ಕರ್ನಾಟಕ

karnataka

ETV Bharat / sports

ಫಿಫಾ ವಿಶ್ವಕಪ್​ನಲ್ಲೂ ಧೋನಿ ಹವಾ​.. ಹೇಗಿದೆ ನೋಡಿ ಅಭಿಮಾನ - ಬ್ರೆಜಿಲ್ ಅಭಿಮಾನಿಯೊಂದಿಗೆ ಫೋಟೋಗಳಿಗೆ ಪೋಸ್

ಟೀಂ ಇಂಡಿಯಾ ಮಾಜಿ ನಾಯಕ ಧೋನಿಯ ಕ್ರೇಜ್ ಅಷ್ಟಿಷ್ಟಲ್ಲ. ಒಂದಲ್ಲ ಒಂದು ರೂಪದಲ್ಲಿ ತಮ್ಮ ಆಟದಿಂದ ಎಲ್ಲರನ್ನೂ ಆಕರ್ಷಿಸಿದ ತಲೈವಾ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಫಿಫಾ ವಿಶ್ವಕಪ್ ಪಂದ್ಯದಲ್ಲಿ ಅಭಿಮಾನಿಯೊಬ್ಬರು ಸದ್ದು ಮಾಡಿದ್ದಾರೆ.

FIFA World Cup 2022  ms dhoni fan flaunts csk jersey  csk jersey during brazil vs serbia match  ms dhoni fan in FIFA world cup  ಟೀಂ ಇಂಡಿಯಾ ಮಾಜಿ ನಾಯಕ ಧೋನಿಯ ಕ್ರೇಜ್  ಫಿಫಾ ವಿಶ್ವಕಪ್​ನಲ್ಲಿ ಧೋನಿ ಕ್ರೇಜ್​ ಬ್ರೆಜಿಲ್ ಆಟಗಾರ ರಿಚಾರ್ಲಿಸನ್ ತಮ್ಮ ಆಕರ್ಷಕ ಪ್ರದರ್ಶನ  ಬ್ರೆಜಿಲ್ ಅಭಿಮಾನಿಯೊಂದಿಗೆ ಫೋಟೋಗಳಿಗೆ ಪೋಸ್
ಫಿಫಾ ವಿಶ್ವಕಪ್​ನಲ್ಲಿ ಧೋನಿ ಕ್ರೇಜ್​ ಅಷ್ಟಿಷ್ಟಿಲ್ಲ ಬಿಡಿ..

By

Published : Nov 26, 2022, 9:24 AM IST

ದೋಹಾ:FIFA ವಿಶ್ವಕಪ್‌ನ ಭಾಗವಾಗಿ ಬ್ರೆಜಿಲ್ ಸರ್ಬಿಯಾ ವಿರುದ್ಧ 2-0 ಗೆಲುವು ದಾಖಲಿಸಿದೆ. ಬ್ರೆಜಿಲ್ ಆಟಗಾರ ರಿಚಾರ್ಲಿಸನ್ ತಮ್ಮ ಆಕರ್ಷಕ ಪ್ರದರ್ಶನದಿಂದ ಪ್ರಭಾವಿತರಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಹಿನ್ನೆಲೆಯಲ್ಲಿ ಗುರುವಾರ ದೋಹಾ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳ ದರ್ಶನವಾಯಿತು.

ಸ್ಟ್ಯಾಂಡ್‌ನಲ್ಲಿರುವ ಭಾರತೀಯ ಅಭಿಮಾನಿಯೊಬ್ಬರು ಚೆನ್ನೈ ಜೆರ್ಸಿ ಧರಿಸಿ ಪಂದ್ಯಕ್ಕೆ ಹಾಜರಾಗಿದ್ದರು. ಈ ಪಂದ್ಯದಲ್ಲಿ ಅವರು ತಮ್ಮ ಸಹ ಪ್ರೇಕ್ಷಕರೊಂದಿಗೆ ತಮ್ಮ ಗೆಲುವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಅವರು ಬ್ರೆಜಿಲ್ ಅಭಿಮಾನಿಯೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು. ಆ ವೇಳೆ ಧೋನಿ ಹೆಸರಿನ ಜೆರ್ಸಿಯನ್ನು ತೋರಿಸಿ ಅಭಿಮಾನ ತೋರಿದರು. ಇವುಗಳನ್ನು ಚೆನ್ನೈ ತಂಡ ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದೆ. ಈ ಪೋಸ್ಟ್ ಧೋನಿ ಅಭಿಮಾನಿಗಳಿಗೆ ಅತ್ಯಂತ ಮೆಚ್ಚುಗೆಯಾಗಿದೆ.

ಓದಿ:FIFA World Cup 2022: ನೆದರ್ಲೆಂಡ್ಸ್-ಈಕ್ವೆಡಾರ್ ರೋಚಕ ಪಂದ್ಯ ಡ್ರಾದಲ್ಲಿ ಅಂತ್ಯ

ABOUT THE AUTHOR

...view details