ಬರ್ಮಿಂಗ್ಹ್ಯಾಮ್:ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಈವರೆಗೆ ಒಟ್ಟು 20 ಪದಕ ಗೆದ್ದಿರುವ ಭಾರತೀಯ ಕ್ರೀಡಾಪಟುಗಳು ಇದೀಗ ಮತ್ತಷ್ಟು ಮೆಡಲ್ಸ್ ಗೆಲ್ಲುವುದು ಖಚಿತವಾಗಿದೆ. ಭಾರತದ ಕುಸ್ತಿಪಟುಗಳು ಅದ್ಭುತ ಪ್ರದರ್ಶನ ನೀಡಿದ್ದು, ದೇಶಕ್ಕಾಗಿ ಮತ್ತಷ್ಟು ಸ್ವರ್ಣ ಪದಕ ಗೆಲ್ಲುವುದರತ್ತ ದಾಪುಗಾಲು ಇಟ್ಟಿದ್ದಾರೆ.
ಪುರುಷರ 65 ಕೆಜಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಬಜರಂಗ ಪೂನಿಯಾ ಫೈನಲ್‌ಗೆ ಲಗ್ಗೆ ಹಾಕಿದ್ದು, ಗೇಮ್ಸ್ನಲ್ಲಿ ಹ್ಯಾಟ್ರಿಕ್ ಚಿನ್ನ ಗೆಲ್ಲುವ ತವಕದಲ್ಲಿದ್ದಾರೆ. ಇನ್ನೂ ದೀಪಕ್ ಪೂನಿಯಾ ಸಹ 86 ಕೆಜಿ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಹಾಕಿದ್ದು, ಚೊಚ್ಚಲ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ, 125 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸೋತಿರುವ ಮೋಹಿತ್ ಇದೀಗ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
ಇದನ್ನೂ ಓದಿ:Commonwealth Games: ಲಾಂಗ್ ಜಂಪ್ನಲ್ಲಿ ಬೆಳ್ಳಿಗೆ ಮುತ್ತಿಕ್ಕಿ ಇತಿಹಾಸ ರಚಿಸಿದ ಶ್ರೀಶಂಕರ್
ಉಳಿದಂತೆ, ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ (62 ಕೆಜಿ), ಅಂಶು ಮಲಿಕ್ (57 ಕೆಜಿ) ಫೈನಲ್‌ಗೆ ಲಗ್ಗೆ ಹಾಕಿದ್ದು, ಭಾರತಕ್ಕೆ ಪದಕ ತಂದುಕೊಡುವುದು ಫಿಕ್ಸ್ ಆಗಿದೆ. ಸೆಮೀಸ್ನಲ್ಲಿ ಸೋತ ದಿವ್ಯಾ ಕಂಚಿಗಾಗಿ ಕಣಕ್ಕಿಳಿಯಲಿದ್ದಾರೆ. ಬಾಕ್ಸಿಂಗ್ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಬಾಕ್ಸರ್ ಲವ್ಲಿನಾ ಕ್ವಾರ್ಟರ್ ಫೈನಲ್ನಲ್ಲಿ ಸೋತು ಹೊರಬಿದ್ದಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಇಲ್ಲಿಯವರೆಗೆ ಆರು ಚಿನ್ನ, ಏಳು ಬೆಳ್ಳಿ ಹಾಗೂ ಏಳು ಕಂಚು ಪಡೆದುಕೊಂಡಿದ್ದು, 20 ಪದಕ ಗೆದ್ದಿದೆ.
ಭಾರತ ಪುರುಷರ ತಂಡ 4 x 400 ಮೀಟರ್ಸ್ ರಿಲೇಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಫೈನಲ್ ಪ್ರವೇಶಿಸಿದೆ. ಮೊಹಮ್ಮದ್ ಅನಸ್, ನೋಹ್ ನಿರ್ಮಲ್, ಮೊಹಮ್ಮದ್ ಅಜ್ಮಲ್ ಮತ್ತು ಅಮೋಜ್ ಜಾಕೋಬ್ ಅವರ ಕ್ವಾರ್ಟೆಟ್ ಹೀಟ್ 2 ನಲ್ಲಿ 3:06.97 ಸಮಯದೊಂದಿಗೆ ಎರಡನೇ ಸ್ಥಾನ ಗಳಿಸಿತು.
ಟೇಬಲ್ ಟೆನಿಸ್ನಲ್ಲಿ ಭಾರತದ ಆಟಗಾರರ ಪ್ರಾಬಲ್ಯ:ಭಾವಿನಾ ಪಟೇಲ್ ಪ್ಯಾರಾ ಟೇಬಲ್ ಟೆನಿಸ್ ಫೈನಲ್ ತಲುಪಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.
ಕಳಚಿ ಬಿದ್ದ ಧ್ವನಿವರ್ದಕ:ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕುಸ್ತಿ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಚಾವಣಿಗೆ ಜೋಡಿಸಿದ್ದ ಧ್ವನಿವರ್ಧಕವೊಂದು ಕಳಚಿ ಬಿದ್ದಿದೆ. ಇದರಿಂದ ಸಂಘಟಕರು ಮುಜುಗರ ಅನುಭವಿಸಿದ್ದಾರೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೆಲಹೊತ್ತು ಕುಸ್ತಿ ಸ್ಪರ್ಧೆ ಸ್ಥಗಿತಗೊಳಿಸಲಾಗಿತ್ತು.