ಅಲ್ ರಯಾನ್(ಕತಾರ್):ಫಿಫಾ ವಿಶ್ವಕಪ್ 2022ರ ಪಂದ್ಯಾವಳಿಯಲ್ಲಿಟ್ಯುನೀಶಿಯಾ ವಿರುದ್ಧ 1-0 ಗೋಲುಗಳಿಂದ ಸೋಲು ಅನುಭವಿಸಿದ ಹಾಲಿ ಚಾಂಪಿಯನ್ ಫ್ರಾನ್ಸ್ ಮುಖಭಂಗ ಅನುಭವಿಸಿತು. ಆದರೆ, ಫ್ರಾನ್ಸ್ ಮೊದಲೆರಡು ಪಂದ್ಯದಲ್ಲಿ ಜಯಗಳಿಸಿ 6 ಗೋಲುಗಳಿಂದ ಡಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಇನ್ನೂ ಒಂದು ಪಂದ್ಯ ಉಳಿದಿರುವಾಗಲೇ ನಾಕೌಟ್ ಹಂತ ಪ್ರವೇಶಿಸಿದೆ. ಹಾಗಾಗಿ, ಈ ಸೋಲಿನ ಬಗ್ಗೆ ತಂಡಕ್ಕೆ ಹೆಚ್ಚು ತಲೆನೋವಿಲ್ಲ.
ಹಾಲಿ ಚಾಂಪಿಯನ್ ಫ್ರಾನ್ಸ್‌ಗೆ ಟ್ಯುನೀಶಿಯಾ ಗುದ್ದು! ಫಲ ನೀಡದ ಗೆಲುವು
ಟ್ಯುನೀಶಿಯಾ ವಿರುದ್ಧ 1-0 ಗೋಲುಗಳಿಂದ ಸೋತ ಹಾಲಿ ಚಾಂಪಿಯನ್ ಫ್ರಾನ್ಸ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಘಾತಕ್ಕೊಳಗಾಯಿತು. ಆದರೂ ನಾಕೌಟ್ ಹಂತದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಕಾರಣಕ್ಕೆ ತಂಡ ನಿರಾಳವಾಗಿದೆ.
ಫ್ರಾನ್ಸ್ ವಿರುದ್ದ 1 0 ಅಂತರದಲ್ಲಿ ಗೆದ್ದ ಟುನೀಶಿಯಾ
ಇತ್ತ ಗೆಲುವು ತನ್ನದಾಗಿಸಿಕೊಂಡರೂ ಟ್ಯುನೀಶಿಯಾ ಗ್ರೂಪ್ ಹಂತದಲ್ಲೇ ಟೂರ್ನಿಯಿಂದ ಹೊರ ಬಿದ್ದಿದೆ. ಟ್ಯುನೀಶಿಯಾ ಮತ್ತು ಫ್ರಾನ್ಸ್ ಆಕರ್ಷಕ ಆಟ ಆಭಿಮಾನಿಗಳನ್ನು ಮುದಗೊಳಿಸಿತು. ವಹಿಬ್ ಖಾಜ್ರಿ 58ನೇ ನಿಮಿಷದಲ್ಲಿ ಗೋಲು ಗಳಿಸಿ ಟ್ಯುನೀಶಿಯಾಗೆ 1-0 ಮನ್ನಡೆ ಗಳಿಸಿಕೊಟ್ಟರು. ಈ ಮೂಲಕ ಅವರು ತಮ್ಮ 25ನೇ ಅಂತಾರಾಷ್ಟ್ರೀಯ ಗೋಲು ಸಾಧನೆಯನ್ನೂ ಮಾಡಿದರು. ಇದು ವಿಶ್ವಕಪ್‌ನಲ್ಲಿ ಟ್ಯುನೀಷಿಯಾದ ಲಭಿಸಿದ ಮೂರನೇ ವಿಜಯವಾಗಿದೆ.
ಇದನ್ನೂ ಓದಿ:ಫಿಫಾ ವಿಶ್ವಕಪ್: ಕೆನಡಾ ಹೊರದಬ್ಬಿದ ಕ್ರೊಯೇಷಿಯಾ