರದರ್ಶನಕ್ಕೆ ಹೆಚ್ಚು ಅಭಿಮಾನಿಗಳಿದ್ದಾರೆ. ಮೆಸ್ಸಿ ಈ ವಿಶ್ವಕಪ್‌ನಲ್ಲಿ ಇದುವರೆಗೆ ಮೂರು ಗೋಲುಗಳನ್ನು ಗಳಿಸಿದ್ದಾರೆ. ಮೆಸ್ಸಿಯನ್ನು ಹೊರತುಪಡಿಸಿ, ಅರ್ಜೆಂಟೀನಾ ತಂಡವು ಅಲೆಕ್ಸಿಸ್ ಮೆಕ್‌ಅಲಿಸ್ಟರ್, ಎಂಜೊ ಫೆರ್ನಾಂಡಿಸ್ ಮತ್ತು ಜೂಲಿಯನ್ ಅಲ್ವಾರೆಜ್ ಅವರಂತಹ ಆಟಗಾರರನ್ನು ಹೊಂದಿದೆ. ಅವರ ಮೇಲು ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಯನ್ನು ಇಟ್ಟಿದ್ದಾರೆ.
ಬ್ರೆಜಿಲ್: ಕ್ವಾರ್ಟರ್ ಫೈನಲ್‌ನ ಮೊದಲ ಪಂದ್ಯ ಇಂದು ನಡೆಯಲಿದೆ. ಇದರಲ್ಲಿ ಕ್ರೊವೇಷಿಯಾ ಮತ್ತು ಬ್ರೆಜಿಲ್ ತಂಡಗಳು ಸೆಣಸಲಿವೆ. ಬ್ರೆಜಿಲ್ ತಂಡವು ನೇಮರ್, ರಿಚರ್ಡ್ಸನ್ ಮತ್ತು ವಿನಿಸಿಯಸ್ ಜೂನಿಯರ್ ಅವರಂತಹ ಗೋಲ್ಗಳಿಸುವ ಸ್ಟಾರ್ ಆಟಗಾರರಾಗಿದ್ದಾರೆ. ಫಿಫಾ ವಿಶ್ವಕಪ್‌ನ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬ್ರೆಜಿಲ್ 4-1 ಗೋಲುಗಳಿಂದ ದಕ್ಷಿಣ ಕೊರಿಯಾವನ್ನು ಸೋಲಿಸಿತು.
ನಾಲ್ಕು ಗೋಲುಗಳನ್ನು ಮೊದಲಾರ್ಧದಲ್ಲೇ ಬ್ರೆಜಿಲ್ ಗಳಿಸಿತು. ಮೊದಲಾರ್ಧದಲ್ಲಿ ಬ್ರೆಜಿಲ್ ಎರಡನೇ ಬಾರಿಗೆ ನಾಲ್ಕು ಗೋಲುಗಳನ್ನು ಗಳಿಸಿದ ದಾಖಲೆ ಮಾಡಿತು. ಇದಕ್ಕೂ ಮುನ್ನ ಬ್ರೆಜಿಲ್ 1954ರಲ್ಲಿ ಮೆಕ್ಸಿಕೊ ವಿರುದ್ಧ ಈ ಸಾಧನೆ ಮಾಡಿತ್ತು.
ಕ್ರೊಯೇಷಿಯಾ: ಕಳೆದ ಫಿಫಾ ವಿಶ್ವಕಪ್‌ನ ರನ್ನರ್ ಅಪ್ ಕ್ರೊಯೇಷಿಯಾ ಇಂದು ಬ್ರೆಜಿಲ್ನೊಂದಿಗೆ ಸೆಣಸುತ್ತಿದೆ. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲ್ ಗಳಿಸಿ ಜಪಾನ್ ತಂಡವನ್ನು ಸೋಲಿಸಿತು. ತಂಡದ ಸ್ಟಾರ್ ಆಟಗಾರ ಲೂಕಾ ಮಾಡ್ರಿಕ್ ಗೋಲ್ ಗಳಿಸುವ ಒತ್ತಡದಲ್ಲಿದ್ದಾರೆ. ಅವರಿಗೆ ಇವಾನ್ ಪೆರಿಸಿಕ್ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ಕ್ರೊವೇಷಿಯಾ ತಂಡ 2018ರ ಫೈನಲ್ ತಲುಪಿದ ತಂಡದಂತೆ ಆಟವನ್ನು ಗೆಲ್ಲುತ್ತಾ ಬಂದಿದೆ. ಈ ಬಾರಿಯೂ ಫೈನಲ್ ಏರುತ್ತಾ ಎಂಬ ಕುತೂಹಲ ಇದೆ.
ಇಂಗ್ಲೆಂಡ್: ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊನೆಯ ಪಂದ್ಯ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ನಡೆಯಲಿದೆ. ಶನಿವಾರ ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. 1966ರ ನಂತರ ಟ್ರೋಫಿ ಗೆಲ್ಲುವ ಅವಕಾಶವನ್ನು ಇಂಗ್ಲೆಂಡ್ ನಿರ್ಮಿಸಿಕೊಂಡಿದೆ. ಕೊನೆಯ-16 ರಲ್ಲಿ ಸೆನೆಗಲ್ ಅನ್ನು ಸೋಲಿಸುವ ಮೂಲಕ ತಂಡವು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್, ಜೋರ್ಡಾನ್ ಹೆಂಡರ್ಸನ್, ಬುಕಾಯೊ ಸಕಾ ಮತ್ತು ಫಿಲ್ ಫೋಡೆನ್ ಸ್ಥಿರವಾಗಿ ಆಡುತ್ತಿದ್ದಾರೆ.